ಅಮೆರಿಕಾದಲ್ಲಿ ಗಣೇಶನ ಹಬ್ಬ: ಬಳೆ ತೊಟ್ಟ ಮಗಳ ಫೋಟೋ ಹಂಚಿ ಕೊಂಡ ಪ್ರಿಯಾಂಕಾ ಚೋಪ್ರಾ

Published : Sep 20, 2023, 11:22 AM ISTUpdated : Sep 20, 2023, 12:10 PM IST

ಬಾಲಿವುಡ್-ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಗಣೇಶ ಚತುರ್ಥಿಯ ಸಂದರ್ಭದಲ್ಲಿ Instagram ನಲ್ಲಿ  ತಮ್ಮ ಮಗಳು ಮಾಲ್ತಿಯ ಫೋಟೋಗಳನ್ನು ಪ್ರಕಟಿಸಿದ್ದಾರೆ. ಚಿತ್ರಗಳಲ್ಲಿ, ಮಾಲ್ತಿ ಬಿಂದಿ ಮತ್ತು ಬಳೆಗಳನ್ನು ಧರಿಸಿ, ಗಣೇಶ ಚತುರ್ಥಿಯಂದು ಆಟಿಕೆ ಗಣಪತಿಯೊಂದಿಗೆ ಆಡುತ್ತಿರುವುದನ್ನು ಕಾಣಬಹುದು. 

PREV
19
ಅಮೆರಿಕಾದಲ್ಲಿ ಗಣೇಶನ ಹಬ್ಬ: ಬಳೆ ತೊಟ್ಟ ಮಗಳ ಫೋಟೋ ಹಂಚಿ ಕೊಂಡ ಪ್ರಿಯಾಂಕಾ ಚೋಪ್ರಾ


“ಒಬ್ಬ ಹುಡುಗಿ ಮತ್ತು ಅವಳ ಗಣಪತಿ. ಸದಾ ನಮ್ಮೊಂದಿಗೆ.. ಎಲ್ಲೇ ಹೋದರೂ.. #ಗಣಪತಿಬಪ್ಪಮೋರ್ಯ #ಗಣೇಶಚತುರ್ಥಿ.” ಎಂದು ತಾಚು ಪ್ರಕಟಿಸಿರುವ ಫೋಟೋಗೆ ಪ್ರಿಯಾಂಕಾ ಅಡಿಬರಹ ಕೊಟ್ಟಿದ್ದಾರೆ.
 

29

ಈ ಮುದ್ದಾದ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಿ ಗಣಪತಿ ಹಬ್ಬದ ಶುಭಾಶಯ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ. 

39

ಮೇಡಂ ನಿಮ್ಮ ಹೆಣ್ಣು ಮಗುವನ್ನು ಎಲ್ಲಾ ಭಾರತೀಯ ಆಚರಣೆಗಳೊಂದಿಗೆ ಬೆಳೆಸುತ್ತಿರುವ ಬಗ್ಗೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ, ಅವಳು ತುಂಬಾ ಮುದ್ದಾಗಿದ್ದಾಳೆ. ರಾಜಕುಮಾರಿ. ಅವಳು ತನ್ನ ತಾಯಿ, ಗಣಪತಿ ಬಪ್ಪಾ ಮೋರೆಯಂತೆ ಜಗತ್ತಿಗೆ ಪಾತ್ರವಹಿಸಬೇಕೆಂದು ನಾನು ಬಯಸುತ್ತೇನೆ. - ಅಭಿಮಾನಿಯ ಕಮೆಂಟ್ 

49

ಮತ್ತೊಬ್ಬರು ಅಭಿಮಾನಿ, ಹಬ್ಬದ ಶುಭಾಶಯದ ಜೊತೆಗೆ,  ಅವಳು ಅಮ್ಮ ಮತ್ತು ತಂದೆಯಂತೆಯೇ ತುಂಬಾ ಸುಂದರವಾಗಿ ಬೆಳೆದಿದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ. 

59

ಪ್ರಿಯಾಂಕಾ ತನ್ನ ಮಗುವನ್ನು ಆರಂಭಿಕ ಹಂತದಲ್ಲಿಯೇ ಸಂಪ್ರದಾಯಗಳನ್ನು ಹೇಳಿಕೊಟ್ಟು ಹೇಗೆ ಕಲಿಸುತ್ತಿದ್ದಾರೆ, ಮತ್ತು ಬೆಳೆಸುತ್ತಿದ್ದಾರೆ ಎಂದು ಅನೇಕ ಮಂದಿ ಖುಷಿ ಪಟ್ಟಿದ್ದಾರೆ.

69

ಇನ್ನು ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಗಾಯಕ-ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಅವರೊಂದಿಗೆ ಯುಎಸ್‌ನಲ್ಲಿ ವಾಸಿಸುತ್ತಿರಬಹುದು ಆದರೆ ಅವರು ಭಾರತೀಯ ಸಂಪ್ರದಾಯಗಳನ್ನು ಜೀವಂತವಾಗಿರಿಸಿಕೊಳ್ಳುತ್ತಾರೆ ಎಂಬುದನ್ನು ಈ ಮೂಲಕ ಖಚಿತಪಡಿಸಿಕೊಂಡಿದ್ದಾರೆ.

79

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ತಮ್ಮ ಮೊದಲ ಮಗು, ಮಗಳು ಮಾಲ್ತಿ ಮೇರಿ ಜೋನಾಸ್ ಳನ್ನು ಜನವರಿ 15, 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು.

89

ಮಗು ಹುಟ್ಟಿದ ಸ್ವಲ್ಪ ಸಮಯದವರೆಗೆ ಅಕೆಯನ್ನು ಜಗತ್ತಿಗೆ ತೋರಿಸಿರಲಿಲ್ಲ. ಮಾಧ್ಯಮದ ಕಣ್ಣಿಂದ ಕೂಡ ದೂರ ಇಟ್ಟಿದ್ದರು. ಪ್ರಿಯಾಂಕ ಮತ್ತು ನಿಕ್ ಈಗ ತಮ್ಮ ಮಗಳೊಂದಿಗೆ ಸಮಯ ಕಳೆಯುವ ಗ್ಲಿಂಪ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

99

ನಟಿ ಪ್ರಿಯಾಂಕಾ ಮತ್ತು ಹಾಡುಗಾರ ನಿಕ್‌ ಅವರು ಡಿಸೆಂಬರ್ 2018 ರಲ್ಲಿ ರಾಜಸ್ಥಾನದ ಜೋಧ್‌ಪುರದ ಉಮೈದ್ ಭವನ ಅರಮನೆಯಲ್ಲಿ ವಿವಾಹವಾದರು.
Read more Photos on
click me!

Recommended Stories