USA Priyanka Chopra: ಅಮೆರಿಕಾ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

Published : Jul 04, 2026, 03:44 PM IST

ಅಮೆರಿಕಾದಲ್ಲಿ ಜುಲೈ 4ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರಿಯಾಂಕಾ ಹಂಚಿಕೊಂಡಿರುವ ವೀಡಿಯೋದಲ್ಲಿ, ದೊಡ್ಡ ಗಾಜಿನ ಕಿಟಕಿಯ ಮೂಲಕ ಆಕಾಶದಲ್ಲಿ ಸಿಡಿಯುತ್ತಿರುವ ವರ್ಣರಂಜಿತ ಪಟಾಕಿಗಳು ಕಾಣಿಸುತ್ತವೆ.

PREV
17

ಬೆಡ್ ಮೇಲಿಂದಲೇ ಪಟಾಕಿ ಸಂಭ್ರಮ ಸವಿದ ಪ್ರಿಯಾಂಕಾ ಚೋಪ್ರಾ: ಅಮೆರಿಕಾದಲ್ಲಿ 'ಜುಲೈ 4'ರ ಸಡಗರ ಹೇಗಿದೆ?

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ಮಿಂಚುತ್ತಿರುವ 'ದೇಸಿ ಗರ್ಲ್' ಖ್ಯಾತಿಯ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ (Priyanak Chopra) ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಅಮೆರಿಕಾದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ಅವರು, ತಮ್ಮ ಮನೆಯ ಬೆಡ್ ರೂಂನಿಂದಲೇ ಪಟಾಕಿಗಳ ವೈಭವವನ್ನು ವೀಕ್ಷಿಸುತ್ತಿರುವ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಬಣ್ಣ ಬಣ್ಣದ ಪಟಾಕಿಗಳ ಬೆಳಕು, ಶಾಂತವಾದ ರಾತ್ರಿ, ಮಲಗಿದಲ್ಲೇ ಕಿಟಕಿಯ ಮೂಲಕ ಕಂಡುಬರುವ ಅದ್ಭುತ ನೋಟ ನಟಿ ಪ್ರಿಯಾಂಕಾ ಚೋಪ್ರಾ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

27

ಪ್ರಿಯಾಂಕಾ ಸಂಭ್ರಮದ ಝಲಕ್:

ಅಮೆರಿಕಾದಲ್ಲಿ ಜುಲೈ 4ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂಭ್ರಮಕ್ಕೂ ಮುನ್ನವೇ ಅಲ್ಲಿ ಪಟಾಕಿಗಳ ಪ್ರದರ್ಶನ ಆರಂಭವಾಗಿದೆ. ಪ್ರಿಯಾಂಕಾ ಹಂಚಿಕೊಂಡಿರುವ ವೀಡಿಯೋದಲ್ಲಿ, ದೊಡ್ಡ ಗಾಜಿನ ಕಿಟಕಿಯ ಮೂಲಕ ಆಕಾಶದಲ್ಲಿ ಸಿಡಿಯುತ್ತಿರುವ ವರ್ಣರಂಜಿತ ಪಟಾಕಿಗಳು ಕಾಣಿಸುತ್ತವೆ. ಇದಕ್ಕೆ "Happy almost 4th from bed" (ಹಾಸಿಗೆಯಿಂದಲೇ 4ನೇ ದಿನಾಂಕದ ಶುಭಾಶಯಗಳು) ಎಂಬ ಅಡಿಬರಹ ನೀಡುವ ಮೂಲಕ ತಾವು ಆರಾಮವಾಗಿ ಮಲಗಿಕೊಂಡೇ ಈ ಸೌಂದರ್ಯವನ್ನು ಸವಿಯುತ್ತಿರುವುದಾಗಿ ತಿಳಿಸಿದ್ದಾರೆ.

37

ಅಮೆರಿಕಾದೊಂದಿಗೆ ಪ್ರಿಯಾಂಕಾ ಹಳೆಯ ಸಂಬಂಧ:

ಪ್ರಿಯಾಂಕಾಗೆ ಅಮೆರಿಕಾ ದೇಶ ಹೊಸದೇನಲ್ಲ. ಅವರು ಮದುವೆಯಾದ ಮೇಲೆ ಮಾತ್ರ ಅಲ್ಲಿಗೆ ಹೋಗಿದ್ದಾರೆ ಎಂದುಕೊಂಡರೆ ನಿಮ್ಮ ಊಹೆ ತಮ್ಮು. ಪ್ರಿಯಾಂಕಾ ಚೋಪ್ರಾ ವರು ತಮ್ಮ ಬಾಲ್ಯದ ದಿನಗಳನ್ನು ಅಲ್ಲಿಯೇ ಕಳೆದಿದ್ದಾರೆ. ಭಾರತಕ್ಕೆ ಮರಳುವ ಮೊದಲು ಅವರು ಅಮೆರಿಕಾದಲ್ಲಿ ತಮ್ಮ ಸಂಬಂಧಿಕರ ಜೊತೆ ವಾಸವಾಗಿದ್ದರು. ಮ್ಯಾಸಚೂಸೆಟ್ಸ್, ಅಯೋವಾ ಮತ್ತು ನ್ಯೂಯಾರ್ಕ್‌ನಂತಹ ನಗರಗಳಲ್ಲಿ ಶಾಲಾ ಶಿಕ್ಷಣವನ್ನು ಪಡೆದಿದ್ದರು. ಈ ಅನುಭವಗಳು ಅವರಿಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಹತ್ತಿರದಿಂದ ತಿಳಿಯಲು ನೆರವಾಗಿದ್ದವು.

47

ಶೂನ್ಯದಿಂದ ಹಾಲಿವುಡ್‌ನಲ್ಲಿ ಆರಂಭಿಸಿದ ಜರ್ನಿ:

ಭಾರತದಲ್ಲಿ ಸೂಪರ್ ಸ್ಟಾರ್ ಆಗಿ ಅಮೆರಿಕಾಗೆ ಹೋಗಿದ್ದರೂ ಕೂಡ, ನಟಿ ಪ್ರಿಯಾಂಕಾ ಹಾಲಿವುಡ್‌ಗೆ ಕಾಲಿಟ್ಟಾಗ ಯಾವುದೇ ವಿಶೇಷ ಸೌಲಭ್ಯಗಳನ್ನು ನಿರೀಕ್ಷಿಸಿರಲಿಲ್ಲ. ಒಬ್ಬ ಸಾಮಾನ್ಯ ನಟಿಯಂತೆ ಆಡಿಷನ್‌ಗಳಲ್ಲಿ ಭಾಗವಹಿಸಿ, ಪೋರ್ಟ್‌ಫೋಲಿಯೋ ಹಿಡಿದು ನಿರ್ದೇಶಕರನ್ನು ಭೇಟಿ ಮಾಡುತ್ತಿದ್ದರು. "ನಾನು ಭಾರತದಲ್ಲಿ ದೊಡ್ಡ ಸ್ಟಾರ್ ಎನ್ನುವುದಕ್ಕಿಂತ ಹೆಚ್ಚಾಗಿ, ಅಲ್ಲಿ ನನ್ನ ಪ್ರತಿಭೆಯನ್ನು ಸಾಬೀತುಪಡಿಸಲು ಬಯಸಿದ್ದೆ" ಎಂದು ಅವರು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರು 'ದಿ ಬ್ಲಫ್' ಎಂಬ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು.

57

ವೃತ್ತಿ ಮತ್ತು ವೈಯಕ್ತಿಕ ಜೀವನದ ಸಮತೋಲನ:

ನಟನೆಯ ಜೊತೆಗೆ ಪ್ರಿಯಾಂಕಾ ತಮ್ಮ ಕುಟುಂಬಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೇರಿ ಜೊತೆಗಿನ ಸುಂದರ ಕ್ಷಣಗಳನ್ನು ಅವರು ಆಗಾಗ ತಮ್ಮ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಾರೆ. ಸದ್ಯ ಅಮೆರಿಕಾದಲ್ಲೇ ನೆಲೆಸಿರುವ ಪ್ರಿಯಾಂಕಾ, ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾರತದ ರಾಯಭಾರಿಯಂತೆ ಕಾಣಿಸಿಕೊಳ್ಳುತ್ತಾರೆ.

67

ಎಸ್.ಎಸ್. ರಾಜಮೌಳಿ ಅವರ 'ವಾರಣಾಸಿ' ಮೂಲಕ ವಾಪಸ್:

ಬಹಳ ದಿನಗಳ ನಂತರ ಪ್ರಿಯಾಂಕಾ ಚೋಪ್ರಾ ಮತ್ತೆ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅದು ಕೂಡ ವಿಶ್ವವಿಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಮೂಲಕ! ಈ ಸುದ್ದಿ ಕೇಳಿ ಭಾರತೀಯ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ. ಹಾಲಿವುಡ್ ಅನುಭವ ಮತ್ತು ರಾಜಮೌಳಿ ಅವರ ಅದ್ಭುತ ಮೇಕಿಂಗ್ ಸೇರಿ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆಯುವುದರಲ್ಲಿ ಅನುಮಾನವಿಲ್ಲ.

77

ಒಟ್ಟಿನಲ್ಲಿ, ಪ್ರಿಯಾಂಕಾ ಚೋಪ್ರಾ ಅವರು ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಎರಡನ್ನೂ ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಾ, ಜಾಗತಿಕ ಮಟ್ಟದಲ್ಲಿ ಭಾರತದ ಹೆಮ್ಮೆಯ ತಾರೆಯಾಗಿ ಮಿಂಚುತ್ತಿದ್ದಾರೆ. ಸದ್ಯ ಅವರು ಅಮೆರಿಕಾದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದು, ಅದನ್ನೂ ಕೂಡ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅದೀಗ ಶೇರ್, ವೈರಲ್ ಆಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories