ಯಶ್ ನಿರ್ಮಾಣದ "ರಾಮಾಯಣ"ದ ಬಗ್ಗೆ ಹೊರಬಂತು ಅತಿದೊಡ್ಡ ಭವಿಷ್ಯವಾಣಿ

Published : Jul 05, 2025, 09:13 AM IST

ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದ ರಾಮಾಯಣ ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಭಾರೀ ಕುತೂಹಲ ಮೂಡಿಸಿದೆ. ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ನಟನೆಯ ಈ ಚಿತ್ರದ ಬಗ್ಗೆ ಅತಿ ದೊಡ್ಡ ಭವಿಷ್ಯ ನುಡಿಯಲಾಗಿದೆ.

PREV
16

ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದ ರಾಮಾಯಣ ದೇಶದಲ್ಲಿ ಹಲ್‌ಚಲ್ ಸೃಷ್ಟಿಸಿದೆ. ಇಡೀ ದೇಶ ರಾಮಾಯಣದ ಗ್ಲಿಂಪ್ಸ್ ಕಂಡು ಪುಳಕಗೊಂಡಿದೆ. ರಾಮನಾಗಿ ರಣ್‌ಬೀರ್ ಕಪೂರ್, ರಾವಣನಗಿ ಯಶ್‌ ಲುಕ್‌ ಕಂಡು ಅಭಿಮಾನಿಗಳು ರೋಮಾಂಚಿತರಾಗಿದ್ದಾರೆ.

26

ರಾಮಾಯಣ' ಪಾರ್ಟ್‌ 1 ಗ್ಲಿಂಪ್ಸ್ ಬಿಡುಗಡೆ ಆಮಂತ್ರಣದಲ್ಲಿ ಚಿತ್ರದ ಪ್ರಮುಖ ಕಲಾವಿದರು ಸಹಿ ಮಾಡಿದ್ದಾರೆ. ಎಲ್ಲಾ ಕಲಾವಿದರು ಇಂಗ್ಲಿಷ್‌ನಲ್ಲಿ ಸಹಿ ಮಾಡಿದ್ರೆ, ರಾಕಿಂಗ್ ಸ್ಟಾರ್ ಮಾತ್ರ ಕನ್ನಡದಲ್ಲಿ ವಿಶೇಷವಾಗಿ ಯಶ್ ಎಂದು ಸಹಿ ಮಾಡಿದ್ದಾರೆ. ಈ ಮೂಲಕ ಯಶ್ ತಮ್ಮ ಕನ್ನಡಾಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ಯಶ್ ನಿರ್ಮಾಣದ ಕುರಿತು ಅತಿದೊಡ್ಡ ಭವಿಷ್ಯವಾಣಿ ಹೊರ ಬಂದಿದೆ.

36

ರಾಮಾಯಣ ಸಿನಿಮಾ ಸೆಟ್ಟೇರಾದಾಗಿನಿಂದ ಚಿತ್ರ ತೀವ್ರ ಕುತೂಹಲ ಮೂಡಿಸಿದೆ. ರಾಮನಾಗಿ ರಣ್‌ಬೀರ್ ಕಪೂರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಚಿತ್ರ ಗ್ಲಿಂಪ್ಸ್ ನೋಡಿದ ಚಿತ್ರ ವಿಮರ್ಶಕರು ಮತ್ತು ಅಭಿಮಾನಿಗಳು ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ. ಆ ಭವಿಷ್ಯವಾಣಿ ಏನು ಎಂದು ನೋಡೋಣ ಬನ್ನಿ.

46

ರಾಮಯಾಣ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಚಿತ್ರದ ಬಜೆಟ್ 850 ಕೋಟಿ ರೂ. ಎಂದು ವರದಿಯಾಗಿದೆ.

56

ಏನದು ಭವಿಷ್ಯವಾಣಿ?

ಚಿತ್ರದ ಕ್ರೇಜ್ ಗಮನಿಸಿರುವ ಅಭಿಮಾನಿಗಳು, ಈ ಸಿನಿಮಾ ಐತಿಹಾಸಿಕ ದಾಖಲೆಯನ್ನು ಬರೆಯಲಿದೆ. ಬಾಕ್ಸ್‌ ಆಫಿಸ್‌ನಲ್ಲಿ 2 ಸಾವಿರ ಕೋಟಿ ರೂ.ಗಳವರೆಗೆ ಕಲೆಕ್ಷನ್ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 7 ನಿಮಿಷದ ಶೋ-ರೀಲ್ ಮತ್ತು 3 ನಿಮಿಷದ ಟೀಸರ್ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿದೆ.

66

ನಿತೀಶ್ ತಿವಾರಿ ವಿಶ್ವಾಸ

ಕೆಲವರು ರಣ್‌ಬೀರ್ ಕಪೂರ್ ರಾಮನ ಪಾತ್ರ ದಲ್ಲಿ ನಟಿಸುತ್ತಿರೋದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರ ವಿಶ್ವಮಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾ ಆಗಲಿದೆ. ಭಾರತದಲ್ಲಿ ಮಾತ್ರ ವಿದೇಶದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ನಿತೇಶ್ ತಿವಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories