Death Threat to Kangana: ಸೋನಿಯಾ ಗಾಂಧಿ ನೆರವು ಕೇಳಿದ ಕ್ವೀನ್

First Published | Nov 30, 2021, 6:24 PM IST

ಬಾಲಿವುಡ್‌ನ(Bollywood) ಪಾಪ್ಯುಲರ್ ನಟಿ ಕಂಗನಾ ರಣಾವತ್‌ಗೆ(Kangana Ranaut) ಕೊಲೆ ಬೆದರಿಕೆ(Death Threat) ಬಂದಿದೆ. ಕ್ವೀನ್ ನಟಿ ಈ ಬಗ್ಗೆ ಸೋನಿಯಾ ಗಾಂಧಿಯಲ್ಲಿ(Sonia Gandhi) ನೆರವು ಕೇಳಿದ್ದಾರೆ. ಆಗಿರೋದೇನು ?

ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಎಲ್ಲ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸೋ ನಟಿಗೆ ಈಗ ಕೊಲೆ ಬೆದರಿಕೆ ಬಂದಿದೆ. ಅದೂ ಅವರು ಆಡಿದ ಮಾತುಗಳಿಂದಲೇ.

ನಟಿ ಕಂಗನಾ ರಣಾವತ್(Kangana Ranaut) ಅವರು ಇತ್ತೀಚೆಗೆ ಬಟಿಂಡಾ ನಿವಾಸಿಯೊಬ್ಬರ ವಿರುದ್ಧ ದೂರು ನೀಡಿದ್ದು ಎಫ್‌ಐಆರ್(FIR) ದಾಖಲಿಸಲಾಗಿದೆ. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ನಟಿ ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದಾರೆ.

Tap to resize

ಕಂಗನಾ ಎಫ್‌ಐಆರ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ 26/11 ದಾಳಿಯ ಬಗ್ಗೆ ಮಾತನಾಡಿದ ನಂತರ ನನಗೆ ಈ ಬೆದರಿಕೆಗಳು ಬಂದವು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮೊರೆ ಹೋಗಿರೋ ನಟಿ ತಮಗೆ ನೆರವಾಗುವಂತೆ ಕೇಳಿಕೊಂಡಿದ್ದಾರೆ. ಈ ಸುದ್ದಿ ಈಗ ವೈರಲ್ ಆಗಿದೆ

ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅವರು ಸೋನಿಯಾ ಗಾಂಧಿ(Sonia Gandhi) ಅವರಿಗೆ ಮನವಿ ಮಾಡಿದ್ದಾರೆ.

ಬೆದರಿಕೆಗಳಿಗೆ ಹೆದರುವುದಿಲ್ಲ ಎಂದ ಕಂಗನಾ, ಭಾರತಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಈ ಸುದ್ದಿ ಕಂಗನಾ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ

Latest Videos

click me!