ಪತಿ ಕುಟುಂಬದ ಜೊತೆ ಪ್ರಿಯಾಂಕ ಚೋಪ್ರಾ ದೀಪಾವಳಿ ;ಮೇಕಪ್ ಸರಿವಿಲ್ಲವೆಂದ್ರು ಫ್ಯಾನ್ಸ್!

First Published | Nov 14, 2023, 4:11 PM IST

ಜಾಗತಿಕ ಐಕಾನ್, ಪ್ರಿಯಾಂಕಾ ಚೋಪ್ರಾ (Priyanka Chopra) ತನ್ನ ನಟನೆ  ಮತ್ತು  ಫ್ಯಾಶನ್ ಸೆನ್ಸ್‌ಗಾಗಿ ಹೆಚ್ಚು ಪ್ರೀತಿಸಲ್ಪಟ್ಟಿದ್ದಾರೆ  ಅಂಏರಿಕದ ಪಾಪ್‌ ಸಿಂಗರ್‌ ನಿಕ್ ಜೋನಾಸ್‌ ಅವರನ್ನು ಮದುವೆಯಾಗಿರುವ  ಪ್ರಿಯಾಂಕಾ ತನ್ನ ದೇಸಿ ಸಂಸ್ಕೃತಿಯನ್ನು ಪ್ರದರ್ಶಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಮತ್ತು ಪ್ರತಿ ಹಬ್ಬವನ್ನು ವೈಭವದಿಂದ ಆಚರಿಸುವುದನ್ನು ಆಗಾಗ್ಗೆ ಗುರುತಿಸಲಾಗುತ್ತದೆ.  ಇಡೀ ದೇಶವೇ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ, ಅಮೇರಿಕದಲ್ಲಿ  ಪ್ರಿಯಾಂಕಾ  ಅವರ ಕುಟುಂಬದೊಂದಿಗೆ ದೀಪಾವಳಿ ಆಚರಣೆಯ ಕೆಲವು ಅದ್ಭುತ ಫೋಟೋಗಳು ಹೊರಬಿದ್ದಿವೆ.

ಪ್ರಿಯಾಂಕಾ ಚೋಪ್ರಾ ಲೆಹೆಂಗಾ-ಚೋಲಿಯಲ್ಲಿ ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡರೆ, ಆಕೆಯ ಪತಿ ನಿಕ್ ಜೋನಾಸ್ ಸಹ ದೀಪಾವಳಿಯ ಸಂಭ್ರಮಕ್ಕೆ ದೇಸಿ ಲುಕ್‌ ಆಯ್ಕೆ ಮಾಡಿಕೊಂಡಿದ್ದರು.

ಪ್ರಿಯಾಂಕಾ ಚೋಪ್ರಾ ಅವರ ಅಭಿಮಾನಿ ಪುಟವೊಂದು ನಿಕ್ ಜೋನಾಸ್ ಮತ್ತು ಅವರ ಕುಟುಂಬದೊಂದಿಗೆ  ಪ್ರಿಯಾಂಕಾ ದೀಪಾವಳಿ ಆಚರಣೆಯ ಗ್ಲಿಂಪ್ಸ್‌ ಹಂಚಿಕೊಂಡಿದೆ.
 

Tap to resize

 ಈ ಸಮಯದಲ್ಲಿ ಪ್ರಿಯಾಂಕಾ ಮರೂನ್ ವೆಲ್ವೆಟ್ ಚೋಲಿ ಮತ್ತು ಅದಕ್ಕೆ ಹೊಂದಿಕೆಯಾಗುವ ದುಪ್ಪಟ್ಟಾದೊಂದಿಗೆ ಗ್ರ್ಯಾಂಡ್‌ ಲೆಹೆಂಗಾವನ್ನು ಧರಿಸಿದ್ದರೆ, ನಿಕ್ ಗುಲಾಬಿ ಬಣ್ಣದ ಬ್ರೊಕೇಡ್ ಜಾಕೆಟ್‌ನೊಂದಿಗೆ ಬಿಳಿ ಕುರ್ತಾ-ಪೈಜಾಮಾದಲ್ಲಿ ಸುಂದರವಾಗಿ ಕಾಣುತ್ತಿದ್ದರು. 

ದೀಪಾವಳಿ ಬಾಷ್‌ಗಾಗಿ ಪ್ರಿಯಾಂಕಾ ಅವರ ಅವರ ಮರೂನ್ ಚೋಲಿಯ ಪೂರ್ಣ ತೋಳುಗಳು ಮತ್ತು ಆಳವಾದ ವಿ-ನೆಕ್ ಅನ್ನು ಒಳಗೊಂಡಿತ್ತು. ಅವರು ತನ್ನ ನೋಟವನ್ನು ಬಲ್ಗೇರಿ ಸರ್ಪೇಂಟ್‌ ನೆಕ್ಲೇಸ್ ಮತ್ತು ಗ್ಲಾಮ್ ಮೇಕ್ಅಪ್‌ನೊಂದಿಗೆ ಸಂಯೋಜಿಸಿದರು, 

ಕೆನ್ನೆ ಮತ್ತು ಹೈಲೈಟ್ ಮಾಡಿದ ಚೀಕ್ಸ್‌ ಡಾರ್ಕ್‌ ಕೆಂಪು ಲಿಪ್‌ಸ್ಟಿಕ್, ಹೊಂದಿಕೆಯಾಗುವ ಐಶ್ಯಾಡೋ, ಬಿಂದಿ ಮತ್ತು  ಹೈಲೈಟ್‌ ಮಾಡಿದ  ಹುಬ್ಬುಗಳ ಅಲಂಕಾರದ ಜೊತೆಗೆ ಅವರು ತಮ್ಮ ಕೂದಲನ್ನು ಕೆಂಪು ಗುಲಾಬಿಗಳಿಂದ ಅಲಂಕರಿಸಿ ಬನ್‌ನಲ್ಲಿ ಕಟ್ಟಿದರು. ಬೈತಲೆಗೆ ಸಿಂಧೂರವಿ ಟ್ಟುಕೊಂಡಿದ್ದರು. 
 

ಆದರೆ , ಅನೇಕ ನೆಟಿಜನ್‌ಗಳಿಗೆ ನಟಿಯ ಮೇಕಪ್‌ ಇಷ್ಟವಾಗಿಲ್ಲ ಅದರ ಬಗ್ಗೆ ಟೀಕಿಸಿದ್ದಾರೆ. ಓ ದೇವರೇ ಅವರ ಮೇಕಪ್ ಕಲಾವಿದನಿಗೆ ಏನಾಗಿದೆ' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು, 'ಅವರ ಮೇಕಪ್‌ಗೆ ಏನಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. 

Latest Videos

click me!