ಬಾಲಕೃಷ್ಣ, ರಜನಿಕಾಂತ್, ಮೋಹನ್‌ಲಾಲ್, ಶಿವರಾಜ್‌ಕುಮಾರ್ ಒಟ್ಟಿಗೆ ಸಿನಿಮಾ ಮಾಡಿದ್ರೆ ಹೇಗಿರುತ್ತೆ? ಈ ಸೂಪರ್‌ಸ್ಟಾರ್‌ಗಳನ್ನ ಒಟ್ಟಿಗೆ ನೋಡೋಕೆ ಎರಡು ಕಣ್ಣು ಸಾಲಲ್ಲ. ಈ ಮೂವರ ಕಾಂಬಿನೇಷನ್‌ನಲ್ಲಿ ಸಿನಿಮಾ ಪ್ಲಾನ್ ಆಗ್ತಿದೆಯಂತೆ. ಈ ಬಗ್ಗೆ ಸುದ್ದಿಯೊಂದು ಒಂದು ಹರಿದಾಡ್ತಿದೆ.
ರಜನಿಕಾಂತ್ ನಟಿಸಿದ್ದ 'ಜೈಲರ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ರಜನಿ ಕೆರಿಯರ್‌ನಲ್ಲೇ ಹೈಯೆಸ್ಟ್ ಕಲೆಕ್ಷನ್ ಮಾಡಿದ್ದ ಸಿನಿಮಾ ಇದು. ಈ ಸಿನಿಮಾಗೆ ಈಗ ಸೀಕ್ವೆಲ್ ಪ್ಲಾನ್ ಮಾಡ್ತಿದ್ದಾರೆ.
'ಜೈಲರ್ 2' ಸಿನಿಮಾ ಘೋಷಣೆ ಬರ್ತಿದೆ. ಸಂಕ್ರಾಂತಿಗೆ ಈ ಸಿನಿಮಾ ಘೋಷಣೆ ಆಗುತ್ತೆ ಅಂತ ಹೇಳಲಾಗ್ತಿದೆ. ಈ ಸಿನಿಮಾದಲ್ಲಿ ಬಾಲಕೃಷ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ರಜನಿಕಾಂತ್, ಮೋಹನ್‌ಲಾಲ್, ಶಿವರಾಜ್‌ಕುಮಾರ್ ಜೊತೆಗೆ ಬಾಲಕೃಷ್ಣ ಕೂಡ ಇರ್ತಾರಂತೆ.
ಬಾಲಕೃಷ್ಣ ಇದುವರೆಗೆ ಅತಿಥಿ ಪಾತ್ರಗಳನ್ನು ಮಾಡಿಲ್ಲ. ಈಗ ಮಾಡ್ತಾರಾ ಅನ್ನೋದು ಸಸ್ಪೆನ್ಸ್. ಬಾಲಕೃಷ್ಣ ಈಗ 'ಡಾಕು ಮಹಾರಾಜ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.