ನಟರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ರಿಲೆಷನ್‌ಶಿಪ್ ಬಗ್ಗೆ ಇತ್ತೀಚೆಗೆ ವದಂತಿಗಳು ಬಲವಾಗಿ ಹರಡುತ್ತಿವೆ. ಆ ವದಂತಿಗಳ ನಡುವೆ, ಸೋಮವಾರ ಅವರು ಮದುವೆಯಾಗಲಿದ್ದಾರೆ ಎಂಬ ಊಹಾಪೋಹಗಳು ಕಾಡ್ಜಿಚ್ಚಿನಂತೆ ಹಬ್ಬುತ್ತಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯು ಈ ವರ್ಷದ ಅಂತ್ಯದ ವೇಳೆಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಈ ಸುದ್ದಿ ನೋಡಿ ಇಬ್ಬರು ನಟರ ಅಭಿಮಾನಿಗಳು ಸಂತೋಷದಿಂದ ಕುಣಿದಾಡುತ್ತಿದ್ದರೆ, ವಿಜಯ್ ಸುದ್ದಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ನಟ ವಿಜಯ್ ದೇವರಕೊಂಡ ಮದುವೆಯ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ ಈ ರೂಮರ್ ಅನ್ನು 'ರಬ್ಬಿಶ್' ಎಂದಿದ್ದಾರೆ. 'As usual nonsense. Don’t we just ❤️ da news!' ಎಂದು ತಮ್ಮ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ್ದಾರೆ.
ತೆಲುಗು ಸ್ಟಾರ್ಸ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಂದಿನಿಂದ ಈ ಜೋಡಿಯ ಅಭಿಮಾನಿಗಳು ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಗೆ ಫಿದಾ ಆಗಿದ್ದಾರೆ.
ಸದ್ಯ ವಿಜಯ್ ದೇವರಕೊಂಡ ಮುಂಬೈನಲ್ಲಿ ಲಿಗರ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ನಟಿ ಅನನ್ಯಾ ಪಾಂಡೆ ಕೂಡ ನಟಿಸಿರುವ ಪುರಿ ಜಗನ್ನಾಥ್ ಅವರ ಈ ಚಿತ್ರವು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಈ ನಡುವೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿಸಿದರು ಇಬ್ಬರು ಆಗಾಗ್ಗೆ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ,
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಹೊಸ ವರ್ಷವನ್ನು ಗೋವಾದಲ್ಲಿ ಒಟ್ಟಿಗೆ ಆಚರಿಸಿದ್ದರು. ಅವರೊಂದಿಗೆ ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಕೂಡ ಸೇರಿಕೊಂಡರು. ರಶ್ಮಿಕಾ ವಿಜಯ್ ಅವರ ತಾಯಿ ಮಾಧವಿಯೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಬಗ್ಗೆ ತೆರೆದಿಟ್ಟಿದ್ದರು. 'ಪುಷ್ಪಾ: ದಿ ರೈಸ್' ನಟಿ ತಾನು ಮದುವೆಗೆ ತುಂಬಾ ಚಿಕ್ಕವಳಾಗಿದ್ದೇನೆ ಎಂದು ಹೇಳಿದರು. ಆದರೆ 'ಮದುವೆಯಾಗುವವರು ನಿಮಗೆ ಕಂಫರ್ಟಬಲ್ ಆಗುವಂತೆ ಮಾಡುವವರಾಗಿರಬೇಕು' ಎಂದೂ ಹೇಳಿದರು. ಜೊತೆಗೆ ರಕ್ಷಿತ್ ಶೆಟ್ಟಿ ಮಾಡಿದ ಟ್ವೀಟ್‌ವೊಂದು ವೈರಲ್ ಆಗಿದ್ದು, ಗೂಡಾರ್ಥ ಇರೋ ಈ ಟ್ವೀಟ್ ಅನ್ನು ರಶ್ಮಿಕಾ ಜೊತೆ ಒಂದಾಗಬಹುದು ಎಂದು ಊಹಿಸಲಾಗಿತ್ತು.