ನೀಲಿ ಸೀರೆಯಲ್ಲಿ ಶ್ರೀದೇವಿ ಪುತ್ರಿಯ ಹಾಟ್‌ನೆಸ್‌ ಅಬ್ಬರ: ಜಾನ್ವಿ ಲುಕ್‌ಗೆ ಪಡ್ಡೆಹುಡುಗರ ಎದೆಯಲ್ಲಿ ತಕದಿಮಿತ!

First Published | Nov 13, 2023, 3:00 AM IST

ಬಿಟೌನ್‌ ಸುಂದರಿ ಜಾನ್ವಿ ಕಪೂರ್‌ ಸಾಲು ಸಾಲು ಫೋಟೋ ಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಟಾಪ್‌ ಸುದ್ದಿಯಲ್ಲಿದ್ದಾಳೆ. ಇದೀಗ ಈ ಸುಂದರಿಯ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ.
 

ಜಾನ್ವಿ ಸದ್ಯ ಕೊರಟಾಲ ಶಿವ ನಿರ್ದೇಶನದ ತೆಲುಗು ಸಿನಿಮಾ ದೇವರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದು ಇದು ಈಗಾಗಲೇ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ಜೂನಿಯರ್ ಶ್ರೀದೇವಿ ಎಂದೇ ಜನಪ್ರಿಯರಾಗಿರುವ ಜಾನ್ವಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಆಗಾಗ್ಗೆ ಫೋಟೋಗಳನ್ನು ಅಪ್ಲೋಡ್ ಮಾಡ್ತಾರೆ. ಇದೀಗ ಬ್ಲೂ ಸೀರೆಯಲ್ಲಿ ಮಿಂಚುತ್ತಿದ್ದಾರೆ.

Tap to resize

ಜಾನ್ವಿ ಅವರ ಫೋಟೋಗಳನ್ನು ನೋಡಿದ ನೆಟ್ಟಿಗರು ಥೇಟ್ ಅಮ್ಮನಂತೆ ನೀವು ಸಖತ್ ಬ್ಯೂಟಿ, ಸೊ ಹಾಟ್, ಸೆಕ್ಸಿ ಅಂತೆಲ್ಲಾ ಕಮೆಂಟ್ ಮಾಡ್ತಿದ್ದಾರೆ. ಜಾನ್ವಿ ಕಪೂರ್ ಕಡಿಮೆ ಸಿನಿಮಾ ಮಾಡಿದರೂ ಟಾಪ್ ಹೀರೋಯಿನ್‌ನಷ್ಟು ಕ್ರೇಜ್ ಗಳಿಸಿದ್ದಾರೆ. 

ದೇವರ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಎನ್‌ಟಿಆರ್ ಆರ್‌ಆರ್‌ಆರ್ ನಂತರ ಬುಡಕಟ್ಟು ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರ ಪಾತ್ರದ ಹೆಸರು ಈ ಚಿತ್ರದಲ್ಲಿ ತಂಗಂ ಎಂದು ಹೇಳಲಾಗುತ್ತಿದೆ.

ಸದ್ಯ ಎಲ್ಲರೂ ದೇವರ ಮೂವಿಯ ಕುರಿತು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶ್ರೀದೇವಿ ಮಗಳು ದೇವರ ಮೂವಿ ಮೂಲಕ ಸೌತ್ ಪ್ರೇಕ್ಷಕರ ಪ್ರೀತಿ ಪಡೆಯುತ್ತಾರಾ ಕಾದು ನೋಡಬೇಕಾಗಿದೆ.

ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್​ನ ಯಂಗ್ ನಟಿಯರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಕೆಲವೇ ಕೆಲವು ಸಿನಿಮಾಗಳು ಮಾತ್ರ ಹಿಟ್ ಆಗಿವೆ.

Latest Videos

click me!