ಐಶ್ವರ್ಯಗಾಗಿ ಹೆಲಿಕಾಪ್ಟರ್ ಅಮರ್ ಸಿಂಗ್‌ರನ್ನು ಬಿಟ್ಟು ಹೋದಾಗ ಏನಾಗಿತ್ತು ನೋಡಿ

First Published | Sep 28, 2021, 1:53 PM IST

ಬಹಳ ಹಿಂದೆ ಭಾರತೀಯ ರಾಜಕಾರಣಿ ದಿವಂಗತ ಅಮರ್ ಸಿಂಗ್(Amar Singh) ಅವರು ಬಚ್ಚನ್  ಪರಿವಾರದ  ಐಶ್ವರ್ಯಾ ರೈ (Aishwarya Rai) ಮೇಲೆ ಕೋಪಗೊಂಡಿದ್ದರು ಏಕೆಂದರೆ ಐಶ್ವರ್ಯಾ ರೈ ಅವರ ಹೆಲಿಕಾಪ್ಟರ್ ಅಮರ್‌ ಸಿಂಗ್‌ ಅವರನ್ನು  ಬಿಟ್ಟು ಹೋಗಿತ್ತು. ಮುಂದೆ ಏನಾಯಿತು ಗೊತ್ತಾ? ವಿವರಗಳಿಗಾಗಿ ಮುಂದೆ ಓದಿ.

ಮೊದಲು ಅಮರ್ ಸಿಂಗ್ ಅವರು ಅಮಿತಾಬ್ ಬಚ್ಚನ್‌ ಮತ್ತು ಜಯಾ ಬಚ್ಚನ್  ಜೊತೆ ತುಂಬಾ ಉತ್ತಮ ಸಂಬಂಧ ಹೊಂದಿದ್ದರು. ಆದರೆ ನಂತರ ಇದು ದ್ವೇಷದಲ್ಲಿ ಬದಲಾಯಿತು. ಶೋಬಿಜ್ ಪ್ರಪಂಚ ಅಥವಾ ರಾಜಕೀಯದಲ್ಲಿ ಯಾವುದೇ ಸಂಬಂಧ ಶಾಶ್ವತವಲ್ಲ. 

ಅದರಂತೆ  ಸಿಂಗ್ ಮತ್ತು ಬಚ್ಚನ್ ಸ್ನೇಹ ಹದಗೆಡಲು ಪ್ರಾರಂಭವಾಯಿತು. ದುಃಖದ ಸಂಗತಿ ಎಂದರೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಈ ವಿವಾದಕ್ಕೆ ಸಿಲುಕಿದರು. ಹಿಂದೆ ಬಿಗ್ ಬಿ ದಿವಾಳಿಯಾದಾಗ ಅಮರ್‌ ಸಿಂಗ್  ಬಚ್ಚನ್‌ ಕುಟುಂಬವನ್ನು ರಕ್ಷಿಸಲು ಬಂದರು ಎಂದು ಹೇಳಲಾಗಿದೆ.

Tap to resize

ಬಚ್ಚನ್ ಕುಟುಂಬ ಮತ್ತು ದಿವಂಗತ ರಾಜಕಾರಣಿ ಅಮರ್ ಸಿಂಗ್ ನಡುವೆ ಭಾರೀ ದ್ವೇಷವಿತ್ತು ಎಂದು ಹಲವರಿಗೆ ತಿಳಿದಿದೆ. ಅದು ಅಮರ್‌  ಸಿಂಗ್ ವಿಡಿಯೋದಲ್ಲಿ ಬಚ್ಚನ್ ಕುಟುಂಬದ ಮೇಲೆ ಹಲ್ಲೆ ನಡೆಸಿದ ನಂತರ  ಇನ್ನೂ ಕೆಟ್ಟದಾಯಿತು.

ಸುನೇತ್ರ ಚೌಧರಿಯವರ 'ಬಿಹೈಂಡ್ ಬಾರ್ಸ್: ಪ್ರಿಸನ್ ಟೇಲ್ಸ್ ಆಫ್ ಇಂಡಿಯಾಸ್ ಮೋಸ್ಟ್ ಫೇಮಸ್' ಪುಸ್ತಕದಲ್ಲಿ, ಒಮ್ಮೆ ಸಹಾರಾ ಮಾಲೀಕರ ಸುಬ್ರತ ರಾಯ್ ಅವರ ಪಾರ್ಟಿಗೆ ಹೋಗಬೇಕಾಗಿ ಬಂದಾಗ ಸಿಂಗ್ ಅಸಮಾಧಾನಗೊಂಡಿದ್ದರು ಎಂದು ಉಲ್ಲೇಖಿಸಲಾಗಿದೆ.

ಕ್ಯಾಮೆರಾ ಕಾಣುತ್ತಲೇ ಮಾಜಿ ಪತ್ನಿ ಭುಜದ ಮೇಲೆ ಕೈ ಹಾಕಿದ ಅಮೀರ್: ಡಿವೋರ್ಸ್ ನಂತ್ರ ಕಿರಣ್ ಸ್ಥಿತಿ ಹೇಗಿದೆ ನೋಡಿ
 

ಐಶ್ವರ್ಯಾ ರೈ ಅವರನ್ನು ಮೊದಲು ಪಿಕ್‌  ಮಾಡಲು ಹೋಗಿದ ಹೆಲಿಕಾಪ್ಟರ್‌ಗಾಗಿ ಅಮರ್‌ಸಿಂಗ್‌ ಕಾಯಬೇಕಾಯಿತು ಎಂದು NDTV ವರದಿ ಹೇಳಿದೆ.  ಆದರೆ ಅಮರ್ ಸಿಂಗ್ ಅಲ್ಲಿ ನಿಲ್ಲಲಿಲ್ಲ. ಅಮರ್ ಸಿಂಗ್ ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಬಹಳ ಹಿಂದೆಯೇ ವಿಡಿಯೋವನ್ನು ಹಂಚಿಕೊಂಡಿದ್ದರು. ಅಲ್ಲಿ ಅವರು ಬಚ್ಚನ್ ಕುಟುಂಬವನ್ನು ಅವಮಾನಿಸಿದರು.

ಸೊಸೆ  ಐಶ್ವರ್ಯಾರಿಗೆ ರಣಬೀರ್ ಕಪೂರ್ ನಂತಹ ಯುವ ನಟರಂತೆ ಬೋಲ್ಡ್ ಸೀನ್‌ಗಳನ್ನು ಮಾಡದಂತೆ ಸೂಚಿಸುವಂತೆ ಜಯಾ ಬಚ್ಚನ್ ಅವರನ್ನು ಅಮರ್‌ ಸಿಂಗ್‌ ವೀಡಿಯೊದಲ್ಲಿ ಕೇಳಿಕೊಂಡರು. 2016 ರಲ್ಲಿ ಕರಣ್ ಜೋಹರ್‌ ಅವರ 'ಏ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ ಐಶ್ವರ್ಯ ಕಪೂರ್ ಜೊತೆ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡುತ್ತಿದ್ದರು.

ಕೇವಲ ಐಶ್ವರ್ಯಾ ಮಾತ್ರವಲ್ಲ ಧೂಮ್ ಸಿನಿಮಾದಲ್ಲಿ ಅರೆಬೆತ್ತಲೆಯ ಮಹಿಳೆಯರೊಂದಿಗೆ ನೃತ್ಯ ಮಾಡುವ ಅಭಿಷೇಕ್‌ ಅವರ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲ ಯುವ ನಟಿಯರೊಂದಿಗೆ 'ಜುಮ್ಮಾ ಚುಮ್ಮಾ ದೇ ದೇ' ಮತ್ತು 'ಆಜ್ ರಪತ್ ಜಾಯೆನ್' ಮುಂತಾದ ಹಾಡುಗಳಲ್ಲಿ ನೃತ್ಯ ಮಾಡುತ್ತಿರುವುದಕ್ಕಾಗಿ ಅಮಿತಾಬ್ ಬಚ್ಚನ್ ಅವರನ್ನು ಸಹ ತರಾಟೆಗೆ ತೆಗೆದುಕೊಂಡರು.

Latest Videos

click me!