ಮೋಸ ಮಾಡಿದ್ರೆ ಏನ್ಮಾಡ್ಲಿ ? ನಟಿ ಸಯಾನಿಗೆ ಮದ್ವೆಯಾಗೋಕೆ ಭಯ

Published : Aug 20, 2021, 02:49 PM ISTUpdated : Aug 20, 2021, 03:16 PM IST

ಬಾಲಿವುಡ್ ಬಹುಬೇಡಿಕೆಯ ನಟಿಗೆ ಮದ್ವೆ ಅಂದ್ರೆ ಭಯ ಸಯಾನಿ ಗುಪ್ತಾರ ಮದ್ವೆ ಭಯಕ್ಕೇನು ಕಾರಣ ?

PREV
19
ಮೋಸ ಮಾಡಿದ್ರೆ ಏನ್ಮಾಡ್ಲಿ ? ನಟಿ ಸಯಾನಿಗೆ ಮದ್ವೆಯಾಗೋಕೆ ಭಯ
Sayani gupta

ಬಾಲಿವುಡ್‌ನಲ್ಲಿ ಪ್ರೀತಿಸಿ ಮದುವೆಯಾಗೋದು, ಎರಡನೇ ಮದುವೆಯಾಗೋದು, ಮದುವೆಯಾಗಿ ಪ್ರೀತಿ ಸಂಬಂಧ, ಜಗಳ, ಡಿವೋರ್ಸ್ ಎಲ್ಲವೂ ಕಾಮನ್. ಬಾಲಿವುಡ್ ಕುಟುಂಬ ಜೀವನ ಜಗಳ, ಸದ್ದುಗದ್ದಲ ರಸ್ತೆಗೆ ತಲುಪುತ್ತವೆ. ಹಾಗೆಯೇ ಸೆಲೆಬ್ರಿಟಿಗಳು ಮೂವ್ ಆನ್ ಆಗುತ್ತಾರೆ

29
Sayani gupta

ಸಯಾನಿ ಗುಪ್ತಾ ಅವರ ಇತ್ತೀಚಿನ ಸರಣಿಯು ಆನ್‌ಲೈನ್‌ನಲ್ಲಿ ರಿಲೀಸ್ ಆಗಿದ್ದು ಅಮೆಜಾನ್ ಮಿನಿ ಟಿವಿ ಸಂಕಲನ, ಕಾಲಿ ಪೀಲಿ ಕಥೆಗಳು ಸುದ್ದಿಯಾಗಿದೆ. ಈ ಸರಣಿಯಲ್ಲಿರುವ ಆರು ಕಥೆಗಳು ಪ್ರೀತಿ, ಸ್ವೀಕಾರ, ಪ್ರೀತಿ ಅಡಗಿಸಲು ಆಶಿಸುತ್ತಿರುವ ಕೆಲವು ಮುಂಬೈಕರ್‌ಗಳ ಜೀವನವದ ಬಗ್ಗೆ ಬೆಳಕು ಚೆಲ್ಲಿದೆ

39
Sayani gupta

ಪ್ರಿಯಾಂಶು ಪೈನ್ಯುಲಿ ಮತ್ತು ಭುವನ್ ಅರೋರಾದೊಂದಿಗೆ ಸಯಾನಿ ಸಿಂಗಲ್ ಜುಮ್ಕಾದಲ್ಲಿ ನಟಿಸಿದ್ದಾರೆ. ನಟಿ ತನ್ನ ಸಂಗಾತಿಗೆ ಮೋಸ ಮಾಡುವ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

49
Sayani gupta

ಈ ಸರಣಿಯಲ್ಲಿ ಒಳಗೊಂಡಿರುವ ಅರ್ಧ ಡಜನ್ ಕಥೆಗಳಲ್ಲಿ, ನಾಲ್ಕು ಸಂಬಂಧಗಳು ದಾಂಪತ್ಯ ದ್ರೋಹವನ್ನು ತೋರಿಸುತ್ತದೆ. ಹಾಗಾಗಿಯೇ ಲವ್-ಲೈಫ್ ಕುರಿತ ವಿವರಣೆ ಇದೆ

59
Sayani gupta

ಇದು ಬದಲಾವಣೆಯ ಸಮಯ ಎಂದು ಸಯಾನಿ ನಂಬಿದ್ದಾರೆ. ಸಮಯ ಬದಲಾಗುತ್ತಿದೆ ಮತ್ತು ವಾಸ್ತವ ಬದಲಾಗಿದೆ. ಆದರೆ ಅದಕ್ಕಿಂತ ಹೆಚ್ಚಾಗಿ, ಒಬ್ಬ ಮನುಷ್ಯನು ಹೆಂಡತಿಯನ್ನು ಮೋಸ ಮಾಡುತ್ತಾನೆ. ಹೆಂಡತಿ ಅವನನ್ನು ಮರಳಿ ಸ್ವೀಕರಿಸುವುದಿಲ್ಲ, ಇದು ಇನ್ನೂ ಸಾಮಾನ್ಯವಾಗಿದೆ  ಎಂದಿದ್ದಾರೆ.

69
Sayani gupta

ಸಿಂಗಲ್ ಜುಮ್ಕಾ ಮಹಿಳೆ ಮೋಸ ಮಾಡುತ್ತಿದ್ದಾಳೆ. ಪುರುಷನು ಮಾತುಕತೆಗೆ ಸಿದ್ಧನಾಗುತ್ತಾನೆ. ಆದರೆ ಆಕೆ ತನಗೆ ಹೇಗೆ ಮೋಸ ಮಾಡಿದಳೆಂಬ ಪುರುಷ ಅಹಂ ಭಾವ ಅತನಲ್ಲಿರುತ್ತದೆ ಎಂದಿದ್ದಾರೆ

79
Sayani gupta

ಖಂಡಿತ, ದಾಂಪತ್ಯ ಮೋಸ ಕೆಲವರಿಗೆ ಆಘಾತಕಾರಿಯಾಗಿದೆ. ನೀವು ಯಾರೇ ಆಗಿರಲಿ, ಮೋಸ ಹೋಗುವುದು ಖಂಡಿತವಾಗಿಯೂ ಒಳ್ಳೆಯ ವಿಚಾರವಲ್ಲ. ಆದರೆ ಇದು ಹೆಚ್ಚಾಗಿ ಸಂಭವಿಸುತ್ತದೆ ಎಂದಿದ್ದಾರೆ.

89
Sayani gupta

ನಾನು ಪ್ರಾಮಾಣಿಕವಾಗಿ ಈ ಬಗ್ಗೆ ತುಂಬಾ ಹೆದರುತ್ತೇನೆ. ನಾನು ಮದುವೆಯಾಗಲು ಬಯಸುವುದಿಲ್ಲ ಎಂದು ಅನಿಸಲು ಇದು ಒಂದು ಕಾರಣವಾಗಿದೆ. ಏಕೆಂದರೆ ನನಗೂ ಹಾಗೆ ಆದರೆ ? ಈ ದಿನಗಳಲ್ಲಿ ಆಯ್ಕೆಗಳು ಹೆಚ್ಚು ಎಂದಿದ್ದಾರೆ.

99
Sayani gupta

ನನಗೆ ಮುಕ್ತ ಸಂಬಂಧಗಳು ಅರ್ಥವಾಗುತ್ತಿಲ್ಲ. ನಾನು ನನ್ನ ಭಾವನೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಹಾಗಾಗಿ ನಾನು ಅಯ್ಯೋ ಮದುವೆ ಬೇಡ. ಮದುವೆಯಾಗಿ ಮೋಸ ಹೋದರೆ ನಾನು ಆತನನ್ನು ಕ್ಷಮಿಸಲಾರೆ ಎಂದಿದ್ದಾರೆ

click me!

Recommended Stories