ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಈಗ ರಾಜಾ ಸಾಬ್ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಚಿತ್ರದ ನಂತರ ಪ್ರಭಾಸ್ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಸ್ಪಿರಿಟ್, ಫೌಜಿ, ಸಲಾರ್ 2, ಕಲ್ಕಿ 2 ಹೀಗೆ ದೊಡ್ಡ ಬಜೆಟ್ ಚಿತ್ರಗಳನ್ನ ಪ್ರಭಾಸ್ ಮುಗಿಸಬೇಕಿದೆ. ಇನ್ನೊಂದೆಡೆ ಪ್ರಭಾಸ್ ಹೊಂಬಾಳೆ ಫಿಲಂಸ್ ಜೊತೆ ಮೂರು ಚಿತ್ರಗಳಿಗೆ ದೊಡ್ಡ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರಭಾಸ್ ನಿಜ ಜೀವನದಲ್ಲಿ ಫ್ರೆಂಡ್ಲಿ ಸ್ವಭಾವದವರು.