ಯಶ್‌ ಟಾಕ್ಸಿಕ್‌ಗೆ ಹಾಲಿವುಡ್‌ನಿಂದ ಬಂದ ಆ್ಯಕ್ಷನ್‌ ಡೈರೆಕ್ಟರ್‌ ಜೆಜೆ ಪೆರ್ರಿ: ಹೇಗಿರಲಿದೆ ಗೊತ್ತಾ ಫೈಟ್‌ಗಳು!

First Published | Nov 11, 2024, 10:45 AM IST

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಚಿತ್ರಕ್ಕೆ ಹಾಲಿವುಡ್‌ನ ಖ್ಯಾತ ಆ್ಯಕ್ಷನ್‌ ಡೈರೆಕ್ಟರ್‌ ಜೆಜೆ ಪೆರ್ರಿಯಿಂದ ಸಾಹಸ ನಿರ್ದೇಶನ. ಹಾಲಿವುಡ್‌ನ ಹಲವಾರು ಬ್ಲಾಕ್‌ ಬಸ್ಟರ್‌ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ಜೆಜೆ ಪೆರ್ರಿ.

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾಕ್ಕೆ ಹಾಲಿವುಡ್‌ನ ಖ್ಯಾತ ಆ್ಯಕ್ಷನ್ ಡೈರೆಕ್ಟರ್ ಜೆಜೆ ಪೆರಿ ಎಂಟ್ರಿ ಕೊಟ್ಟಿದ್ದಾರೆ.
 

ಹಾಲಿವುಡ್‌ನ ಬ್ಲಾಕ್ ಬಸ್ಟರ್‌ಸಿನಿಮಾಗಳಾದ 'ಐರನ್ ಮ್ಯಾನ್', 'ಎಕ್ಸ್‌ ಮ್ಯಾನ್', 'ಜಾನ್ ವಿಕ್ 2' ಸೇರಿದಂತೆ ಹಲವಾರು ಕ್ಲಾಸಿಕ್ ಆ್ಯಕ್ಷನ್ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿರುವ ಈ ಜನಪ್ರಿಯ ಆ್ಯಕ್ಷನ್ ಡೈರೆಕ್ಟರ್ ಇದೀಗ 'ಟಾಕ್ಸಿಕ್' ಚಿತ್ರೀಕರಣಕ್ಕಾಗಿ ಮುಂಬೈಗೆ ಬಂದಿಳಿದಿದ್ದಾರೆ. 

Tap to resize

ಜೆಜೆ ಪೆ ಒಂದಿಷ್ಟು ಭಿನ್ನ ಆ್ಯಕ್ಷನ್ ಸೂತ್ರಗಳನ್ನು ಈ ಸಿನಿಮಾಕ್ಕಾಗಿ ವಿನ್ಯಾಸ ಮಾಡಲಿದ್ದಾರೆ. ಹ್ಯಾಂಡ್ ಟು ಹ್ಯಾಂಡ್ ಕಂಬ್ಯಾಟ್, ಗನ್ ಫೈಟ್ ಸೇರಿದಂತೆ ಹಾಲಿವುಡ್ ಮಾದರಿಯ ಫೈಟ್‌ಗಳು 'ಟಾಕ್ಸಿಕ್' ಸಿನಿಮಾದಲ್ಲಿ ಇರಲಿವೆ.

ಪ್ರತಿಯೊಂದು ಆ್ಯಕ್ಷನ್ ದೃಶ್ಯವನ್ನೂ ಭಿನ್ನವಾಗಿ ಕಂಪೋಸ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೆಜೆ ಪೆರಿ ಈಗಾಗಲೇ ಆ್ಯಕ್ಷನ್ ಸೆಟ್‌ ಪೀಸ್‌ ಟ್ರಯಲ್ ವಿಡಿಯೋ ತಯಾರಿಸಿದ್ದು, ಅದನ್ನು ಯಶ್, ನಿರ್ದೇಶಕಿ ಗೀತು ಮೋಹನ್‌ದಾಸ್ ನೋಡಿ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ. 

'ಟಾಕ್ಸಿಕ್' ಸಿನಿಮಾಕ್ಕೆ ಈಗಾಗಲೇ ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಶೂಟಿಂಗ್ ಆಗಿದೆ. ಇದೀಗ ಮುಂಬೈನಲ್ಲಿ ವಿಶೇಷ ಸೆಟ್ ರೆಡಿಯಾಗಿದ್ದು ಭರದ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿ ಸತತ 60 ದಿನಗಳ ಚಿತ್ರೀಕರಣ ನಡೆಯಲಿದೆ. ಜೆಜೆ ಪೆರಿ ನಿರ್ದೇಶನದ ವಿಶೇಷ ಆ್ಯಕ್ಷನ್ ಸೀಕ್ವೆನ್ಸ್ ಗೂ ಈ ವೇಳೆ ಶೂಟಿಂಗ್ ನಡೆಯಲಿದೆ.

Latest Videos

click me!