ಮತ್ತೆ ಬಿಕಿನಿಯಲ್ಲಿ ಮಿಂಚಿದ ಪ್ರಿಯಾಂಕಾ; ನಿಕ್ ಜೋನಸ್ ಜೊತೆ ಬೀಚ್‌ನಲ್ಲಿ ಮಸ್ತ್ ಮಜಾ

First Published Jun 27, 2022, 12:31 PM IST

ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಜೊತೆ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿರುವ ನಟಿ ಪ್ರಿಯಾಂಕಾ ಫೋಟೋವನ್ನು ಶೇರ್ ಮಾಡಿದ್ದಾರೆ. ಹಳದಿ ಬಣ್ಣದ ಬಿಕಿನಿ ಧರಿಸಿರುವ ಪ್ರಿಯಾಂಕಾ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. 

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರಿಯಾಂಕಾ ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಇತ್ತೀಚಿಗಷ್ಟೆ ಪ್ರಿಯಾಂಕಾ ದಂಪತಿ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು.

ಬಾಲಿವುಡ್‌ನಿಂದ ಅಂತರ ಕಾಯ್ದುಕೊಂಡಿರುವ ನಟಿ ಪ್ರಿಯಾಂಕಾ ಇದೀಗ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪತಿ, ಮಗು, ಸಿನಿಮಾ ಅಂತ ಬ್ಯುಸಿಯಾಗಿರುವ ಪ್ರಿಯಾಂಕಾ ಇತ್ತೀಚಿಗಷ್ಟೆ ಮಗಳ ಸುಂದರ ಫೋಟೋ ಹಂಚಿಕೊಂಡಿದ್ದರು. 

ಇದೀಗ ಪ್ರಿಯಾಂಕಾ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೌದು, ಪತಿ ನಿಕ್ ಜೋನಸ್ ಜೊತೆ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿರುವ ನಟಿ ಪ್ರಿಯಾಂಕಾ ಫೋಟೋವನ್ನು ಶೇರ್ ಮಾಡಿದ್ದಾರೆ. 

ಹಳದಿ ಬಣ್ಣದ ಬಿಕಿನಿ ಧರಿಸಿರುವ ಪ್ರಿಯಾಂಕಾ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ತರಹೇವಾರಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಸಮಯ ಸಿಕ್ಕಾಗಲೆಲ್ಲಾ ಪತಿ ನಿಕ್ ಜೋನಸ್ ಜೊತೆ ಸಮಯ ಕೆಳೆಯುತ್ತಾರೆ. ಭಾನುವಾರ ಇಬ್ಬರು ಟರ್ಕ್ಸ್ ಮತ್ತು ಕೈಕೋಸ್ ಧ್ವಿಪಗಳಿಗೆ ತೆರಳಿದ್ದ ಈ ಸ್ಟಾರ್ ಜೋಡಿ ಮಸ್ತ್ ಮಜಾ ಮಾಡಿದ್ದಾರೆ. 

ಬೀಚ್‌ನಲ್ಲಿ ಇಬ್ಬರು ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿದ್ದಾರೆ. ಸಂಭ್ರಮದ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರಿಯಾಂಕಾ ದಂಪತಿಯ ಫೋಟೋಗಳಿಗೆ ಅಭಿಮಾನಿಗಳು ಮತ್ತು ಸಿನಿ ಗಣ್ಯರಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ರಣ್ವೀರ್ ಸಿಂಗ್ ಕೂಡ ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಹಾಕಿದ್ದಾರೆ. 

ನಟಿ ಪ್ರಿಯಾಂಕಾ ಮತ್ತು ಜೋನಸ್ ದಂಪತಿ 2022, ಜನವರಿಯಲ್ಲಿ ಮೊದಲ ಮಗು ಸ್ವಾಗತಿಸಿದರು. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರಿಟ್ಟಿದ್ದಾರೆ. ಮೊದಲ ಬಾರಿಗೆ ಮಗಳು ಮಾಲ್ತಿ ಪಾದರ್ಸ್ ಡೇ ಆಚರಣೆ ಮಾಡಿದ್ದಳು. ನಿಜ್ ಜೊತೆ ಇರುವ  ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದರು.  ಇದುವರೆಗೂ  ಪ್ರಿಯಾಂಕಾ ಮಗಳ ಮುಖವನ್ನು ಎಲ್ಲಿಯೂ ತೋರಿಸಿಲ್ಲ.  

ಪ್ರಿಯಾಂಕಾ ಸಿನಿಮಾ ವಿಚಾರಕ್ಕೆ ಬರುವುದಾದರೆ  ಕೊನೆಯದಾಗಿ ಮ್ಯಾಟ್ರಿಕ್ಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಪ್ರಿಯಾಂಕಾ ಚೋಪ್ರಾ ಇಟ್ಸ್ ಆಲ್ ಕಮ್ಮಿಂಗ್ ಬ್ಯಾಕ್ ಟು ಮಿಯಲ್ಲಿ ಬ್ಯುಸಿಯಾಗಿದ್ದಾರೆ.
 

click me!