ಹಣೆ ಮೇಲೆ ಕುಂಕುಮ, ಮೈಮೇಲೆ ಕೇಸರಿ ವಸ್ತ್ರ… ಕಾಮಾಕ್ಯ ಮಂದಿರದಲ್ಲಿ ಉರ್ಫಿ ಜಾವೇದ್

Published : Jul 02, 2026, 06:04 PM IST

Urfi Javed: ತಮ್ಮ ವಿಚಿತ್ರ ಫ್ಯಾಶನ್ ಸೆನ್ಸ್ ಗೆ ಹೆಸರುವಾಸಿಯಾಗಿರುವ ಇನ್ಫ್ಲ್ಯೂಯನ್ಸರ್ ಮತ್ತು ನಟಿ ಉರ್ಫಿ ಜಾವೇದ್ ಇತ್ತೀಚೆಗೆ ಗುವಾಹಟಿಯಲ್ಲಿರುವ ಪ್ರಸಿದ್ಧ ಕಾಮಾಖ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

PREV
16
ಉರ್ಫಿ ಜಾವೇದ್

ತಮ್ಮ ವಿಚಿತ್ರ ಫ್ಯಾಷನ್ ಸೆನ್ಸ್ ನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ನಟಿ ಹಾಗೂ ಇನ್ಫ್ಲ್ಯೂಯೆನ್ಸರ್ ಉರ್ಫಿ ಜಾವೇದ್ ಇದೀಗ ಸಾಂಪ್ರದಾಯಿಕ ಉಡುಗೆ ತೊಟ್ಟು ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ಮಂದಿರಕ್ಕೆ ತೆರಳುವ ಮೂಲಕ ಸುದ್ದಿಯಲ್ಲಿದ್ದಾರೆ.

26
ಕಾಮಾಕ್ಯ ಮಂದಿರದಲ್ಲಿ ನಟಿ

ಉರ್ಫಿ ಜಾವೇದ್ ಹೆಚ್ಚಾಗಿ ತುಂಡುಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಮೈ ಪೂರ್ತಿ ಬಟ್ಟೆ ಹಾಕಿದ್ರೆ ನನಗೆ ಅಲರ್ಜಿ ಆಗುತ್ತೆ ಎಂದಿದ್ದರು. ಇದೀಗ ಹಣೆ ಮೇಲೆ ಕುಂಕುಮ, ಕೇಸರಿ ಶಾಲು ಧರಿಸಿ ಕಾಮಾಖ್ಯ ಮಂದಿರದಲ್ಲಿ ಕೈಮುಗಿದು ನಿಂತಿರುವ ಉರ್ಫಿಯನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದನ್ನು ನಂಬೋದಕ್ಕೇನೆ ಸಾಧ್ಯ ಆಗುತ್ತಿಲ್ಲ ಎನ್ನುತ್ತಿದ್ದಾರೆ ಜನ.

36
ಕುಂಕುಮ, ಕೇಸರಿ ಶಾಲು

ಕಾಮಾಖ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಉರ್ಫಿ ಜಾವೇದ್ ಹಲವಾರು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ, ಅವರು ಸಲ್ವಾರ್-ಸೂಟ್ ಧರಿಸಿ ತಲೆಯನ್ನು ಮುಚ್ಚಿಕೊಂಡು ದುಪಟ್ಟಾ ಧರಿಸಿರುವುದು ಕಂಡುಬಂದಿದೆ.

46
ಧರ್ಮ ಬದಲಾವಣೆಯ ಕಾಂಟ್ರವರ್ಸಿ

ಉರ್ಫಿ ಮುಸ್ಲಿಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ ಮತ್ತು ಉರ್ಫಿ ಜಾವೇದ್ ಅವರ ಹೆಸರನ್ನು ರೀಟಾ ಭಾರದ್ವಾಜ್ ಎಂದು ಬದಲಾಯಿಸಿದ್ದಾರೆ ಮತ್ತು ಹಿಂದೂ ಬ್ರಾಹ್ಮಣರಾಗಿದ್ದಾರೆ ಎನ್ನುವ ಕಾಂಟ್ರವರ್ಸಿ ಹರಿದಾಡುತ್ತಿರುವ ಸಮಯದಲ್ಲೇ ನಟಿ ‘’ನಾನು ಗುವಾಹಟಿಯಲ್ಲಿರುವ ಕಾಮಾಖ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ’ ಎಂದು ಟೈಟಲ್ ಕೊಟ್ಟು ಫೋಟೊ ಪೋಸ್ಟ್ ಮಾಡಿದ್ದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.

56
ಕಾಮಾಕ್ಯ ದೇವಿಗೆ ಪ್ರಾರ್ಥನೆ

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಡ್ರೆಸ್ ನಿಂದಾಗಿ ಟ್ರೋಲ್’ಗೆ ಒಳಗಾಗುತ್ತಿರುವ ಉರ್ಫಿ, ಸಾಂಪ್ರದಾಯಿಕ ಅವತಾರದಲ್ಲಿ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು, ಹಸಿರು ಸೂಟ್ ಮತ್ತು ಗುಲಾಬಿ ಬಣ್ಣದ ದುಪಟ್ಟಾ ಧರಿಸಿ, ಹಣೆಯ ಮೇಲೆ ತಿಲಕ ಮತ್ತು ತಲೆಯ ಮೇಲೆ ಓಂ ಬರೆದಿರುವ ದುಪ್ಪಟ್ಟಾ ಧರಿಸಿ, ಭಗವತಿ ದೇವಿಗೆ ಪ್ರಾರ್ಥನೆ ಸಲ್ಲಿಸುವ ಫೋಟೊ ವೈರಲ್ ಆಗುತ್ತಿದೆ.

66
ಉರ್ಫಿ ಜಾವೇದ್ ವೃತ್ತಿಜೀವನ ಹೇಗಿದೆ?

ಇತ್ತೀಚೆಗೆ, ಉರ್ಫಿ ಜಾವೇದ್ ‘ಲಾಕ್ ಅಪ್ 2’ ನ ಒಂದು ಸಂಚಿಕೆಯಲ್ಲಿ ಅತಿಥಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ಅವರು ‘Split villa’ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಹಲವಾರು ರಿಯಾಲಿಟಿ ಶೋಗಳ ಭಾಗವಾಗಿದ್ದಾರೆ ಮತ್ತು ‘ಫಾಲೋ ಕರ್ ಲೋ ಯಾರ್’ ಎಂಬ ತಮ್ಮ ಸ್ವಂತ ಜೀವನವನ್ನು ಆಧರಿಸಿದ ರಿಯಾಲಿಟಿ ಶೋನಲ್ಲಿಯೂ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories