ಬಾಲಿವುಡ್‌ನ ಈ ನಟಿಗೂ ಅಫ್ಘಾನಿಸ್ತಾನಕ್ಕೂ ಏನು ಸಂಬಂಧ ಗೊತ್ತಾ?

Suvarna News   | Asianet News
Published : Aug 20, 2021, 04:52 PM ISTUpdated : Aug 20, 2021, 04:57 PM IST

ಆಫ್ಘನಿಸ್ತಾನ ತಾಲಿಬಾನಿಗಳು ಕೈ ವಶವಾಗಿದ್ದೇ, ಭಾರತೀಯ ನಟ, ನಟಿಯರೂ ಆ ದೇಶದೊಂದಿಗಿನ ಸಂಬಂಧವನ್ನು ಮೆಲಕು ಹಾಕುತ್ತಿದ್ದಾರೆ. ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಅಫ್ಘಾನಿಸ್ತಾನ ಜೊತೆ ಕಾಬೂಲ್‌ನಲ್ಲಿ ಜನಿಸಿದ್ದು ಮತ್ತು ಆಕೆಯ ತಾಯಿ ಅಫ್ಘಾನ್ ಹಿಂದೂ ಎಂದು ನಿಮಗೆ ತಿಳಿದಿದೆಯೇ? ವಿವರಗಳನ್ನು ಓದಿ.

PREV
110
ಬಾಲಿವುಡ್‌ನ ಈ ನಟಿಗೂ  ಅಫ್ಘಾನಿಸ್ತಾನಕ್ಕೂ ಏನು ಸಂಬಂಧ ಗೊತ್ತಾ?

ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಪ್ರಸ್ತುತ ತಮ್ಮ ಕಮ್ ಬ್ಯಾಕ್ ಪ್ರಾಜೆಕ್ಟ್, ಸೀಸನ್'ಸ್ ಗ್ರೀಟಿಂಗ್ಸ್ ಸುದ್ದಿಯಲ್ಲಿದ್ದಾರೆ. ಈ ಸಿಸಿಮಾವು ಜಗತ್ತಿನಾದ್ಯಂತ ಚಲನಚಿತ್ರೋತ್ಸವಗಳಲ್ಲಿ  ಹಲವು ಪ್ರಶಸ್ತಿಗಳನ್ನು ಪಡೆದಿದೆ. ಸೆಲಿನಾ ಇತ್ತೀಚೆಗೆ ಅದಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.

210

ಮತ್ತೆ ಸಿನಿಮಾಕ್ಕೆ ಎಂಟ್ರಿ ಕೊಟ್ಟಿರುವ ಸೆಲಿನಾಗೆ ಸೀಸನ್'ಸ್ ಗ್ರೀಟಿಂಗ್ಸ್ ಒಳ್ಳೆ ಹೆಸರು ತಂದು ಕೊಟ್ಟಿದೆ ಹಾಗೂ ಜೊತೆಗೆ ಹಲವು ಆಫರ್ಸ್ ಪಡೆಯುತ್ತಿದ್ದಾರೆ. ಆವಾರ್ಡ್‌ ಗಗಳಿಸಿದ ನಂತರ, ಸೆಲಿನಾ ತಾನು ಅನೇಕ ಆಫರ್‌ಗಳನ್ನು ಪಡೆಯುತ್ತಿದ್ದೇನೆ ಎಂದು ನಟಿ ಹೇಳುತ್ತಿದ್ದಾರೆ.

310

ಅವರು ತನ್ನ ಹೆತ್ತವರು ಮತ್ತು ಮಗನನ್ನು ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಕಳೆದುಕೊಂಡರು. ನಂತರ ಖಿನ್ನತೆಗೆ ಒಳಗಾಗಿದ್ದರು. ಅವರು ಡಿಪ್ರೆಷನ್‌ನೊಂದಿಗೆ ಹೋರಾಡಿ ಗೆದ್ದ ಬಗ್ಗೆ  ಬಹಳ ಹಿಂದೆ ಮಾತಾನಾಡಿದ್ದರು.
 

410

ಸೆಲಿನಾ ಒಮ್ಮೆ ತನ್ನ ಪತಿ ಪೀಟರ್ ಹಾಗ್ ಅವರ ಬೆಂಬಲವು ತಾವೂ ಖಿನ್ನತೆಯಿಂದ ಹೊರಬರಲು ಸಾಕಷ್ಟು ಸಹಾಯ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ತಮ್ಮವನ್ನು ಕಳೆದುಕೊಂಡು ನೋವು ಕೆಲವರಿಗೆ ಮಾತ್ರ ಅರ್ಥವಾಗುತ್ತದೆ. 

510

ಸೆಲಿನಾ ಪ್ರಸ್ತುತ ಆಸ್ಟ್ರಿಯಾ, ಸಿಂಗಾಪುರ್ ಮತ್ತು ದುಬೈಯಲ್ಲಿರುತ್ತಾರೆ. ಅವರು ಸಿನಿಮಾ ಮತ್ತು ಅನುಮೋದನೆಗಳಿಗಾಗಿ ಹಲವು ದೇಶಗಳ ನಡುವೆ ಪ್ರಯಾಣಿಸುತ್ತಿದ್ದಾರೆ. HT ಯೊಂದಿಗಿನ ಸಂದರ್ಶನದಲ್ಲಿ, ಅವರು ಶೀಘ್ರದಲ್ಲೇ ಭಾರತಕ್ಕೆ ನನ್ನ ವಾಸಸ್ಥಾನವನ್ನು ಬದಲಾಯಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಬಹಿರಂಗಪಡಿಸಿದರು. 

610

২০০৩ সালে বলিউডে ডেবিউ করেন সেলিনা জেটলি। সম্প্রতি এক সাক্ষাৎকারে সেলিনা জানিয়েছেন, তার মা-ই তাকে নায়িকা হিসেবে দেখতে চেয়েছিলেন। যার ফলে বলিউডে স্বপ্নপূরণ করেছেন তিনি।

'ನಾವು ಜಾಗತೀಕರಣದ ಯುಗದಲ್ಲಿ ಬದುಕುತ್ತಿದ್ದೇವೆ ಮತ್ತು ನಾನು ಎಲ್ಲಿ ವಾಸಿಸುತ್ತಿದ್ದೇನೆ ಎಂಬುದು ಮುಖ್ಯವಲ್ಲ. ಆಸ್ಟ್ರಿಯಾದಲ್ಲಿನ ನನ್ನ  ಜೀವನದಲ್ಲಿ ನಾನು ಉತ್ತಮ ಶಾಂತಿ ಮತ್ತು ಪಾಸಿಟಿವಿಟಿಯನ್ನು ಕಂಡುಕೊಂಡಿದ್ದೇನೆ
ಮತ್ತು ನನ್ನ ಆಸ್ಟ್ರಿಯನ್ ಪರಂಪರೆ ನನಗೆ ಹೆಚ್ಚು ಉತ್ತಮ ನಟಿಯಾಗಲು ಸಹಾಯ ಮಾಡುತ್ತದೆ' ಎಂದು  ಹೇಳಿದ್ದಾರೆ.

710

তারপরই একটা বিরতি নিয়ে কাজে ফিরবেন বলে ঠিক করেন। কিন্তু সেটাও যে খুব একটা সহজ ছিল না তা তিনি হাড়ে হাড়ে টের পেয়েছেন।

ತಾಲಿಬಾನ್ ವಶ ಪಡಿಸಿಕೊಂಡಿರವ ಅಫ್ಘಾನಿಸ್ತಾನದ ಕಾಬೂಲ್‌ ಜೊತೆ ಸೆಲಿನಾ ಜೇಟ್ಲಿ ಆಳವಾದ ಸಂಪರ್ಕವನ್ನು ಹೊಂದಿರುವುದು ನಿಮಗೆ ಗೊತ್ತಾ?  ಸೆಲಿನಾ  ಜನಿಸಿದ್ದು ಕಾಬೂಲ್‌ನಲ್ಲಿ  ಮತ್ತು ಅವರ ಮೊದಲ ಚಲನಚಿತ್ರವನ್ನು ಅಫ್ಘಾನಿಸ್ತಾನದಲ್ಲಿ, ತಾಲಿಬಾನ್ ಆಳ್ವಿಕೆಯ ನಂತರ ಚಿತ್ರೀಕರಿಸಲಾಯಿತು.
 


 

810

ಸೆಲಿನಾಳ ತಂದೆ, ಕರ್ನಲ್ ವಿಕ್ರಮ್ ಕುಮಾರ್ ಜೇಟ್ಲಿ ಭಾರತೀಯ ಸೇನೆಯಲ್ಲಿದ್ದರು ಮತ್ತು ಅವರ ತಾಯಿ, ಮೀತಾ ಎಂಬ ಅಫ್ಘಾನ್ ಹಿಂದೂ ಕೂಡ ಭಾರತೀಯ ಸೇನೆಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದರು.ಇಬ್ಬರೂ 2018 ರಲ್ಲಿ ನಿಧನರಾದರು. ಸೆಲಿನಾ ಮತ್ತೆ  ಸಿನಿಮಾಕ್ಕೆ ಮರಳುವುದು  ತಾಯಿಯ ಕೊನೆಯ ಆಸೆಯಾಗಿತ್ತು ಎಂದು ನಟಿ ಒಮ್ಮೆ ಹೇಳಿದ್ದರು.

910

ಫರ್ದೀನ್ ಖಾನ್ ಜೊತೆಗಿನ ಸೆಲಿನಾರ ಮೊದಲ ಚಿತ್ರ ಜನಶೀನ್ (2003) ಅನ್ನು ಅಫ್ಘಾನಿಸ್ತಾನದಲ್ಲಿ ಶೂಟ್‌ ಮಾಡಲಾಗಿದೆ. ಈ ಚಿತ್ರ ಫಿರೋಜ್ ಖಾನ್‌ರ ಎರಡನೇ ಚಿತ್ರವಾಗಿದ್ದು,  ಅಫ್ಘಾನಿಸ್ತಾನದ ಹಲವು ಪ್ರದೇಶದಲ್ಲಿ  ತಾಲಿಬಾನ್ ಆಳ್ವಿಕೆಯ ನಂತರದಲ್ಲಿ ಚಿತ್ರೀಕರಿಸಲಾಯಿತು.


 

1010

ಸೆಲಿನಾ ಜೇಟ್ಲಿ ಜುಲೈ 2011 ರಲ್ಲಿ ಆಸ್ಟ್ರಿಯಾದ ಉದ್ಯಮಿ ಮತ್ತು ಹೋಟೆಲ್ ಉದ್ಯಮಿ ಪೀಟರ್ ಹಾಗ್ ಅವರನ್ನು ವಿವಾಹವಾದರು. ನಟಿ 2017 ರಲ್ಲಿ ಎರಡನೇ ಬಾರಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಮಕ್ಕಳಿಗೆ ಆರ್ಥರ್ ಮತ್ತು ಶಂಶರ್ ಹಾಗ್ ಎಂದು ಹೆಸರಿಟ್ಟರು. ದುರದೃಷ್ಟವಶಾತ್, ಶಂಶೇರ್ ತೀವ್ರ ಹೃದಯದ ಸಮಸ್ಯೆಗೆ ತುತ್ತಾದನು.

click me!

Recommended Stories