ಕಾಲಿವುಡ್ ಸ್ಟಾರ್ ನಟ ಚಿಯಾನ್ ವಿಕ್ರಾಮ್ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ದಿಢೀರ್ ಸಿಲಿಕಾನ್ ಸಿಟಿಯಲ್ಲಿ ಪ್ರತ್ಯಕ್ಷ ಆದ ಕಾಲಿವುಡ್ ಸ್ಟಾರ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ಚಿಯಾನ್ ವಿಕ್ರಮ್ ಬೆಂಗಳೂರಿನ ಏರ್ಪೋರ್ಟ್‌ನಿಂದ ಹೊರಬರುತ್ತಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.
ಚಿಯಾನ್ ವಿಕ್ರಮ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದ ದಾಡಿ ಬಿಟ್ಟು, ಕ್ಯಾಪ್ ಧರಿಸಿದ್ದಾರೆ. ಬಳಿ ಟೀ ಶರ್ಟ್ ಮತ್ತು ಡೆನಿಮ್ ಕೋಟ್ ಧರಿಸಿರುವ ಚಿಯಾನ್ ವಿಕ್ರಮ್ ಲುಕ್ ಅಭಿಮಾನಿಗಳ ಗಮನಸೆಳೆಯುತ್ತಿದೆ. ಏರ್ಪೋರ್‌ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.
ಅಂದಹಾಗೆ ಚಿಯಾನ್ ವಿಕ್ರಮ್ ಸದ್ಯ ಬಹುನಿರೀಕ್ಷೆಯ ಕೋಬ್ರಾ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಹಾಗಾಗಿ ಸಿನಿಮಾ ಪ್ರಚಾರಕ್ಕೆಂದು ಚಿಯಾನ್ ವಿಕ್ರಮ್ ಬೆಂಗಳೂರಿಗೆ ಆಗಮಿಸಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಒಂದಾಗಿರುವ ಕೋಬ್ರಾ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಗೆ ನಾಯಕಿಯಾಗಿ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಕೋಬ್ರಾ ಸಿನಿಮಾ ವಿಕ್ರಮ್ ನಟನೆಯ 58ನೇ ಸಿನಿಮಾವಾಗಿದೆ. ಈ ಸಿನಿಮಾ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಕೋಬ್ರಾ ತಂಡ ಬೆಂಗಳೂರಿಗೆ ಆಗಮಿಸಿದೆ. ಕೋಬ್ರಾ ಸಿನಿಮಾ ಕನ್ನಡಿಗರು ವಿಶೇಷವಾಗಿದೆ. ಸಿನಿಮಾದ ನಾಯಕಿ ಕನ್ನಡತಿ. ಹಾಗಾಗಿ ಕನ್ನಡಿಗರಿಗೂ ಈ ಸಿನಿಮಾ ಮೇಲೆ ವಿಶೇಷವಾದ ಪ್ರೀತಿ ಇದೆ.
ಕೆಜಿಎಫ್ ಸಿನಿಮಾ ಬಳಿಕ ಶ್ರೀನಿಧಿ ನಟಿಸಿದ ಮೊದಲ ಸಿನಿಮಾ ಇದಾಗಿದೆ. ಕೆಜಿಎಫ್ ಮೊದಲ ಭಾಗ ಮುಗಿದ ಬಳಿಕ ಶ್ರೀನಿಧಿ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ರಿಲೀಸ್ ಗೆ ರೆಡಿಯಾಗಿದೆ. ಇನ್ನು ಈ ಸಿನಿಮಾದಲ್ಲಿ ಇರ್ಫಾನ್ ಪಠಾಣ್ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ನಟ ಚಿಯಾನ್ ವಿಕ್ರಮ್ ಇತ್ತೀಚಿಗಷ್ಟೆ ಅನಾರೋಗ್ಯದ ಕಾರಣ ದಿಢೀರ್ ಆಸ್ಪತ್ರೆ ಸೇರಿದ್ದರು. ಹೃದಯಾಘಾತವಾಗಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಬಳಿಕ ಚಿಯಾನ್ ಹೃದಯಾಘಾತವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಸದ್ಯ ಚೇತರಿಸಿಕೊಂಡಿರುವ ಚಿಯಾನ್ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕೋಬ್ರಾ ರಿಲೀಸ್ ಗೆ ಕಾಯುತ್ತಿದ್ದಾರೆ.