Airport Style: ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡ ಕಂಗನಾ!

Published : Nov 09, 2021, 05:05 PM ISTUpdated : Nov 09, 2021, 05:34 PM IST

ಬಾಲಿವುಡ್ (Bollywood) ನಟಿ ಕಂಗನಾ ರಣಾವತ್  (Kangana Ranaut)  ಯಾವಾಗಲೂ ತಮ್ಮ ಫೋಟೋಗಳು  ಮತ್ತು ಹೇಳಿಕೆಗಳಿಂದ ಚರ್ಚೆಯಲ್ಲಿರುತ್ತಾರೆ. ಅವರ ಮುಂಬರುವ ಸಿನಿಮಾ ಟಿಕು ವೆಡ್ಸ್ ಶೇರು ಚಿತ್ರೀಕರಣ ಆರಂಭಿಸಿದ್ದಾರೆ. ಈ ಚಿತ್ರವನ್ನೂ ಅವರೇ ನಿರ್ದೇಶಿಸಲಿದ್ದಾರೆ. ಈ ಚಿತ್ರದ ಮೂಲಕ ಬಾಲಿವುಡ್ ಕ್ವೀನ್  ನಿರ್ದೇಶನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಅವರು ನಿರಂತರವಾಗಿ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಚಲನಚಿತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಹಂಚಿಕೊಳ್ಳುತ್ತಾರೆ. ಇತ್ತಿಚೇಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವಳು ನ್ಯೂಡ್‌ ಮತ್ತು ಬ್ಲ್ಯಾಕ್‌ ಕಲರ್‌ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.

PREV
17
Airport Style: ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡ ಕಂಗನಾ!

ಕಂಗನಾ ರಣಾವತ್ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾದರು. ಆ ಸಮಯದಲ್ಲಿ ಅವರು ನ್ಯೂಡ್‌ ಮತ್ತು ಬ್ಲ್ಯಾಕ್‌ ಕಲರ್‌  ಸೀರೆಯನ್ನು ಧರಿಸಿದ್ದರು. ಟ್ರೆಡಿಷನಲ್‌ ಲುಕ್‌ನಲ್ಲಿ ಕಂಗನಾ  ಸುಂದರವಾಗಿ ಕಾಣುತ್ತಿದ್ದರು.


 

27

 ಕಂಗನಾ ಸೀರೆಯೊಂದಿಗೆ ಬ್ಲ್ಯಾಕ್‌ ಕೂಲಿಂಗ್‌ ಗ್ಲಾಸ್‌ ಸಹ  ಧರಿಸಿದ್ದರು. ಕಂದು ಬಣ್ಣದ ಹ್ಯಾಂಡ್‌ ಬ್ಯಾಗ್‌ ಹಿಡಿದು ತಮ್ಮ ಲುಕ್‌ ಅನ್ನು   ಪೂರ್ಣಗೊಳಿಸಿದ್ದರು. ಅಷ್ಟೇ ಅಲ್ಲ ಕಂಗನಾ   ತನ್ನ ಕುತ್ತಿಗೆ ಮತ್ತು ಕಿವಿಗೆ ಮುತ್ತಿನ ಸೆಟ್ ಧರಿಸಿದ್ದರು. ಈ ಅವತಾರದಲ್ಲಿ ಕಂಗನಾ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

37

ಕೆಲಸದ  ಬಗ್ಗೆ ಹೇಳುವುದಾದರೆ, ಕಂಗನಾ ಅವರ ಚಿತ್ರ 'ತಲೈವಿ' ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದೆ. ಜನರು ಚಿತ್ರವನ್ನು ತುಂಬಾ ಇಷ್ಟಪಟ್ಟಿದ್ದಾರೆ. ನಟಿ 'ಮಣಿಕರ್ಣಿಕಾ ರಿಟರ್ನ್ಸ್' ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು ಕಾಶ್ಮೀರದ ರಾಣಿ ದಿಡ್ಡಾ ಪಾತ್ರವನ್ನು ನಿರ್ವಹಿಸಲಿದ್ದಾರೆ.

47

ಕಂಗನಾ ರಣಾವತ್ ಅವರು ತಮ್ಮ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಟಿಕೂ ವೆಡ್ಸ್ ಶೇರು' ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಈ ಚಿತ್ರದಲ್ಲಿ ಅವರು ತಮ್ಮ ನೆಚ್ಚಿನ ಕಲಾವಿದ ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.


 

57

ಅದ್ಭುತ ನಟಿಯ ಜೊತೆಗೆ, ಕಂಗನಾ ರಣಾವತ್ ಅವರು ಬೋಲ್ಡ್‌ನೆಸ್‌ ಹಾಗೂ ವಿವಾದಗಳಿಗೆ ಹೆಸರುವಾಸಿಯಾಗಿದ್ದಾರೆ. ನಟಿ ಪ್ರತಿದಿನ ಯಾರನ್ನಾದರೂ ಗುರಿಯಾಗಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಅವರು ಮಹಾರಾಷ್ಟ್ರ ಸರ್ಕಾರದೊಂದಿಗೆ ಕಿತ್ತಾಡಿಕೊಂಡಿದ್ದರು.

67

ಸಲ್ಮಾನ್ ಖಾನ್  ಅವರ ತಂಗಿ ಗಂಡ ಆಯುಷ್ ಶರ್ಮಾ ಅವರು ತಮ್ಮ ಆಂಟಿಮ್ ಚಿತ್ರದ ಪ್ರಚಾರಕ್ಕಾಗಿ ಮೆಹಬೂಬ್ ಸ್ಟುಡಿಯೋ ತಲುಪಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್‌ನ  ಭಾಯಿಜಾನ್ ಸಲ್ಮಾನ್‌  ಕೂಡ ಪೊಲೀಸ್ ಯೂನಿಫಾರ್ಮ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಮಹೇಶ್ ಮಂಜ್ರೇಕರ್ ನಿರ್ಮಿಸಿದ್ದಾರೆ.
 

77

ಟಿವಿ ಮತ್ತು ಬಾಲಿವುಡ್ ನಟ ಗುರ್ಮೀತ್ ಚೌಧರಿ (Gurmeet Choudhary) ಅವರ ಪತ್ನಿ ಡೆಬಿನಾ ಬೊನ್ನರ್ಜಿ (Debina Bonnerjee) ಅವರೊಂದಿಗೆ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡರು. ಗುರ್ಮೀತ್ ಕಪ್ಪು ಶರ್ಟ್‌ನೊಂದಿಗೆ ಕಪ್ಪು ಕನ್ನಡಕವನ್ನು ಧರಿಸಿದ್ದರೆ, ಅವರ ಪತ್ನಿ ಗುಲಾಬಿ ಬಣ್ಣದ ಜಂಪ್‌ಸೂಟ್ ಧರಿಸಿದ್ದರು.  

Read more Photos on
click me!

Recommended Stories