ಆದಿಪುರುಷನ ಸೆಟ್‌ನಿಂದ ಪ್ರಭಾಸ್, ಸನ್ನಿ ಸಿಂಗ್ ಲೇಟೆಸ್ಟ್ ಸೆಲ್ಫಿ!

First Published | Sep 28, 2021, 2:47 PM IST

ಸೌತ್‌ ಸೂಪರ್‌ ಸ್ಟಾರ್‌ ಹಾಗೂ ಬಾಹುಬಲಿ ಫೇಮ್‌ನ  ಪ್ರಭಾಸ್‌ (Prabhas) ನಟಿಸುತ್ತಿರುವ  ಪ್ಯಾನ್‌ ಇಂಡಿಯಾ ಸಿನಿಮಾ ಆದಿಪುರುಷ (Adipurush) ಸಿನಿಮಾದಲ್ಲಿ ಬಾಲಿವುಡ್‌ ನಟ ಸನ್ನಿಸಿಂಗ್‌ (Sunny Singh) ಲಕ್ಷಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಆದಿಪುರುಷನ ಸೆಟ್‌ನಿಂದ ಪ್ರಭಾಸ್‌ ಜೊತೆ ಕ್ಲಿಕಿಸಿರುವ  ಸೆಲ್ಫಿಯೊಂದನ್ನು ಸನ್ನಿಸಿಂಗ್‌ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಗಳಿಗಾಗಿ ಪೋಸ್ಟ್‌ ಮಾಡಿದ್ದಾರೆ. 

ಬಾಲಿವುಡ್ ನಟ ಸನ್ನಿ ಸಿಂಗ್ ಮತ್ತು ಬಾಹುಬಲಿ ಸ್ಟಾರ್ ಪ್ರಭಾಸ್ ಇತ್ತೀಚೆಗೆ ಆದಿಪುರುಷನ ಸೆಟ್ ನಲ್ಲಿ ಭೇಟಿಯಾದರು. ಇಬ್ಬರೂ ಜೊತೆಯಲ್ಲಿ ಒಳ್ಳೆಯ ಸಮಯ ಕಳೆದರು ಮತ್ತು ಸೆಟ್‌ಗಳಿಂದ ಕ್ಲಿಕ್‌ ಮಾಡಿದ ಕೆಲವು ಸೆಲ್ಫಿಗಳನ್ನು  ಸನ್ನಿ ಸಿಂಗ್‌ ಶೇರ್‌ ಮಾಡಿಕೊಂಡಿದ್ದಾರೆ

ಅದಿಪುರುಷ ಸಿನಿಮಾದಲ್ಲಿ  ಸನ್ನಿ ಸಿಂಗ್ ಅವರು ಲಕ್ಷ್ಮಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ  ತನ್ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಸನ್ನಿ ಸಿಂಗ್‌ ಆದಿಪುರುಷನ ಸೆಟ್‌ನಿಂದ ಪ್ರಭಾಸ್(Prabhas) ಜೊತೆಯಿರುವ ಫೋಟೋ ಹಂಚಿಕೊಂಡಿದ್ದಾರೆ. 

Tap to resize

ಈ ಪ್ಯಾನ್-ಇಂಡಿಯಾ ಸಿನಿಮಾ ಆದಿಪುರುಷವು ಪೌರಾಣಿಕ ಚಿತ್ರವಾಗಿದ್ದು, ಪ್ರಭಾಸ್ ನಾಯಕನಾಗಿ ನಟಿಸಿದ್ದಾರೆ. ಸನ್ನಿ ತನ್ನ ಅಭಿಮಾನಿಗಳಿಗಾಗಿ ಪ್ರಭಾಸ್ ಜೊತೆಯಿರುವ ಸೆಲ್ಫಿಯೊಂದನ್ನು ಪೋಸ್ಟ್‌ ಮಾಡಿದ್ದಾರೆ. ಫೋಟೋಗೆ ಶೀರ್ಷಿಕೆಯಲ್ಲಿ, ಅವರು  '#ಆದಿಪುರುಷ' ಎಂದು ಬರೆದಿದ್ದಾರೆ.
 

ಸನ್ನಿ ಈ ಸಿನಿಮಾ ಮತ್ತು ಅವರ ಪಾತ್ರಕ್ಕಾಗಿ ಸಾಕಷ್ಟು ಪೂರ್ವಸಿದ್ಧತೆಗೆ ಮಾಡಿಕೊಂಡಿದ್ದಾರೆ. ಅವರು ತನ್ನ ಪಾತ್ರಕ್ಕಾಗಿ ಕಠಿಣ ವರ್ಕೌಟ್‌ಗಳು ಮತ್ತು ಫಿಟ್‌ನೆಸ್ ನಿಯಮಗಳನ್ನು ಕೈಗೆತ್ತಿಕೊಂಡಿದ್ದಾರೆ ಮತ್ತು ಸನ್ನಿ ತಮ್ಮ  ಪಾತ್ರಕ್ಕೆ ಸರಿಯಾಗಿ ಬದಲಾಗಿದ್ದಾರೆ.

ಬಾಹುಬಲಿ ಕಳಿಸಿದ ಬಿರಿಯಾನಿ ಸೂಪರ್ ಎಂದ ಬೇಬೋ

ಪ್ರಭಾಸ್ ಮತ್ತು ಸನ್ನಿ ಸಿಂಗ್ ಜೊತೆಗೆ, ಈ ಚಿತ್ರದಲ್ಲಿ ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. ಓಂ ರೌತ್ ನಿರ್ದೇಶನದಲ್ಲಿ ಪ್ರಭಾಸ್ ರಾಮ, ಕೃತಿ ಸನೋನ್ ಸೀತೆಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ನಟಿಸಲಿದ್ದಾರೆ.

ಕಳೆದ ದಿನದಲ್ಲಿ ಕರೀನಾ ಕಪೂರ್ ಮತ್ತು ಸೈಫ್ ಅವರಿಗೆ ಪ್ರಭಾಸ್‌ ಬಿರಿಯಾನಿ ಜೊತೆ ರಾಯಿತ, ಸಲಾಡ್ ಮತ್ತು ಇತರ ಕೆಲವು ಆಹಾರ ಪದಾರ್ಥಗಳನ್ನು ಕಳುಹಿಸಿದ್ದರು. ಇದರ ಫೋಟೋವನ್ನು ಕರೀನಾ ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದರು. ಕರೀನಾ ಹಾರ್ಟ್ ಇಮೋಜಿ ಮತ್ತು  ಆದಿಪುರುಷ ಹ್ಯಾಷ್‌ಟ್ಯಾಗ್‌ ಜೊತೆಗೆ ಪ್ರಭಾಸ್‌ ಅವರನ್ನು ಟ್ಯಾಗ್‌ ಮಾಡಿ ಥ್ಯಾಂಕ್‌ ಹೇಳಿದ್ದರು. 

'ಸೈಫ್ ನಂತಹ ಪ್ರತಿಭಾವಂತ ನಟನ ಜೊತೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ. ದೊಡ್ಡ ಪರದೆಯ ಮೇಲೆ ಅಂತಹ ಮಹಾನ್ ನಟನ ಜೊತೆಯಲ್ಲಿ ಕಾಣಿಸಿಕೊಳ್ಳುವುದು ನನಗೆ ಹೆಮ್ಮೆಯ ವಿಷಯವಾಗಿದೆ' ಎಂದು ಪ್ರಭಾಸ್ ಒಮ್ಮೆ ಸೈಫ್ ಅಲಿ ಖಾನ್ ಜೊತೆ  ಮೊದಲ ಬಾರಿಗೆ ಕೆಲಸ ಮಾಡುವ ಬಗ್ಗೆ ಮಾತನಾಡುತ್ತಾ ಹೇಳಿದ್ದರು.

Latest Videos

click me!