ಪ್ರಿಯಾಂಕಾ ಚೋಪ್ರಾ ಸದ್ಯ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಆದರೆ ಈ ಮಧ್ಯೆ ತನ್ನ ಜೀವನ ಸಂಗಾತಿಯೊಂದಿಗೆ ಸಮಯ ಕಳೆಯಲು ಹೆಣಗಾಡುತ್ತಾರೆ. ಮದುವೆಯಾಗಿ ಮೂರು ವರ್ಷ ಕಳೆದರೂ ನಿಕ್ ಮತ್ತು ಪ್ರಿಯಾಂಕಾ ನಡುವಿನ ಪ್ರೀತಿ ಹಾಗೆಯೇ ಉಳಿದಿದೆ. ಇಬ್ಬರಿಗೂ ಸಮಯ ಸಿಕ್ಕಾಗಲೆಲ್ಲ ಪರಸ್ಪರ ಒಟ್ಟಾಗಿಯೇ ಸಮಯ ಕಳೆಯಲು ಇಷ್ಟಪಡುತ್ತಾರೆ.
ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ (Instagram Story) ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರು ಭಾನುವಾರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.ಇದರಲ್ಲಿ ಪ್ರಿಯಾಂಕಾ ಮತ್ತು ನಿಕ್ ಕಾರಿನಲ್ಲಿ ಕುಳಿತಿದ್ದಾರೆ ಮತ್ತು ಇಬ್ಬರೂ ಪರಸ್ಪರರ ಕೈ ಹಿಡಿದು ಕೊಂಡಿದ್ದಾರೆ.
ಆದರೆ, ಈ ಫೋಟೋದಲ್ಲಿ ಪ್ರಿಯಾಂಕಾ ಅಥವಾ ನಿಕ್ ಮುಖವಾಗಲಿ ಕಾಣಿಸುತ್ತಿಲ್ಲ. ಆದರೆ ಈ ಫೋಟೋ ಮೂಲಕ ನಟಿ ಮನದಾಳದ ಮಾತನ್ನು ಹೇಳಿದ್ದಾರೆ. ಅದು ಅವರ ನೆಚ್ಚಿನ ಭಾನುವಾರ' ಎಂದು ಬರೆದಿದ್ದಾರೆ. ಇದರೊಂದಿಗೆ ರೆಡ್ ಹಾರ್ಟ್ ನ ಎಮೋಜಿಯನ್ನೂ ಹಾಕಿದ್ದಾರೆ.
ನಿಕ್ ಮತ್ತು ಪ್ರಿಯಾಂಕಾ ಪರಸ್ಪರ ಸರ್ಪ್ರೈಸ್ ನೀಡುತ್ತಲೇ ಇರುತ್ತಾರೆ. 'ತಾನು ಮತ್ತು ನಿಕ್ ಒಬ್ಬರನ್ನೊಬ್ಬರು ಎಷ್ಟು ಗೌರವಿಸುತ್ತೇವೆ ಮತ್ತು ಪ್ರೀತಿಸುತ್ತೇವೆ' ಎಂದು ಪ್ರಿಯಾಂಕಾ ಈಗಾಗಲೇ ಸಂದರ್ಶನಗಳಲ್ಲಿ ಸಾಕಷ್ಟು ಬಾರಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ, 'ವೃತ್ತಿಪರ ಬದ್ಧತೆಗಳಿಂದಾಗಿ ನಾನು ಮತ್ತು ನಿಕ್ ಇಬ್ಬರೂ ಹೆಚ್ಚು ಹೊರಗುಳಿಯುತ್ತೇವೆ. ಆದರೆ ಅವಕಾಶ ಬಂದ ತಕ್ಷಣ ಅವನು ನನ್ನ ಬಳಿಗೆ ಬರುತ್ತಾನೆ ಅಥವಾ ನಾನು ಹೋಗುತ್ತೇನೆ. ನಾವಿಬ್ಬರೂ ಒಬ್ಬರಿಗೊಬ್ಬರು ಸರ್‌ಪ್ರೈಸ್ ನೀಡುತ್ತೇವೆ' ಎಂದಿದ್ದಾರೆ.
'ದೇಸಿ ಗರ್ಲ್' ಭಾನುವಾರ ತನ್ನ ಪೋಷಕರ ಫೋಟೋವನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ತನ್ನ ಪೋಷಕರ ಮದುವೆಯ ವಾರ್ಷಿಕೋತ್ಸವದಂದು ಹಳೆಯ ಫೋಟೋವನ್ನು ಪೋಸ್ಟ್ ಮಾಡಿದ್ದರು. 'ನಾನು ಯಾವಾಗಲೂ ನಿಮ್ಮ ವಾರ್ಷಿಕೋತ್ಸವವನ್ನು ಹೀಗೆ ನೆನಪಿಸಿಕೊಳ್ಳುತ್ತೇನೆ. ನಾನು ನಿಮ್ಮನ್ನು ನೆನಪಿಸಿ ಕೊಳ್ಳುತ್ತಿದ್ದೇನೆ. ಪ್ರೀತಿಸುತ್ತೇನೆ ಎಂದು ಬರೆದಿದ್ದಾರೆ.
ಪ್ರಿಯಾಂಕಾ ತನ್ನ ತಂದೆಯನ್ನು ತುಂಬಾ ಪ್ರೀತಿಸುತ್ತಾರೆ. ತನ್ನ ತಂದೆಗಾಗಿ ಕೈ ಮೇಲೆ ಅಚ್ಚೆ ಕೂಡ ಹಾಕಿಸಿಕೊಂಡಿದ್ದಾರೆ. ನಟಿಯ ತಂದೆ 10 ಜೂನ್ 2013 ರಂದು ಕ್ಯಾನ್ಸರ್ (Cancer) ರೋಗದ ಕಾರಣದಿಂದ ನಿಧನರಾದರು.