ಮೊದಲ ಬಾರಿ ಮಗಳು ಮಾಲ್ತಿ ಮುಖ ರಿವೀಲ್ ಮಾಡಿದ ಪ್ರಿಯಾಂಕಾ ಚೋಪ್ರಾ; ಫೋಟೋ ವೈರಲ್

First Published | Jan 31, 2023, 10:11 AM IST

ಮಗಳ ಮುಖ ಕಾಣುವ ವಿಡಿಯೋ ರಿವೀಲ್ ಮಾಡಿದ ಪ್ರಿಯಾಂಕಾ ಚೋಪ್ರಾ. ವೈರಲ್ ಆಯ್ತು ಮಾಲ್ತಿ ಫೋಟೋ, ಸೇಮ್ ಡ್ಯಾಡಿ ಎಂದ ನೆಟ್ಟಿಗರು..... 
 

ಬಾಲಿವುಡ್ ಬೋಲ್ಡ್‌ ನಟಿ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಮುಖ ರಿವೀಲ್ ಮಾಡಿದ್ದಾರೆ. 
 

ಹಾಲಿವುಡ್‌ ವಾಕ್‌ ಆಫ್‌ ಫೇಮ್‌ ಸ್ಟಾರ್ ಕಾರ್ಯಕ್ರಮದಲ್ಲಿ ಪತಿ ನಿಕ್ ಜೋನಾಸ್‌ ಮತ್ತು ಸಹೋದರರ ಜೊತೆ ಪಿಗ್ಗಿ ರೆಡ್‌ ಕಾರ್ಪೆಟ್ ವಾಕ್ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಮೊದಲ ಸಾಲಿನಲ್ಲಿ ಕಾಣಿಸಿಕೊಂಡಿದ್ದು ಮಡಿಲಿನಲ್ಲಿ ಮಗಳಿದ್ದಳು. 

Tap to resize

ಕ್ರೀಮ್‌ ಬಣ್ಣದ ಔಟ್‌ ಫಿಟ್‌ಗೆ ಮ್ಯಾಚ್ ಆಗುವ ಹೇರ್‌ಬ್ಯಾಂಡ್‌ನಲ್ಲಿ ಮಾಲ್ತಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಸಣ್ಣ ಕಿವಿ ಓಲೆ ನೆಟ್ಟಿಗರ ಗಮನ ಸೆಳೆದಿದೆ.

 ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಪ್ರಿಯಾಂಕಾ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಗಳ ಮುಖವನ್ನು ಸ್ಪಷ್ಟವಾಗಿ ರಿವೀಲ್ ಮಾಡಿದ್ದಾರೆ. 

'ತುಂಬಾ ಹೆಮ್ಮೆಯಾಗುತ್ತಿದೆ ನಿಕ್. ಶುಭವಾಗಲಿ' ಎಂದು ಬರೆದುಕೊಂಡು ನಿಕ್‌ ಸಹೋದರರು ಹಿಡಿದುಕೊಂಡು ನಿಂತಿರುವ ನಕ್ಷತ್ರಗಳ ಪೋಟೋವನ್ನು ಅಪ್ಲೋಡ್ ಮಾಡಿದ್ದಾರೆ. 
 

ವಿಡಿಯೋದಲ್ಲಿ ಮಗಳನ್ನು ಹಿಡಿದುಕೊಂಡು ಪ್ರಿಯಾಂಕಾ ನಿಕ್ ಹೆಸರು ಕೂಗುತ್ತಿದ್ದಾರೆ. 'ನನ್ನ ಸುಂದರವಾದ ಪತ್ನಿ. ತುಂಬಾ ಕಾಮ್ ಆಗಿರುವ ಕ್ರೇಜಿ ನೀನು, ಸ್ಟ್ರಾಮ್‌ ಅಲಿರುವ ರಾಕ್, ನಿನ್ನನ್ನು ಮದುವೆಯಾಗಿರುವುದಕ್ಕೆ ಖುಷಿಯಾಗಿರುವೆ' ಎಂದು ನಿಕ್ ಕಾಮೆಂಟ್ ಮಾಡಿದ್ದಾರೆ. 

'ನೀನು ಸಿಕ್ಕಿರುವುದೇ ನನ್ನ ಗ್ರೇಟ್ ಫಿಟ್‌. ನಿನ್ನ ಜೊತೆಯಾಗಿ ನಮ್ಮ ಮಗಳಿಗೆ ತಂದೆಯಾಗಿರುವುದಕ್ಕೆ ಖುಷಿಯಾಗುತ್ತಿದೆ. ಮಾಲ್ತಿನ ಮುದ್ದಾಡಲು ಮನೆಗೆ ಬರಲು ಕಾಯುತ್ತಿರುವೆ' ಎಂದಿದ್ದಾರೆ. 
 

Latest Videos

click me!