ವೆನಿಸ್‌ನ ಪಲಾಝೊ ಡ್ಯುಕೇಲ್‌ನಲ್ಲಿ ಮಂಗಳವಾರ ನಡೆದ ಬಲ್ಗರಿ ಮೆಡಿಟರೇನಿಯಾ ಹೈ ಜ್ಯುವೆಲ್ಲರಿ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಅನ್ನಿ ಹ್ಯಾಥ್‌ವೇ ಮತ್ತು ಝೆಂಡಾಯಾ ಜೊತೆಗೂಡಿದರು.
ಕ್ರಾಪ್ ಟಾಪ್ ಮತ್ತು ಫಿಶ್‌ಟೇಲ್ ಮ್ಯಾಚಿಂಗ್ ಸ್ಕರ್ಟ್ ಅನ್ನು ಒಳಗೊಂಡಿರುವ ಫಿಗರ್-ಹಗ್ಗಿಂಗ್ ಉಡುಪಿನಲ್ಲಿ ಪ್ರಿಯಾಂಕಾ ಚೋಪ್ರಾ ಸ್ಟನ್ನಿಂಗ್ ಆಗಿ ಕಾಣಿಸಿಕೊಂಡಿದ್ದಾರೆ.
ಅವರ ಮೆರೂನ್ ಕೋ-ಆರ್ಡ್ ಸ್ಕರ್ಟ್‌ನಲ್ಲಿದ್ದ ಬೆಜ್ವೆಲ್ಡ್ ಹೂವಿನ ಅಲಂಕಾರದೊಂದಿಗೆ ನಟಿಯ ಗಾರ್ಜಿಯಸ್ ಲುಕ್ ಹೆಚ್ಚು ಗಮನ ಸೆಳೆಯಿತು.
ಬಲ್ಗರಿ ಮೆಡಿಟರೇನಿಯಾ ಹೈ ಜ್ಯುವೆಲ್ಲರಿ ಸಮಾರಂಭದಲ್ಲಿ ಪ್ರಿಯಾಂಕಾ ಡೈಮಂಡ್ ಚೋಕರ್ ಮತ್ತು ವಜ್ರದ ಕಿವಿಯೋಲೆ ಧರಿಸಿ ತಮ್ಮ ಲುಕ್ ಪೂರ್ಣಗೊಳಿಸಿದರು.
ಫ್ಯಾನ್ ಪೇಜ್‌ನಲ್ಲಿ ಹಂಚಿಕೊಂಡ ಪ್ರಿಯಾಂಕಾ ವೀಡಿಯೊಗೆ ಪ್ರತಿಕ್ರಿಯಿಸಿದ ಇನ್‌ಸ್ಟಾಗ್ರಾಮ್ ಬಳಕೆದಾರರು ಪ್ರೀತಿಯ ಮಳೆ ಸುರಿದ್ದಾರೆ. ಪ್ರಿಯಾಂಕಾರನ್ನು ಕ್ವೀನ್ ಪ್ರಿ ಎಂದು ಕರೆದಿದ್ದಾರೆ. 'ಪ್ರಿಯಾಂಕಾ, ನೀವು ಸಂವೇದನಾಶೀಲ ಮಹಿಳೆ' ಎಂದೂ ಹೊಗಳಿದ್ದಾರೆ.
ಈವೆಂಟ್‌ನಲ್ಲಿ ಹಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಪ್ರಿಯಾಂಕಾ ಇರುವ ಫೋಟೋ ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ಹರಿದಾಡುತ್ತಿವೆ ಮತ್ತು ಅಭಿಮಾನಿಗಳು ಅವರನ್ನು 'ರಾಣಿ' ಎಂದು ಕರೆಯುತ್ತಿದ್ದಾರೆ.
ಪ್ರಿಯಾಂಕಾ ಕೆಲವು ತಿಂಗಳುಗಳಿಂದ ಬಿಡುವಿಲ್ಲದೆ ಮುಂಬೈ, ಲಂಡನ್, ರೋಮ್, ಲಾಸ್ ಏಂಜಲೀಸ್ ಮತ್ತು ನ್ಯೂಯಾರ್ಕ್‌ನಲ್ಲಿ ಸಿಟಾಡೆಲ್ ಅನ್ನು ಪ್ರಚಾರ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮೆಟ್ ಗಾಲಾ 2023 ರಲ್ಲಿ ಸಹ ಕಾಣಿಸಿಕೊಂಡರು. ಇತ್ತೀಚೆಗೆ, ಎಎಪಿ ನಾಯಕ ರಾಘವ್ ಚಡ್ಡಾ ಮತ್ತು ನಟಿ- ಅವರ ಕಸಿನ್ ಪರಿಣಿತಿ ಚೋಪ್ರಾ ಅವರ ನಿಶ್ಚಿತಾರ್ಥಕ್ಕಾಗಿ ಅವರು ದೆಹಲಿಯಲ್ಲಿದ್ದರು.
ಸ್ಯಾಮ್ ಹ್ಯೂಘನ್ ಜೊತೆಗಿನ ಹಾಲಿವುಡ್ ಚಿತ್ರ ಲವ್ ಎಗೇನ್‌ನಲ್ಲಿ ಪಿಗ್ಗಿ ಕಾಣಿಸಿಕೊಂಡಿದ್ದರು. ಅವರು ಈಗ ಹೆಡ್ಸ್ ಆಫ್ ಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ, ಇದರಲ್ಲಿ ಅವರು ಇಡ್ರಿಸ್ ಎಲ್ಬಾ ಮತ್ತು ಜಾನ್ ಸೆನಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಮುಂದೆ, ಅವರು ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಅವರೊಂದಿಗೆ ಫರ್ಹಾನ್ ಅಖ್ತರ್ ಅವರ ಜೀ ಲೇ ಜರಾದಲ್ಲಿ ಕೆಲಸ ಮಾಡುತ್ತಾರೆ.