ಪುಷ್ಪ-2ನಲ್ಲಿ ಕನ್ನಡತಿ ಶ್ರೀಲೀಲಾ‌ ಕಮಾಲ್... ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಡ್ಯಾನ್ಸಿಂಗ್ ಕ್ವೀನ್!

Published : Nov 11, 2024, 10:14 AM IST

ಪುಷ್ಪ 2 ಸಿನಿಮಾದಲ್ಲಿ ಶ್ರೀಲೀಲಾಗೆ ಐಟಂ ಸಾಂಗಿಗೆ ಕುಣಿಯೋ ಚಾನ್ಸ್ ಸಿಕ್ಕಿದೆ. ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ಶ್ರೀಲೀಲಾ ಪುಷ್ಪ 2 ಸಿನಿಮಾದಲ್ಲಿ ಸೊಂಟ ಕುಣಿಸಿದ್ದಾರೆ. 

PREV
17
ಪುಷ್ಪ-2ನಲ್ಲಿ ಕನ್ನಡತಿ ಶ್ರೀಲೀಲಾ‌ ಕಮಾಲ್... ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಡ್ಯಾನ್ಸಿಂಗ್ ಕ್ವೀನ್!

ಟಾಲಿವುಡ್ ಚಿತ್ರರಂಗದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಪುಷ್ಪ-2. ಡಿಸೆಂಬರ್ 5ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿರುವ ಅಲ್ಲು ಅರ್ಜುನ್ ಸಿನಿಮಾದಿಂದ ಹೊಸ ಸಮಾಚಾರ ಹೊರಬಿದ್ದಿದೆ. 

27

ಪುಷ್ಪ ಸೀಕ್ವೆಲ್ ಸ್ಪೆಷಲ್ ಹಾಡಿಗೆ ಯಾರು ಹೆಜ್ಜೆ ಹಾಕಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಟಾಲಿವುಡ್ ಹೊಸ ಸೆನ್ಸೇಷನ್, ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ ಪುಷ್ಪರಾಜ್ ಜೊತೆ ಸೊಂಟ ಬಳುಕಿಸಿದ್ದಾರೆ. ಪೋಸ್ಟರ್ ಮೂಲಕ ಚಿತ್ರತಂಡ ಶ್ರೀಲೀಲಾರನ್ನು ಪರಿಚಯಿಸಿದೆ.

37

ಪುಷ್ಪ ಮೊದಲ ಅಧ್ಯಾಯದಲ್ಲಿ ಹೂ ಅಂತಾವಾ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಹಾಕಿತ್ತು. ಸಮಂತಾ ಹಾಗೂ ಅಲ್ಲು ಅರ್ಜುನ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದ ಸಾಂಗ್ ಸಖತ್ ಸೌಂಡ್ ಮಾಡಿತ್ತು. 

47

ಡಿಎಸ್ ಪಿ ಮ್ಯೂಸಿಕ್, ಸ್ಯಾಮ್ ಕುಣಿತ ಎಲ್ಲವೂ‌ ಮೋಡಿ ಮಾಡಿತ್ತು. ಈಗ ಪುಷ್ಪ ಸೀಕ್ವೆಲ್ ರಣಕಣದಲ್ಲಿ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ ಹಾಗೂ ಐಕಾನ್ ಸ್ಟಾರ್ ಗಣೇಶ್ ಆಚಾರ್ಯ ಕೊರಿಯೋಗ್ರಫಿಗೆ ಕುಣಿದು ಕುಪ್ಪಳಿಸಿದ್ದಾರೆ. 

57

ಹೇಳಿಕೇಳಿ ಶ್ರೀಲೀಲಾ ಅಭಿನಯದ ಜೊತೆಗೆ ನೃತ್ಯದಲ್ಲಿಯೂ ಪ್ರವೀಣೆ. ಆಕೆಯ ಡ್ಯಾನ್ಸ್ ಇಷ್ಟಪಡುವ ಒಂದು ವರ್ಗವಿದೆ. ಇನ್ನು ಅಲ್ಲು ಅರ್ಜುನ್ ಡ್ಯಾನ್ಸ್ ಬಗ್ಗೆ ಹೇಳೋದೇ ಬೇಡ. ಡ್ಯಾನ್ಸಿಂಗ್ ಸ್ಟಾರ್ ಹಾಗೂ ಡ್ಯಾನ್ಸಿಂಗ್ ಕ್ವೀನ್ ಇಬ್ಬರು ಜಬರ್ದಸ್ತ್ ಆಗಿ ಪುಷ್ಪ‌ ಸೀಕ್ವೆಲ್ ವಿಶೇಷ ಹಾಡಿಗೆ ಕಾಲು ಕುಣಿಸಿದ್ದಾರೆ.

67

ಸುಕುಮಾರ್ ನಿರ್ದೇಶನದಲ್ಲಿ ಪುಷ್ಪ‌ 2 ಬಹಳ ಅದ್ಧೂರಿಯಾಗಿ ತಯಾರಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ. ಫಹಾದ್ ಫಾಸಿಲ್, ಧನಂಜಯ್, ಅನಸೂಯ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. 

77

ಹೆಚ್ಚು ಕಡಿಮೆ ಅದೇ ತಂಡ ಸೀಕ್ವೆಲ್‌ನಲ್ಲಿ ಮುಂದುವರೆದಿದೆ. 'ಪುಷ್ಪ' ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಮತ್ತೊಮ್ಮೆ ಪುಷ್ಪರಾಜ್ ಆಗಿ ಸ್ಟೈಲಿಶ್ ಸ್ಟಾರ್ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories