ಆಲಿಯಾ ಗುಲಾಬಿ ಬಣ್ಣದ ಪಾರದರ್ಶಕ ಟಾಪ್ ಅನ್ನು ಧರಿಸಿರುವುದನ್ನು ಫೋಟೋಗಳಲ್ಲಿ ನೋಡಬಹುದು. ಇದೇ ಮೊದಲ ಬಾರಿಗೆ ಆಲಿಯಾ ಮತ್ತು ರಣಬೀರ್ ತೆರೆ ಹಂಚಿಕೊಂಡಿರುವ ಸಿನಿಮಾ ಇದಾಗಿದೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ ಚಿತ್ರ ತಯಾರಿಸಲು ಸುಮಾರು 5 ವರ್ಷಗಳನ್ನು ತೆಗೆದುಕೊಂಡಿತ್ತು. ಈ ಐದು ವರ್ಷಗಳಲ್ಲಿ ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಯಿತು.
ಚಿತ್ರದ ಪ್ರಚಾರಕ್ಕಾಗಿ ಆಲಿಯಾ ಭಟ್ ತನ್ನ ಪತಿಯೊಂದಿಗೆ ಗುಲಾಬಿ ಬಣ್ಣದ ಟಾಪ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಆಲಿಯಾ ಧರಿಸಿದ್ದ ಪಿಂಕ್ ಬಣ್ಣದ ಪಾರದರ್ಶಕ ಟಾಪ್‌ನಲ್ಲಿ ಅವರ ಬೇಬಿ ಬಂಪ್ ಕಾಣಿಸುತ್ತಿದೆ.
ಛಾಯಾಗ್ರಾಹಕರಿಗೆ ಪೋಸ್ ನೀಡುವಾಗ ರಣಬೀರ್ ಕಪೂರ್ ಪತ್ನಿಯನ್ನು ತಮಾಷೆ ಮಾಡುತ್ತಿರುವುದು ಕಂಡುಬಂದಿದೆ ಮತ್ತು ಅವರು ಆಲಿಯಾರ ಮಗುವಿನ ಬಂಪ್ ಕಡೆಗೆ ಕೈ ತೋರಿಸುತ್ತಿದ್ದಾರೆ.
ಪ್ರಚಾರದ ವೇಳೆ ರಣಬೀರ್-ಆಲಿಯಾ ಕೂಡ ಪರಸ್ಪರ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡು, ಇಬ್ಬರೂ ಪರಸ್ಪರ ಹೆಗಲ ಮೇಲೆ ಕೈ ಹಾಕಿ ಪೋಸ್ ನೀಡಿದ್ದಾರೆ ಮತ್ತು ಈ ಸಮಯದಲ್ಲಿ, ಆಲಿಯಾ ತುಂಬಾ ಸಂತೋಷದಿಂದ ಕಾಣುತ್ತಿದ್ದರು.
ಏಪ್ರಿಲ್ 14 ರಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಅವರ ಮದುವೆ ಖಾಸಗಿ ಸಮಾರಂಭವಾಗಿತ್ತು. ಅದಕ್ಕೆ ಕೆಲವರನ್ನು ಮಾತ್ರ ಆಹ್ವಾನಿಸಲಾಗಿತ್ತು.
ಮದುವೆಯಾದ 2 ತಿಂಗಳ ನಂತರ, ಆಲಿಯಾ ಭಟ್ ಅವರು ತಮ್ಮ ಪ್ರೆಗ್ನೆಂಸಿ ಬಗ್ಗೆ Instagram ಮೂಲಕ ತಿಳಿಸಿದ್ದರು. ಆಲಿಯಾ ತಾಯಾಗಲಿರುವ ಸುದ್ದಿ ಕೇಳಿ ಫ್ಯಾನ್ಸ್ ಆಶ್ಚರ್ಯಕ್ಕೆ ಒಳಾಗಿದ್ದರು.