ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ (Nick Jonas)ಜೋಡಿ ಅದ್ಭುತವಾಗಿದೆ. ಇವರಿಬ್ಬರ ರೊಮ್ಯಾಂಟಿಕ್ ಚಿತ್ರಗಳು ಪ್ರತಿದಿನ ವೈರಲ್ ಆಗುತ್ತಿವೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಇತ್ತೀಚೆಗೆ ತಮ್ಮ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಅವರು ತಮ್ಮ ಹೊಸ ಮನೆಯಲ್ಲಿ ತಮ್ಮ ಮೊದಲ ದೀಪಾವಳಿಯನ್ನು ಆಚರಿಸಿದರು. ಪ್ರಿಯಾಂಕಾ-ನಿಕ್ ಅವರ ಹೊಸ ಮನೆ ಅರಮನೆಗಿಂತ ಕಡಿಮೆಯಿಲ್ಲ. ಲಾಸ್ ಏಂಜಲೀಸ್‌ನಲ್ಲಿರುವ (Los Angeles) ದೇಸಿ ಗರ್ಲ್ ಅವರ ಐಷಾರಾಮಿ ಮನೆಯ ಕೆಲವು ಫೋಟೋಗಳು ಇಲ್ಲಿವೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಲಾಸ್ ಏಂಜಲೀಸ್‌ನ ತಮ್ಮ ಹೊಸ ಮನೆಯಲ್ಲಿ ದೀಪಾವಳಿ ಆಚರಿಸಿದ್ದಾರೆ. ಸ್ವತಃ ಪ್ರಿಯಾಂಕಾ ಮನೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ದೀಪಾವಳಿಯನ್ನು ತನ್ನ ಹೊಸ ಮನೆಯಲ್ಲಿ ಆಚರಿಸಿರುವುದಾಗಿ ಹೇಳಿಕೊಂಡಿದ್ದಾರೆ.
28
ತಮ್ಮ ಪೋಸ್ಟ್‌ನಲ್ಲಿ ಪ್ರಿಯಾಂಕಾ ಮನೆಯನ್ನು ವಿಶೇಷಗೊಳಿಸಿದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಹೊಸ ಮನೆಯಲ್ಲಿ ಹಲವು ಸುಂದರ ಸಂಗತಿಗಳು ಗಮನ ಸೆಳೆಯುತ್ತವೆ. ಪ್ರಿಯಾಂಕಾ ಅವರ ಹೊಸ ಮನೆಯ ಮೆಟ್ಟಿಲುಗಳು ಗಾಜಿನಿಂದ ಮಾಡಲ್ಪಟ್ಟಿದೆ. ಇದು ಮನೆಯ ಅಂದವನ್ನು ಹೆಚ್ಚಿಸಿದೆ.
38
ಪ್ರಿಯಾಂಕಾ ಚೋಪ್ರಾ ಅವರ ಮನೆಯ ಪ್ರವೇಶ ದ್ವಾರವೂ ತುಂಬಾ ದೊಡ್ಡದಾಗಿದೆ. ಅವರು ದೀಪಾವಳಿಯಂದು ಈ ಬಾಗಿಲನ್ನು ಹೂವಿನಿಂದ ಅಲಂಕರಿಸಿರವುದು ಫೋಟೋದಲ್ಲಿ ನೋಡಬಹುದು. ಪ್ರಿಯಾಂಕಾ ಇಲ್ಲಿ ಸಹ ಪೋಸ್ ನೀಡುತ್ತಿರುವುದು ಕಂಡುಬಂದಿದೆ.
48
ಪ್ರಿಯಾಂಕಾ ಅವರ ಹೊಸ ಮನೆಯ ಗೋಡೆಗಳ ಮೇಲೆ ಸುಂದರವಾದ ಅರ್ಟ್ ವರ್ಕ್‌ಗಳಿವೆ. ಮನೆಯನ್ನು ಹೂವಿನಿಂದ ಅಲಂಕರಿಸಲಾಗಿದೆ. ಮನೆಯ ಕೊಠಡಿಯೊಂದರಲ್ಲಿ ಪ್ರಿಯಾಂಕಾ ಮತ್ತು ನಿಕ್ ರೊಮ್ಯಾಂಟಿಕ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದರು
58
ಪ್ರಿಯಾಂಕಾ ಚೋಪ್ರಾ ( Priyanka Chopra ) ತನ್ನ ಅತ್ತಿಗೆಯೊಂದಿಗೆ ಅಂದರೆ ನಿಕ್ ಸಹೋದರನ ಪತ್ನಿಯರೊಂದಿಗೆ ದೀಪಾವಳಿ ಆಚರಿಸಿದರು. ಅವರೊಂದಿಗೆ ತೆಗೆದ ಪೋಟೋಗಳಲ್ಲಿ ಮನೆಯೊಳಗಿನ ಅಲಂಕಾರಗಳು ಗಮನ ಸೆಳೆಯುತ್ತವೆ.
68
ಶೇರ್ ಮಾಡಿರುವ ಫೋಟೋಗಳಲ್ಲಿ ಪ್ರಿಯಾಂಕಾ ತನ್ನ ಫ್ರೆಂಡ್ಸ್ ಜೊತೆ ಕಾಣಿಸಿಕೊಂಡಿದ್ದಾರೆ ಮತ್ತು ಹಬ್ಬದ ಸಮಯದಲ್ಲಿ ಪ್ರಿಯಾಂಕಾ ತನ್ನ ಸ್ನೇಹಿತೆರ ಜೊತೆ ಮಸ್ತಿ ಮಾಡಿದ್ದಾರೆ. ಫೋಟೋ ದಲ್ಲಿ ಸುಂದರವಾದ ಬಾರ್ ಕೂಡ ಇರುವುದು ಕಂಡುಬಂದಿದೆ.
78
ದೀಪಾವಳಿಯನ್ನು ವಿಶೇಷವಾಗಿ ಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು, ನಮ್ಮ ಮೊದಲ ಮನೆಯಲ್ಲಿ ಒಟ್ಟಿಗೆ ನಮ್ಮ ಮೊದಲ ದೀಪಾವಳಿ. ಇದು ಯಾವಾಗಲೂ ವಿಶೇಷವಾಗಿರುತ್ತದೆ ಮತ್ತು ಈ ಸಂಜೆಯನ್ನು ವಿಶೇಷವಾಗಿಸಲು ಶ್ರಮಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಪ್ರಿಯಾಂಕಾ ಚೋಪ್ರಾ ಬರೆದಿದ್ದಾರೆ.
88
ನೀವೆಲ್ಲರೂ ನನಗೆ ಏಜೆಂಲ್‌ಗಳು. ನೀವು ನನ್ನ ಮನೆ ಮತ್ತು ನಮ್ಮ ಸಂಸ್ಕೃತಿಯನ್ನು ಡ್ರೆಸ್ಸಿಂಗ್ ನಿಂದ ಮಾತ್ರವಲ್ಲದೆ ಡ್ಯಾನ್ಸ್ ನಿಂದಲೂ ಗೌರವಿಸಿದ್ದೀರಿ, ನಾನು ನನ್ನ ಮನೆಗೆ ಬಂದಿದ್ದೇನೆ ಎಂಬ ಭಾವನೆ ಮೂಡಿಸಿದ್ದೀರಿ ಎಂದು ಪ್ರಿಯಾಂಕಾ ಪೋಸ್ಟ್‌ನಲ್ಲಿ ಇನ್ನಷ್ಟು ಬರೆದು ಕೊಂಡಿದ್ದಾರೆ.