ತನಗಿಂತ 13 ವರ್ಷ ಈ ಹಿರಿಯ ನಟನ ಜೊತೆ ಅನನ್ಯಾ ಪಾಂಡೆ ಡೇಟಿಂಗ್‌?

Published : Jul 13, 2022, 07:15 PM IST

ಚಂಕಿ ಪಾಂಡೆ ಪುತ್ರಿ ಹಾಗೂ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟ ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅನೇಕ ವರದಿಗಳಲ್ಲಿ ಹೇಳಲಾಗುತ್ತಿದೆ. ಆದಿತ್ಯ ಹಾಗೂ ಅನನ್ಯಾ ನಡುವಿನ ಸ್ನೇಹ ದಿನದಿಂದ ದಿನಕ್ಕೆ ಬೆಳೆದು ಪರಸ್ಪರ ಡೇಟಿಂಗ್ ಮಾಡುವ ಹಂತಕ್ಕೆ ತಲುಪಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಆದಿತ್ಯ ಅಥವಾ ಅನನ್ಯಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. 

PREV
19
ತನಗಿಂತ 13 ವರ್ಷ  ಈ ಹಿರಿಯ ನಟನ ಜೊತೆ ಅನನ್ಯಾ ಪಾಂಡೆ ಡೇಟಿಂಗ್‌?

ಚಂಕಿ ಪಾಂಡೆಯ ಮಗಳು Ananya Panday ತನಗಿಂತ 13 ವರ್ಷ  ಈ ಹಿರಿಯ  ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

29
Ananya Panday

ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಅವರ ಸಂಬಂಧವು ಈಗ ಸ್ನೇಹವನ್ನು ಮೀರಿ ಮುಂದುವರೆದಿದೆ ಮತ್ತು ಹೊಸ ಸಂಬಂಧ ಶುರುವಾಗಿರುವುದರಿಂದ ಇಬ್ಬರೂ ಮುನ್ನೆಚ್ಚರಿಕೆ ವಹಿಸುತ್ತಿದ್ದು ಇದುವರೆಗೂ ಒಟ್ಟಿಗೆ ಕಾಣಿಸಿಕೊಂಡಿಲ್ಲ ಎನ್ನಲಾಗುತ್ತಿದೆ.

39

ಅನನ್ಯಾ ಪಾಂಡೆ ಅವರು ಈ ಹಿಂದೆ ಶಾಹಿದ್ ಕಪೂರ್ ಅವರ ಕಿರಿಯ ಸಹೋದರ ಇಶಾನ್ ಖಟ್ಟರ್ ಅವರೊಂದಿಗೆ ಸಂಬಂಧ ಹೊಂದಿದ್ದರು. ತ್ತು. 'ಖಾಲಿ-ಪೀಲಿ' (2020) ಚಿತ್ರದಲ್ಲಿ ಕೆಲಸ ಮಾಡುವಾಗ ಅವರಿಬ್ಬರ ಆತ್ಮೀಯತೆ ಹೆಚ್ಚಾಯಿತು. 

49

ನಿರ್ದೇಶಕ ಮಕ್ಬೂಲ್ ಖಾನ್ ಅವರ ಖಾಲಿ ಪೀಲಿ ಚಿತ್ರದಲ್ಲಿ ಇಬ್ಬರೂ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಯಿತು.ಆದರೆ ಅನನ್ಯಾ ಮತ್ತು ಇಶಾನ್ ಸಂಬಂಧ ಮುಂದುವರಿಯಿತು. ವರದಿಗಳ ಪ್ರಕಾರ, ಇಬ್ಬರೂ ಮೂರು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡಿದ್ದಾರೆ. 

59

ಅಂದಹಾಗೆ, ದಕ್ಷಿಣ ಭಾರತದ ಚಲನಚಿತ್ರ ನಟ ವಿಜಯ್ ದೇವರಕೊಂಡ ಅವರೊಂದಿಗೆ ಅನನ್ಯಾ ನಿಕಟತೆಯ ಬಗ್ಗೆಯ ಸುದ್ದಿ ಸಹ ಹರಿದಾಡಿತ್ತು. ಅನನ್ಯಾ ವಿಜಯ್‌ ದೇವರ್‌ಕೊಂಡ ಅವರ ಜೊತೆ ಲೈಗರ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

69

ಅನನ್ಯಾ ಪಾಂಡೆ 2019 ರಲ್ಲಿ ಬಿಡುಗಡೆಯಾದ ಧರ್ಮ ಪ್ರೊಡಕ್ಷನ್ಸ್ ಚಿತ್ರ 'ಸ್ಟೂಡೆಂಟ್ ಆಫ್ ದಿ ಇಯರ್ 2' ಮೂಲಕ  ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ಅವರು 'ಪತಿ ಪಟ್ನಿ ಔರ್ ವೋ', 'ಖಾಲಿ ಪೀಲಿ', 'ಘೆಹ್ರಾಯನ್' ಚಿತ್ರಗಳಲ್ಲಿ ಕಾಣಿಸಿಕೊಂಡರು. 

79

ಅವರ ಮುಂದಿನ ಚಿತ್ರ 'ಲೈಗರ್', ಇದರಲ್ಲಿ ಅವರ ಸಹ-ನಟ ವಿಜಯ್ ದೇವರಕೊಂಡ. ಇದಲ್ಲದೆ, ಅವರು 'ಖೋ ಗಯೇ ಹಮ್ ಕಹಾನ್' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಆದರ್ಶ್ ಗೌರವ್ ಮತ್ತು ಸಿದ್ಧಾಂತ್ ಚತುರ್ವೇದಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

89

ಆದಿತ್ಯ ರಾಯ್ ಕಪೂರ್ ಅವರ ಇತ್ತೀಚಿನ ಬಿಡುಗಡೆ 'ರಾಷ್ಟ್ರ ಕವಚ ಓಂ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 2009 ರಲ್ಲಿ 'ಲಂಡನ್ ಡ್ರೀಮ್ಸ್' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಆದಿತ್ಯ ರಾಯ್ ಕಪೂರ್, 'ಆಶಿಕಿ 2' ನಿಂದ ಮನ್ನಣೆ ಪಡೆದರು.

99

ಆದಿತ್ಯ ರಾಯ್ ಕಪೂರ್ 'ದಾವತ್-ಎ-ಇಷ್ಕ್', 'ಡಿಯರ್ ಜಿಂದಗಿ', 'ಓಕೆ ಜಾನು', 'ವೆಲ್ ಕಮ್ ಟು ನ್ಯೂಯಾರ್ಕ್', 'ಕಳಂಕ್', 'ಸಡಕ್ 2' ಮತ್ತು 'ಲುಡೋ' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಮುಂಬರುವ ಚಿತ್ರಗಳಲ್ಲಿ 'ಗುಮ್ರಾ' ಸೇರಿದೆ, ಅದರ ಬಿಡುಗಡೆಯ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories