ನಟ ಪ್ರಕಾಶ್ ರಾಜ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟನ ವಿರುದ್ದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಅಷ್ಟಕ್ಕೂ ಈ ಬಾರಿ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲಾಗಿದ್ದೇಕೆ? ಏನಿದು ಪ್ರಕರಣ
ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಟ ಪ್ರಕಾಶ್ ರಾಜ್ ಅಬ್ಬರಿಸಿ ಬೊಬ್ಬಿರಿದಿದ್ದರು. ಈ ಮೂಲಕ ಯುವ ಕಾಕ್ರೋಚ್‌ಗಳಿಗೆ ಹುಮ್ಮಸ್ಸು ನೀಡಿದ್ದರು. ಬೆಂಗಳೂರು ಪ್ರತಿಭಟನೆ ಬಳಿಗೆ ಸಂಭ್ರಮದಿಂದ ಮನೆಗೆ ತೆರಳಿದ ಪ್ರಕಾಶ್ ರಾಜ್‌ಗೆ ಸಂಕಷ್ಟಗಳು ಶುರುವಾಗಿದೆ. ತಿರುಪತಿ ನ್ಯಾಯಾಲಯದಲ್ಲಿ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
26
ದೂರು ದಾಖಲಾಗಿದ್ದು ಯಾಕೆ?
ನಟ ಪ್ರಕಾಶ್ ರಾಜ್ ವಿರುದ್ದ ದೂರು ದಾಖಲಾಗಲು ಕಾರಣ ನಟನ ಹೇಳಿಕೆ. ಇತ್ತೀಚೆಗೆ ಕೇರಳ ಸಾಹಿತ್ಯ ಕಾರ್ಯಕ್ರಮದಲ್ಲಿ ರಾಮ ಲಕ್ಷ್ಮಣ, ರಾಮಾಯಾಣ ಕುರಿತು ನೀಡಿದ ಹೇಳಿಕೆ ಮುಳುವಾಗಿದೆ. ರಾಮ ಲಕ್ಷ್ಮಣ ಉತ್ತರ ಭಾರತೀಯರು. ಅವರು ದಕ್ಷಿಣದ ಮೇಲೆ ದಾಳಿ ಮಾಡಿದ್ದಾರೆ. ದಕ್ಷಿಣಕ್ಕೆ ಬಂದು ರಾವಣನ ತೋಟದಲ್ಲಿನ ಹಣ್ಣುಗಳನ್ನು ಕದ್ದರು ಎಂದು ಕತೆ ಕಟ್ಟಿದ್ದರು. ಜೊತೆಗೆ ರಾಮಾಯಣವನ್ನೇ ಹಾಸ್ಯ ಮಾಡಿದ್ದರು. ಈ ಹೇಳಿಕೆ ವಿರುದ್ದ ನ್ಯಾಯಾಲಯದಲ್ಲಿ ದೂರು ದಾಖಳಾಗಿದೆ.
36
ಪ್ರಕಾಶ್ ರಾಜ್ ವಿರುದ್ಧ ದೂರು ನೀಡಿದ್ದು ಯಾರು?
ಆಂಧ್ರ ಪ್ರದೇಶದ ತಿರುಪತಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಕಟ್ಟು ಕತೆ ಹೆಣೆದೆ ಹಿಂದೂ ಧಾರ್ಮಿಕ ನಂಬಿಕೆಗೆ ಘಾಸಿ ಮಾಡಿದ್ದಾರೆ. ಸನಾತನ ಧರ್ಮವನ್ನು ಅವಮಾನಿಸವು ಕೆಲಸವನ್ನು ಪ್ರಕಾಶ್ ರಾಜ್ ಮಾಡಿದ್ದಾರೆ ಎಂದು ಆರೋಪಿಸಿ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಸದಸ್ಯ ಹಾಗೂ ಬಿಜೆಪಿ ನಾಯಕ ಜಿ ಭಾನುಪ್ರಕಾಶ್ ರೆಡ್ಡಿ ದೂರು ನೀಡಿದ್ದಾರೆ.
ಆರ್ಯರು ದ್ರಾವಿಡರು ಅನ್ನೋ ಸಿದ್ಧಾಂತವನ್ನು ಬಲವಾಗಿ ಪ್ರಚಾರ ಮಾಡಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಡುವೆ ಕಂದಕ ಸೃಷ್ಟಿಸಲು ಪ್ರಕಾಶ್ ರಾಜ್ ಯತ್ನಿಸುತ್ತಿದ್ದಾರೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ (ಸೆಕ್ಷನ್ 299) ಹಾಗೂ ಗುಂಪುಗಳ ನಡುವೆ ದ್ವೇಷ ಬಿತ್ತುವ ( ಸೆಕ್ಷನ್ 196) ಕೆಲಸ ಮಾಡಿದ್ದಾರೆ. ಹೀಗಾಗಿ ನಟನಿಗೆ ಸಮನ್ಸ್ ನೀಡುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
56
ಪ್ರಕಾಶ್ ರಾಜ್ ಸ್ಪಷ್ಟನೆ
ಕೇರಳ ಸಾಹಿತ್ಯ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್ ಮಾತನಾಡಿದ ಬೆನ್ನಲ್ಲೇ ಭಾರಿ ವಿವಾದ ಸೃಷ್ಟಿಯಾಗಿತ್ತು. ಪ್ರಕಾಶ್ ರಾಜ್ ಈ ಕುರಿತು ಸ್ಪಷ್ಟನೆ ನೀಡಿದ್ದರು. ಮಕ್ಕಳ ರಂಗಭೂಮಿ ಕಾರ್ಯಾಗಾರದ ಕಥಾವಸ್ತುವನ್ನು ಹಂಚಿಕೊಂಡಿದ್ದೇನೆ. ಇದು ಸೃಜನಶೀಲ ಕಥಾವಸ್ತುವಾಗಿದೆ ಹೊರತು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ ಎಂದಿದ್ದಾರೆ.
66
ದೂರಿನ ಬಳಿಕ ಮತ್ತೆ ಭುಗಿಲೆದ್ದ ಬಾಯ್ಕಾಟ್ ಅಭಿಯಾನ
ಇದೀಗ ಬಿಜೆಪಿ ಮುಖಂಡ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ಬೆನ್ನಲ್ಲೇ ಮತ್ತೆ ಈ ಪ್ರಕರಣ ಭುಗಿಲೆದ್ದಿದೆ.ಪ್ರಕಾಶ್ ರಾಜ್ ಸಿನಿಮಾ ಬಾಯ್ಕಾಟ್ ಮಾಡಲು ಅಭಿಯಾನಗಳು ಆರಂಭಗೊಂಡಿದೆ. ಕೋಟ್ಯಾಂತರ ಭಕ್ತರ ನಂಬಿಕೆ, ಭಾವನೆಗಳಿಗೆ ಬೆಲೆ ಕೊಡದ ನಟನ ಸಿನಿಮಾ ಬಹಿಷ್ಕರಿಸಲು ಕೂಗು ಜೋರಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.