Prithviraj in Hindi series: ಭಾರತದ ಬಿಸ್ಕತ್ ಕಿಂಗ್ ಕಥೆಯಲ್ಲಿ ಮಾಲಿವುಡ್ ನಟ

First Published | Nov 30, 2021, 9:21 PM IST
  • Prithviraj in Hindi series: ಹಿಂದಿ ವೆಬ್ ಸಿರೀಸ್‌ನಲ್ಲಿ ಸೌತ್ ನಟ
  • ಮಾಲಿವುಡ್‌ ನಟ ನಟಿಸಿ, ನಿರ್ದೇಶಿಸೋ ವೆಬ್ ಸಿರೀಸ್
  • India's 'Biscuit King' Rajan Pillai ಜೀವನಾಧಾರಿತ ಸಿರೀಸ್

ಪೃಥ್ವಿರಾಜ್ ಸುಕುಮಾರನ್ (Prithviraj Sukumaran)ಅವರು ಮಲಯಾಳಂ ಇಂಡಸ್ಟ್ರಿಯಲ್ಲಿ ಫೇಮಸ್ ನಟ. ನಟನೆ ಮತ್ತು ನಿರ್ದೇಶನದ ಮೂಲಕ ಬಹಳಷ್ಟು ಸಿನಿಪ್ರಿಯರ ಮನಸಲ್ಲಿ ಜಾಗ ಪಡೆದಿರೋ ನಟ.

2019 ರಲ್ಲಿ ಮೋಹನ್ ಲಾಲ್(Mohanlal) ಅಭಿನಯದ ಲೂಸಿಫರ್ ಅನ್ನು ನಿರ್ದೇಶಿಸಿದ ನಂತರ ಹಾಗೂ ಅನೇಕ ಸಿನಿಮಾಗಳಲ್ಲಿ(Cinema) ನಟಿಸಿದ ನಂತರ, ಅವರು ಈಗ ಭಾರತದ 'ಬಿಸ್ಕತ್ ಕಿಂಗ್' ರಾಜನ್ ಪಿಳ್ಳೈ ಅವರ ಜೀವನವನ್ನು ಆಧರಿಸಿ ಮುಂಬರುವ ಹಿಂದಿ ವೆಬ್ ಸಿರೀಸ್ ನಿರ್ದೇಶಿಸಲು ಮತ್ತು ನಟಿಸಲು ಸಿದ್ಧರಾಗಿದ್ದಾರೆ.

Tap to resize

ಯೂಡಲ್ಸ್ ಫಿಲ್ಮ್ಸ್ ಈ ಪ್ರಾಜೆಕ್ಟ್ ನಿರ್ಮಾಣ ಮಾಡಲಿದೆ. ಇದನ್ನು ಹಿಂದಿಯಲ್ಲಿ ನಿರ್ಮಿಸಲಾಗುವುದು. ಈ ಸರಣಿಯು ಒಟಿಟಿ ಪ್ರಪಂಚ ಮತ್ತು ಬಾಲಿವುಡ್‌ನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ಚೊಚ್ಚಲ ಪ್ರವೇಶ. ಇನ್ನೂ ಹೆಸರಿಡದ ಸಿರೀಸ್ ಮಲಯಾಳಂನಲ್ಲೂ ನಿರ್ಮಾಣವಾಗಲಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ಮನುಷ್ಯನ ಜೀವನದ ಕತ್ತಲು ಮತ್ತು ಬೆಳಕು ನಟನಾಗಿ ಹಾಗೂ ನಿರ್ದೇಶಕನಾಗಿ ನನ್ನನ್ನು ಯಾವಾಗಲೂ ಪ್ರಭಾವಿಸುವ ವಿಚಾರ. ಗುರಿ, ಗೆಲುವು, ಯಶಸ್ಸು, ಕಾರ್ಪೊರೇಟ್‌ನಿಂದ ಜೈಲಿನ ತನಕ ಮನುಷ್ಯನ ಜೀವನ ವಿಶೇಷ ಎಂದಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ಪ್ರಸ್ತುತ ತಮ್ಮ ಮುಂಬರುವ ಸಿನಿಮಾ ಕಡುವಕ್ಕುನ್ನೆಲ್ ಕುರುವಚನ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಎಂದು ಹೇಳಲಾದ ಈ ಸಿನಿಮಾವನ್ನು ಶಾಜಿ ಕೈಲಾಸ್ ನಿರ್ದೇಶಿಸಿದ್ದಾರೆ. ಅವರು ಮೋಹನ್ ಲಾಲ್ ಅವರ ನಿರ್ದೇಶನದ ಬ್ರೋ ಡ್ಯಾಡಿ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Latest Videos

click me!