ನಿರ್ಮಾಪಕ ಆನಂದ್ ಪಂಡಿತ್ ದೀಪಾವಳಿ ಪಾರ್ಟಿಯಲ್ಲಿ ಬಾಲಿವುಡ್‌ ಸ್ಟಾರ್ಸ್‌ ಜಾತ್ರೆ

Published : Oct 23, 2022, 01:07 PM IST

ಬಾಲಿವುಡ್‌ ನಿರ್ಮಾಪಕ ಆನಂದ್ ಪಂಡಿತ್ (Anand Pandit) ನಿನ್ನೆ ರಾತ್ರಿ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದಾರೆ. ಈ ಅದ್ದೂರಿ ಪಾರ್ಟಿಯಲ್ಲಿ, ಬಾಲಿವುಡ್‌ಗೆ ಸಂಬಂಧಿಸಿದ ಬಹುತೇಕ ಪ್ರತಿಯೊಬ್ಬ ಸೆಲೆಬ್ರಿಟಿಗಳು ಇಲ್ಲಿಗೆ ತಲುಪಿದರು. ಅಮಿತಾಬ್‌ ಬಚ್ಚನ್‌ (Amitabh Bachchan) ಸಹ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಅಮಿತಾಭ್ ಆಗಮನದಿಂದ ಸಂಭ್ರಮ ಹೆಚ್ಚಿದ್ದು ಪ್ರತಿ ಕ್ಯಾಮರಾ ಅವರತ್ತ ತಿರುಗಿತು. ಚಿತ್ರನಿರ್ಮಾಪಕ ಆನಂದ್ ಪಂಡಿತ್ ಅವರ ದೀಪಾವಳಿ ಬಾಷ್‌ಯ ವೈರಲ್‌ ಫೋಟೋಗಳು ಇಲ್ಲಿವೆ. ಹೃತಿಕ್ ರೋಷನ್, ಕೃತಿ ಸನೋನ್, ಕೃಷ್ಣಾ ಅಭಿಷೇಕ್, ಸಿದ್ಧಾರ್ಥ್ ಮಲ್ಹೋತ್ರಾ, ಶೈಲೇಶ್ ಲೋಧಾ, ಡೈಸಿ ಶಾ ಸೇರಿದಂತೆ ಅನೇಕ ಖ್ಯಾತನಾಮರು ಆನಂದ್ ಪಂಡಿತ್ ಅವರ ದೀಪಾವಳಿಯ ಪೂರ್ವ ಬಾಷ್‌ಗೆ ಆಗಮಿಸಿದರು.

PREV
19
ನಿರ್ಮಾಪಕ ಆನಂದ್ ಪಂಡಿತ್ ದೀಪಾವಳಿ ಪಾರ್ಟಿಯಲ್ಲಿ ಬಾಲಿವುಡ್‌ ಸ್ಟಾರ್ಸ್‌ ಜಾತ್ರೆ

ದೀಪಾವಳಿ ಪಾರ್ಟಿಗೆ ಪತ್ನಿ ಕಾಜೋಲ್ ಜೊತೆ ಅಜಯ್ ದೇವಗನ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಜಯ್ ನೀಲಿ ಕುರ್ತಾ ಧರಿಸಿದ್ದರೆ, ಕಲೋಜ್ ಗುಲಾಬಿ ಬಣ್ಣದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. 

29

 ಅದೇ ಸಮಯದಲ್ಲಿ, ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಅವರೊಂದಿಗೆ ಕಾಣಿಸಿಕೊಂಡರು.ದೀಪಾವಳಿ ಪಾರ್ಟಿಯಲ್ಲಿ ಸನ್ನಿ ಲಿಯೋನ್ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ಕಿನ್ ಕಲರ್ ಲೆಹೆಂಗಾವನ್ನು ಧರಿಸಿದ್ದರು. 

39

ಆನಂದ್ ಪಂಡಿತ್ ಬಾಲಿವುಡ್ ಇಂಡಸ್ಟ್ರಿಯ ಪ್ರಸಿದ್ಧ ನಿರ್ಮಾಪಕ. ಈ ಬಾರಿ ಅವರ ದೀಪಾವಳಿ ಪಾರ್ಟಿಯಲ್ಲಿ ಸ್ಟಾರ್ ಗಳ ಜಾತ್ರೆಯೇ ನಡೆದಿದೆ. ಅಂಕಿತಾ ಲೋಖಂಡೆ ಕೂಡ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

49

ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ಖ್ಯಾತಿಯ ಶೈಲೇಶ್ ಲೋಧಾ ಕೂಡ ಈ ಸಂದರ್ಭದಲ್ಲಿ ಪತ್ನಿ ಮತ್ತು ಮಗಳೊಂದಿಗೆ ಕಾಣಿಸಿಕೊಂಡರು. ಎಲ್ಲರೂ ಕ್ಯಾಮೆರಾಮನ್‌ಗೆ ಪೋಸ್ ಕೊಟ್ಟರು.


 

59

ದೀಪಾವಳಿ ಪಾರ್ಟಿಯಲ್ಲಿ ನವವಿವಾಹಿತರಾದ ಅಲಿ ಫಜಲ್ ಮತ್ತು ರಿಚಾ ಚಡ್ಡಾ ಕೂಡ ಕಾಣಿಸಿಕೊಂಡರು. ಈ ಜೋಡಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿತ್ತು. ಅದೇ ಸಮಯದಲ್ಲಿ, ಕೃತಿ ಸನನ್ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದರು.

69

ಈ ಸಂದರ್ಭದಲ್ಲಿ ರೋನಿತ್ ರಾಯ್ ತಮ್ಮ ಪತ್ನಿಯೊಂದಿಗೆ ಕಾಣಿಸಿಕೊಂಡಿದ್ದರು. ಅದೇ ಸಮಯದಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಕೆಂಪು ಕುರ್ತಾ-ಪೈಜಾಮಾದಲ್ಲಿ ಹ್ಯಾಂಡ್‌ಸಮ್‌ ಆಗಿ ಕಾಣುತ್ತಿದ್ದರು.

79

ದೀಪಾವಳಿ ಪಾರ್ಟಿಯಲ್ಲಿ ಅಕ್ಷಯ್ ಕುಮಾರ್ ಬಿಳಿ ಕಸೂತಿ ಕುರ್ತಾ-ಪೈಜಾಮದಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಆನಂದ್ ಪಂಡಿತ್ ಅವರೊಂದಿಗೆ ಪೋಸ್ ನೀಡಿದರು.


 

89

ದೀಪಾವಳಿ ಪಾರ್ಟಿಗೆ ಬಂದಿದ್ದ ಮಾಧ್ಯಮ ಛಾಯಾಗ್ರಾಹಕರಿಗೆ ಆನಂದ್ ಪಂಡಿತ್ ಸಿಹಿ ತಿನ್ನಿಸಿದರು. ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ.

99

ಪಾರ್ಟಿಯಲ್ಲಿ ಅಮಿತಾಬ್ ಬಚ್ಚನ್ ಕೂಡ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾವಳಿ ಪಾರ್ಟಿಗೆ ಬಿಗ್ ಬಿ ಎಂಟ್ರಿ ಪಾರ್ಟಿಯ ಮೆರಗು ಹೆಚ್ಚಿಸಿತ್ತು ಜೊತೆ ಅಮಿತಾಬ್‌ ಕಂಡ ಕೊಡುತ್ತಲೇ ಆನಂದ್ ಪಂಡಿತ್ ಮುಖ ಅರಳಿತು.

Read more Photos on
click me!

Recommended Stories