ಪತಿ ಜೋನಸ್ ಹಣೆಗೂ ತಿಲಕವಿಡುವಂತೆ ಕೈ ಸನ್ನೆ ಮಾಡಿದ ಪೀಸಿ : ಪತ್ನಿಯ ಸಂಸ್ಕೃತಿಯನ್ನೂ ಗೌರವಿಸಿದ ನಿಕ್‌ಗೆ ನೆಟ್ಟಿಗರ ಶ್ಲಾಘನೆ

First Published | Mar 21, 2024, 6:45 AM IST

ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿ ಅಮೆರಿಕಾ ಗಾಯಕನ ಮದ್ವೆ ಆಗಿ ಅಮೆರಿಕಾದಲ್ಲೇ ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದು, ನಿನ್ನೆಯಷ್ಟೇ ಅಯೋಧ್ಯೆಯ ಶ್ರೀರಾಮಲಲ್ಲಾನ ದರ್ಶನ ಪಡೆದರು.

ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿ ಅಮೆರಿಕಾ ಗಾಯಕನ ಮದ್ವೆ ಆಗಿ ಅಮೆರಿಕಾದಲ್ಲೇ ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದು, ನಿನ್ನೆಯಷ್ಟೇ ಅಯೋಧ್ಯೆಯ ಶ್ರೀರಾಮಲಲ್ಲಾನ ದರ್ಶನ ಪಡೆದರು.

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಆಗಿತ್ತು. ಈ ಸಂದರ್ಭದಲ್ಲಿ ಬಾಲಿವುಡ್ ತಾರೆಯರು ಉದ್ಯಮಿಗಳು ಸೇರಿದಂತೆ ಬಹುತೇಕರು ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆದಿದ್ದರು. ಆದರೆ ನಟಿ ಪ್ರಿಯಾಂಕಾ ಚೋಪ್ರಾಗೆ ಆ ಸಂದರ್ಭದಲ್ಲಿ ಬರಲಾಗಿರಲಿಲ್ಲ

Tap to resize

ಆದರೆ ಈಗ ಭಾರತಕ್ಕೆ ಬಂದಿರುವ ಅವರು ಹಿಂದೂಗಳ ಆರಾಧ್ಯ ದೈವ ಅಯೋಧ್ಯೆ ಶ್ರೀರಾಮನ ಆಶೀರ್ವಾದ ಪಡೆದಿದ್ದಾರೆ. ಪ್ರಿಯಾಂಕಾ ತಮ್ಮ ತಾಯಿ ಮಧು ಚೋಪ್ರಾ ಗಂಡ ನಿಕ್ ಜೋನಸ್ ಹಾಗೂ ಮಗಳು ಮಾಲ್ತಿ ಮೇರಿ ಜೊತೆ ಶ್ರೀರಾಮನ ದರ್ಶನ ಪಡೆದಿದ್ದಾರೆ.

ಈ ಭೇಟಿಯ ಫೋಟೋ ವೀಡಿಯೋಗಳನ್ನು ಪ್ರಿಯಾಂಕಾ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಪ್ರಿಯಾಂಕಾ ನಡೆಯನ್ನು ಸ್ವಾಗತಿಸುವ ಜೊತೆ ಪ್ರಿಯಾಂಕಾ ಪತಿ ಅಮೆರಿಕನ್ ಗಾಯಕ ನಿಕ್ ಜೋನಸ್ ಅವರನ್ನು ಕೊಂಡಾಡಿದ್ದಾರೆ.

ವೀಡಿಯೋದಲ್ಲಿ ಮಗಳ ಹಣೆಗೆ ತಿಲಕವಿಟ್ಟ ಅರ್ಚಕರಿಗೆ ಪ್ರಿಯಾಂಕಾ ತನ್ನ ಪತಿ ನಿಕ್ ಜೋನಾಸ್ ಅವರತ್ತಲೂ ಕೈ ತೋರಿಸಿ ಆತನಿಗೂ ತಿಲಕವಿಡುವಂತೆ ಕೈ ಸನ್ನೆ ಮಾಡುವುದನ್ನು ಕಾಣಬಹುದಾಗಿದೆ. 

ದೇಗುಲ ದರ್ಶನದ ವೇಳೆ ಪ್ರಿಯಾಂಕಾ ಹಳದಿ ಬಣ್ಣದ ಕಾಟನ್ ಮಿಕ್ಸ್ ಸಾರಿ ಧರಿಸಿದ್ದರೆ, ಪತಿ ಜೋನಾಸ್ ಹೂಗಳ ಚಿತ್ತಾರವಿರುವ ಬಿಳಿ ಬಣ್ಣದ ಜುಬ್ಬಾ ಧರಿಸಿದ್ದಾರೆ. ಪ್ರಿಯಾಂಕಾ ದಂಪತಿಗೆ ತಾಯಿ ಮಧು ಚೋಪ್ರಾ ಸಾಥ್ ನೀಡಿದ್ದಾರೆ. 

ದೇಗುಲದೊಳಗೆ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದು, ದೇಗುಲದ ಅರ್ಚಕರು ಜೋಡಿಗೆ ತಿಲಕವಿಟ್ಟು ಆಶೀರ್ವದಿಸಿದ್ದಾರೆ. ಪ್ರಿಯಾಂಕಾ ಫೋಟೋ ವೀಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷಿ ಆಗಿದ್ದು, ದೂರ ಹೋದರೂ ಪ್ರಿಯಾಂಕಾ ತನ್ನ ಮೂಲ ಮರೆತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇದೇ ವೇಳೆ ಪ್ರಿಯಾಂಕಾ ಮಗಳು ಮಾಲ್ತಿ ಮೇರಿ ಹಣೆಗೆ ಕೆಂಪು ಬಣ್ಣದ ತಿಲಕವಿಟ್ಟಿದ್ದು, ಕೇಸರಿ ಬಣ್ಣದ ಕುರ್ತಾದಲ್ಲಿ ಪುಟಾಣಿ ಮಾಲ್ತಿ ಕ್ಯೂಟ್ ಆಗಿ ಕಾಣುತ್ತಿದ್ದಾಳೆ. ತನ್ನ ಪತ್ನಿಯ ಸಂಸ್ಕೃತಿಯನ್ನು ಕೂಡ ನಿಕ್ ಗೌರವಿಸುತ್ತಿದ್ದು, ಖುಷಿ ಆಯ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. 

ಪಾಪ್ ಸಿಂಗರ್ ನಿಕ್​ ಜೋನಸ್​ ಅವರನ್ನು ಮದುವೆಯಾಗಿರೋ, ಪ್ರಿಯಾಂಕಾ ಚೋಪ್ರಾ, ಬಾಡಿಗೆ ತಾಯ್ತನದ ಮೂಲಕ ಮಗಳು ಮಾಲ್ತಿ ಮೇರಿ (Malti Marie)ಯನ್ನು ಪಡೆದಿದ್ದಾರೆ.   ಸದ್ಯ ನಟಿ ಪ್ರಿಯಾಂಕಾ ಚೋಪ್ರಾ ಯಾವುದೇ ಹಿಂದಿ ಚಿತ್ರದಲ್ಲಿ ನಟಿಸುತ್ತಿಲ್ಲ, ಯಾವುದೇ ಬಾಲಿವುಡ್ ಚಿತ್ರದ ಆಫರ್‌ ಅನ್ನು ಅವರು ಒಪ್ಪಿಕೊಂಡಿಲ್ಲ. ಹಾಲಿವುಡ್‌ ಸಿನಿಮಾ, ಸೀರಿಯಲ್‌ ಹಾಗೂ ವೆಬ್‌ ಸಿರೀಸ್‌ನಲ್ಲಿ ಮಾತ್ರ ನಟಿಸುತ್ತಿದ್ದಾರೆ.  

ಅಂದಹಾಗೆ 2017ರಲ್ಲಿ, ಹಾಲಿವುಡ್‍ನಲ್ಲಿ ವಿಶ್ವದ ಎರಡನೇ ಅತ್ಯಂತ ಸುಂದರ ಮಹಿಳೆಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿದ್ದರು. ಹಾಲಿವುಡ್‌ ನಟಿಯರಾದ ಏಂಜಲಿನಾ ಜೋಲಿ, ಎಮ್ಮಾ ವಾಟ್ಸನ್‌, ಬ್ಲೆಕ್‌ ಲೈವ್ಲಿ ಹಾಗೂ ಮಿಶೆಲ್‌ ಒಬಾಮ ಅವರನ್ನು ಹಿಂದಿಕ್ಕಿ ಈ ಸಾಧನೆಗೆ ಪಾತ್ರರಾಗಿದ್ದರು. 2000ರಲ್ಲಿ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ 2002ರಲ್ಲಿ ತಮಿಳು ಸಿನಿಮಾ ತಮಿಳನ್ (2002)ರ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು.

Latest Videos

click me!