ಬಾಲಕೃಷ್ಣ ನಟಿಸಿರುವ `ಡಾಕು ಮಹಾರಾಜ್` ಚಿತ್ರಕ್ಕೆ ಬಾಬಿ ನಿರ್ದೇಶನ ಮಾಡಿದ್ದಾರೆ. ಪ್ರಗ್ಯಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್ ನಾಯಕಿಯರಾಗಿ, ಬಾಬಿ ಡಿಯೋಲ್ ಖಳನಾಯಕನಾಗಿ ನಟಿಸಿದ್ದಾರೆ. ನಾಗವಂಶಿ, ಸಾಯಿ ಸೌಜನ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆಂದು ಇಂದು ಭಾನುವಾರ ಅದ್ದೂರಿಯಾಗಿ ಚಿತ್ರ ಬಿಡುಗಡೆಯಾಗಿದೆ. ಆರಂಭದಿಂದಲೂ ಪಾಸಿಟಿವ್ ಟಾಕ್ ಬರ್ತಿದೆ. ಆದರೆ ಕಥೆ ಹೆಚ್ಚೇನೂ ಇಲ್ಲ ಅಂತ, ಎರಡನೇ ಭಾಗ ಸ್ವಲ್ಪ ಬೋರ್ ಅಂತ ಹೇಳ್ತಿದ್ದಾರೆ. ಆದರೆ ಬಾಲಯ್ಯ ಮಾರ್ಕ್ ಆಕ್ಷನ್, ಎಲಿವೇಷನ್ ದೃಶ್ಯಗಳು ಹೈಲೈಟ್ ಅಂತ, ಅವೇ ಸಿನಿಮಾವನ್ನು ನಿಲ್ಲಿಸಿವೆ ಅಂತ ಹೇಳ್ತಿದ್ದಾರೆ. ಒಟ್ಟಿನಲ್ಲಿ ಈ ಸಂಕ್ರಾಂತಿಗೆ ಬಾಲಯ್ಯ `ಡಾಕು ಮಹಾರಾಜ್` ಮೂಲಕ ಹಿಟ್ ಕೊಡಲಿದ್ದಾರೆ ಅಂತ ಅರ್ಥ ಆಗ್ತಿದೆ.