ಬಹಳ ಸಮಯದ ನಂತರ ಪತಿ ಜೊತೆ ಸಮಯ ಕಳೆಯುತ್ತಿರುವ ಪ್ರಿಯಾಂಕಾ!

Suvarna News   | Asianet News
Published : Aug 20, 2021, 05:04 PM IST

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಈ ವರ್ಷ ಜೊತೆಯಾಗಿ ಇರಲು ಸಾಧ್ಯವಾಗಲಿಲ್ಲ. ಪ್ರಿಯಾಂಕಾ ತಮ್ಮ ಕೆಲಸದ ಕಾರಣದಿಂದ ಯುಕೆಯಲ್ಲಿದ್ದರೆ, ನಿಕ್ ಲಾಸ್ ಏಂಜಲೀಸ್‌ನಲ್ಲಿದ್ದರು. ಕೆಲವು ದಿನಗಳ ಹಿಂದೆ, ಇಬ್ಬರೂ ತಮ್ಮ ತಮ್ಮ ಕೆಲಸವನ್ನು ಮುಗಿಸಿ, ಪರಸ್ಪರ ಭೇಟಿಯಾಗಿದ್ದಾರೆ ಮತ್ತು ಇಬ್ಬರೂ ಪರಸ್ಪರ ಹೆಚ್ಚು ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಈ ದಿನಗಳಲ್ಲಿ ಇಬ್ಬರೂ ಲಂಡನ್‌ನಲ್ಲಿ ಕೈ ಹಿಡಿದು ಓಡಾಡುತ್ತಾ, ರೆಸ್ಟೋರೆಂಟ್‌ಗಳಲ್ಲಿ ಲಂಚ್‌ ಡಿನ್ನರ್‌ಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಸಮಯದ ಪ್ರಿಯಾಂಕಾ-ನಿಕ್ ಅವರ ಕೆಲವು ರೋಮ್ಯಾಂಟಿಕ್ ಫೋಟೋಗಳು ವೈರಲ್‌ ಆಗಿವೆ.

PREV
17
ಬಹಳ ಸಮಯದ ನಂತರ ಪತಿ ಜೊತೆ ಸಮಯ ಕಳೆಯುತ್ತಿರುವ ಪ್ರಿಯಾಂಕಾ!

ಫೋಟೋಗಳಲ್ಲಿ ಪ್ರಿಯಾಂಕಾ-ನಿಕ್ ಪರಸ್ಪರ ಸಮಯ ಕಳೆಯುವುದನ್ನು ಕಾಣಬಹುದು. ನಿಕ್ ಧರಿಸಿರುವ ಬಿಳಿ ಟೀ ಶರ್ಟ್ ಎಲ್ಲರ ಗಮನ ಸೆಳೆಯಿತು. ಟಿ -ಶರ್ಟ್ ಮೇಲೆ 'ರಾಕ್ 33' ಎಂದು ಬರೆಯಲಾಗಿದೆ. 

27

ಇತ್ತೀಚೆಗೆ ಪ್ರಿಯಾಂಕಾ ಅವರನ್ನು ಜಿಯೋ ಮಾಮಿ ಚಲನಚಿತ್ರೋತ್ಸವದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನಿಕ್ ಕೆಟ್ಟ ಮೂಡ್‌ನಲ್ಲಿದ್ದರೆ, ತನ್ನ ಗಂಡನನ್ನು ಹೇಗೆ ಸಂತೋಷಪಡಿಸಬೇಕು ಎಂದು ಪ್ರಿಯಾಂಕಾ ತಿಳಿದಿದೆ. ಬಹಳ ಸಮಯದ ನಂತರ ಜೊತೆಯಲ್ಲಿ ಸಮಯ ಕಳೆಯುತ್ತಿರುವ ಈ ಕಪಲ್‌ ತುಂಬಾ ಸಂತೋಷವಾಗಿರುವಂತೆ ಕಾಣಿಸುತ್ತಿದೆ.

37

ಈ ದಿನಗಳಲ್ಲಿ ಪ್ರಿಯಾಂಕಾ ಹಾಗೂ ನಿಕ್‌ ಪ್ರತಿ ಕ್ಷಣವೂ ಜೊತೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಫೋಟೋದಲ್ಲಿ ಪಿಸಿ ತನ್ನ ಗಂಡನನ್ನು ಹಗ್‌ ಮಾಡಿದ್ದಾರೆ. ಬಹಳ ಸಮಯದ ನಂತರ ನಿಕ್‌ ಜೊತೆಯಿರುವ ಖುಷಿ ಪ್ರಿಯಾಂಕಾಳ ಚೋಪ್ರಾರ ಮುಖದಲ್ಲೇ ಕಾಣುತ್ತಿದೆ.

47

ಒಂದು ಫೋಟೋದಲ್ಲಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೊನಾಸ್ ಅವರ ಭುಜದ ಮೇಲೆ ತಲೆ ಇಟ್ಟಿದ್ದಾರೆ. ಇನ್ನೊಂದರಲ್ಲಿ ನಿಕ್‌ ಅವರ ಯಾವುದೋ ಮಾತಿಗೆ ಪ್ರಿಯಾಂಕಾ ನಗುತ್ತಿದ್ದಾರೆ. ಈಸಮಯದಲ್ಲಿ, ಪ್ರಿಯಾಂಕಾ ಲೈಟ್‌ ಮೇಕಪ್ ಮತ್ತು ಸಣ್ಣ ಕಿವಿಯೋಲೆಗಳನ್ನು ಧರಿಸಿದ್ದರು. ಸಿಂಪಲ್ ಲುಕ್‌ನಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

57

ಪ್ರಿಯಾಂಕಾ ಚೋಪ್ರಾ ತಮ್ಮ ಸೋನಾ ರೆಸ್ಟೋರೆಂಟ್‌ನಿಂದಾಗಿ ಬಹಳ ದಿನಗಳಿಂದ ಸುದ್ದಿಯಲ್ಲಿದ್ದರು. ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಪ್ರಿಯಾಂಕಾರ ರೆಸ್ಟೋರೆಂಟ್ ಆರಂಭವಾಗಿದ್ದು  ಆಗಾಗ ಅದರ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ.

67

ನಟನೆಯ  ಹೊರತಾಗಿ, ಪ್ರಿಯಾಂಕಾ ಸಿನಿಮಾ ನಿರ್ಮಾಣ ಕೂಡ ಮಾಡುತ್ತಾರೆ. ನಟಿ ಪರ್ಪಲ್ ಪೆಬಲ್ಸ್ ಪಿಕ್ಚರ್ಸ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಬ್ಯಾನರ್ ಅಡಿಯಲ್ಲಿ, ಅವರು ವೆಂಟಿಲೇಟರ್, ಸರ್ವಾನ್, ಪಹುನಾ, ಫೈರ್‌ಬ್ಯಾಂಡ್, ಪಾನಿ, ದಿ ಸ್ಕೈ ಈಸ್ ಪಿಂಕ್, ದಿ ವೈಟ್ ಟೈಗರ್ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.


 

77

ಪ್ರಿಯಾಂಕಾ ಚೋಪ್ರಾ ಡಿಸೆಂಬರ್ 2018 ರಲ್ಲಿ ಅಮೇರಿಕನ್ ಗಾಯಕ ನಿಕ್ ಜೊನಾಸ್ ಅವರನ್ನು ವಿವಾಹವಾದರು. ಜೋಧಪುರದ ಉಮೈದ್ ಭವನ ಅರಮನೆಯಲ್ಲಿ ಇಬ್ಬರೂ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿಗಳ ಪ್ರಕಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

click me!

Recommended Stories