ಮಡದಿಗೆ ಮದರ್ಸ್ ಡೇಗೆ ವಿಶೇಷವಾಗಿ ವಿಶ್ ಮಾಡಿದ ನಯನತಾರ ಪತಿ ವಿಘ್ನೇಶ್

Published : May 16, 2023, 06:02 PM ISTUpdated : May 16, 2023, 06:04 PM IST

ಈ ವರ್ಷ  ತಾಯಂದಿರ ದಿನದಂದು (Mother's Day 2023), ಹಲವು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಮ್ಮಂದಿರಿಗೆ ಶುಭ ಹಾರೈಸಿದರು. ಕೆಲವರು, ತಮ್ಮ ಮಕ್ಕಳಿಗೆ ಅತ್ಯುತ್ತಮ ತಾಯಿಯಾದ ತಮ್ಮ ಉತ್ತಮ ಸಂಗಾತಿಗಳ ಬಗ್ಗೆ  ಭಾವನಾತ್ಮಕ ಟಿಪ್ಪಣಿಗಳನ್ನು ಸಹ ಬರೆದಿದ್ದಾರೆ.  ಇದರಲ್ಲಿ ನಯನತಾರಾ (Nayanthara) ಅವರ ಪತಿ  ಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ (Vignesh Shivan) ಕೂಡ ಸೇರಿದ್ದಾರೆ.  ಪತ್ನಿ  ನಯನತಾರಾ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ. ಮತ್ತೊಂದೆಡೆ,  ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ತಮ್ಮ ತಾಯಿ ಸಲ್ಮಾ ಖಾನ್ ಅವರೊಂದಿಗೆ ಎರಡು ಸುಂದರವಾದ ಫೋಟೋಗಳನ್ನು ಹಂಚಿಕೊಂದಿದ್ದಾರೆ.

PREV
18
ಮಡದಿಗೆ ಮದರ್ಸ್ ಡೇಗೆ ವಿಶೇಷವಾಗಿ ವಿಶ್ ಮಾಡಿದ ನಯನತಾರ ಪತಿ ವಿಘ್ನೇಶ್

ತಮ್ಮ ಅವಳಿ ಮಕ್ಕಳೊಂದಿಗೆ ಸೂರ್ಯಾಸ್ತವನ್ನು ಆನಂದಿಸುತ್ತಿರುವ ನಯನತಾರ ಅವರ ಫೋಟೋಗಳ ಸರಣಿಯನ್ನು ವಿಘ್ನೇಶ್ ಶಿವನ್ ಅವರು  ಪೋಸ್ಟ್ ಮಾಡಿದ್ದಾರೆ. ವಿಘ್ನೇಶ್ ಅವರು ಒಂದು ಪ್ರೀತಿಯ ಸಂದೇಶ ಸಹ ಹಂಚಿಕೊಂಡಿದ್ದಾರೆ.

28

ಅವರು ಬಾಲ್ಕನಿಯಲ್ಲಿ ನಟಿ  ಮಕ್ಕಳ ಜೊತೆಗೆ  ಕಾಲ ಕಳೆಯುತ್ತಿರುವುದು ಕಾಣಬಹುದು. ಪತ್ನಿ ನಯನತಾರ ಅವರ ಮೊದಲ ಮದರ್ಸ್‌ ಡೇಯಂದು ನಟಿಗೆ  10 ರಂದು 10 ರೇಟಿಂಗ್ ನೀಡಿ, ದೇವರಿಗೆ ಧನ್ಯವಾದಗಳನ್ನು ಪೋಸ್ಟ್‌ನಲ್ಲಿ ವಿಘ್ನೇಶ್ ಶಿವನ್ ತಿಳಿಸಿದ್ದಾರೆ.

38

'ಆತ್ಮೀಯ ನಯನ್ ... ನೀವು ತಾಯಿಯಾಗಿ ಕೂಡ  10 ಕ್ಕೆ 10  ಮತ್ತು  ನಿಮಗೆ ಅಪಾರ ಪ್ರೀತಿ ಮತ್ತು  ಶಕ್ತಿ ನನ್ನ ತಂಗಮೇ! ನಿಮ್ಮ ಮೊದಲ ತಾಯಂದಿರ ದಿನ. ನಮ್ಮ  ಒಂದು ಕನಸು ನನಸಾಗಿದೆ. ಅತ್ಯುತ್ತಮ ಶಿಶುಗಳನ್ನು ಆಶೀರ್ವದಿಸಿದ ದೇವರಿಗೆ ಮತ್ತು ಈ ಪ್ರಪಂಚದ ಎಲ್ಲಾ ಒಳ್ಳೆಯತನಕ್ಕೆ ಧನ್ಯವಾದಗಳು' ಎಂದು ಅವರು ಬರೆದಿದ್ದಾರೆ.

48

ಇದಕ್ಕೂ ಮೊದಲ ಪೋಸ್ಟ್‌ನಲ್ಲಿ ವಿಘ್ನೇಶ್ ಶಿವನ್ ಅವರು ಪತ್ನಿಗೆ ಮದರ್ಸ್‌ ಡೇ ವಿಶ್‌ ಮಾಡಿ ಪ್ರಪಂಚದ ಬೆಸ್ಟ್ ತಾಯಿ ಎಂದು ಕರೆದು  ಕೆಲವು ಫೋಟೋಗಳು ಹಂಚಿಕೊಂಡಿದ್ದರು. 

58

ತಮಿಳು ಚಿತ್ರರಂಗದ ಪವರ್‌ ಕಪಲ್‌  ನಯನತಾರ ಮತ್ತು  ವಿಘ್ನೇಶ್ ಶಿವನ್  ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಡಿಗೆ ತಾಯ್ತನದ ಮೂಲಕ ತಮ್ಮ ಶಿಶುಗಳ ಆಗಮನವನ್ನು ಘೋಷಿಸಿದರು. 

68

'ನಯನ್ ಮತ್ತು ನಾನು ಅಮ್ಮ ಮತ್ತು ಅಪ್ಪ ಆಗಿದ್ದೇವೆ. ನಾವು ಅವಳಿ ಗಂಡು ಮಕ್ಕಳೊಂದಿಗೆ ಆಶೀರ್ವದಿಸಿದ್ದೇವೆ. ನಮ್ಮ ಎಲ್ಲಾ ಪ್ರಾರ್ಥನೆಗಳು, ನಮ್ಮ ಪೂರ್ವಜರ ಆಶೀರ್ವಾದಗಳು ಮಾಡಿದ ಎಲ್ಲಾ ಉತ್ತಮ ಅಭಿವ್ಯಕ್ತಿಗಳು ಸೇರಿ, ನಮಗೆ 2 ಶಿಶುಗಳ ರೂಪದಲ್ಲಿ ಬಂದಿವೆ. ನಮ್ಮ ಉಯಿರ್ ಮತ್ತು ಉಲಗಂಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ಜೀವನವು ಪ್ರಕಾಶಮಾನವಾಗಿ ಮತ್ತು ಸುಂದರವಾಗಿ ಕಾಣುತ್ತದೆ' ಎಂದು ವಿಘ್ನೇಶ್ ಸಿಹಿ ಸುದ್ದಿ ಹಂಚಿಕೊಂಡಿದ್ದರು.

 

78

ಮತ್ತೊಂದೆಡೆ,  ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ತಮ್ಮ ತಾಯಿ ಸಲ್ಮಾ ಖಾನ್ ಅವರೊಂದಿಗೆ ಎರಡು ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮದರ್ಸ್‌ ಡೇಗೆ ವಿಶ್ ಮಾಡಿದ್ದಾರೆ. 

88

ಸಲ್ಮಾನ್‌ ಅವರು ಫೋಟೋಗಳ ಜೊತೆಗೆ  'Mummyyyyyyyyyyy #HappyMothersDay ಎಂದು ಬರೆದಿದ್ದಾರೆ. ಫೋಟೋದಲ್ಲಿ, ಸಲ್ಮಾನ್‌  ತನ್ನ ತಾಯಿಯನ್ನು  ಜೊತೆ ಹೊಂದಿರುವ ಬಾಂಧವ್ಯ ಈ ಫೋಟೋಗಳಲ್ಲಿ ನೋಡಬಹುದು.

Read more Photos on
click me!

Recommended Stories