ಚಿಕ್ಕಪ್ಪನ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಪ್ರಭಾಸ್; ಸಾಂತ್ವನ ಹೇಳಿದ ತೆಲುಗು ಸ್ಟಾರ್ಸ್

First Published | Sep 12, 2022, 10:16 AM IST

ಕೃಷ್ಣಂ ರಾಜು ಅವರ ಪಾರ್ಥೀವ ಶರೀರದ ಮುಂದೆ ನಿಂದು ಪ್ರಭಾಸ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.  ಕೊನೆಯವರೆಗೂ ಪಾರ್ಥೀವ ಶರೀರದ ಮುಂದೆಯೇ ನಿಂತಿದ್ದ ಪ್ರಭಾಸ್ ಚಿಕ್ಕಪ್ಪನ್ನನ್ನು ನೆನೆದು ಭಾವುಕರಾಗಿದ್ದಾರೆ. ಪ್ರಭಾಸ್ ಅವರನ್ನು ತೆಲುಗು ಸ್ಟಾರ್ಸ್ ಸಾಮಾಧಾನ ಮಾಡಿದರು. 

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಚಿಕ್ಕಪ್ಪ, ಟಾಲಿವುಡ್ ರೆಬಲ್ ಸ್ಟಾರ್ ಕೃಷ್ಣಂ ರಾಜು  ನಿನ್ನೆ (ಸೆಪ್ಟಂಬರ್ 11) ಬೆಳಗ್ಗೆ ನಿಧನರಾದರು. 83 ವರ್ಷದ ನಟ ಕೃಷ್ಣಂ ರಾಜು ಮುಂಜಾನೆ 3.25ಕ್ಕೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕೃಷ್ಣರಾಜು  ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ. 

ಕೃಷ್ಣಂ ರಾಜು ಅವರ ಅಂತಿಮ ವಿದಿವಿಧಾನಗಳು ನಿನ್ನೆ ಸಂಜೆ ನೆರವೇರಿದೆ. ಪ್ರೀತಿಯ ಚಿಕ್ಕಪ್ಪನ್ನು ಕಳೆದುಕೊಂಡ ನಟ ಪ್ರಭಾಸ್ ಕಣ್ಣೀರಿಟ್ಟಿದ್ದಾರೆ. ತಂದೆಯ ಸ್ಥಾನದಲ್ಲಿದ್ದ ಕೃಷ್ಣಂ ರಾಜು ಅವರ ಪಾರ್ಥೀವ ಶರೀರದ ಮುಂದೆ ನಿಂದು ಪ್ರಭಾಸ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.  ಕೊನೆಯವರೆಗೂ ಪಾರ್ಥೀವ ಶರೀರದ ಮುಂದೆಯೇ ನಿಂತಿದ್ದ ಪ್ರಭಾಸ್ ಚಿಕ್ಕಪ್ಪನ್ನನ್ನು ನೆನೆದು ಭಾವುಕರಾಗಿದ್ದಾರೆ.
 

Tap to resize

ಪ್ರಭಾಸ್ ಅಳುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಪ್ರಭಾಸ್‌ಗೆ ಧೈರ್ಯ ತುಂಬುತ್ತಿದ್ದಾರೆ. 'ನಾವು ನಿಮ್ಮ ಜೊತೆ ಇದ್ದೀವಿ ಅಣ್ಣ ಧೈರ್ಯವಾಗಿರಿ' ಎಂದು ಸಾಮಾಧಾನ ಮಾಡುತ್ತಿದ್ದಾರೆ.

ಇನ್ನು ಟಾಲಿವುಡ್ ಸ್ಟಾರ್ಸ್ ಕೃಷ್ಣ ರಾಜು ಅವರ ಅಂತಿಮ ದರ್ಶನ ಪಡೆದು ಕಣ್ಣೀರಿಡುತ್ತಿದ್ದ ಪ್ರಭಾಸ್ ಅವರಿಗೆ ಸಾಂತ್ವನ  ಹೇಳಿದರು. ಟಾಲಿವುಡ್ ನಟ ಮಹೇಶ್ ಬಾಬು, ಕೃಷ್ಣಂ ರಾಜು ಅವರ ಅಂತಿಮ ದರ್ಶಮ ಪಡೆದು ಪ್ರಭಾಸ್ ಅವರಿಗೆ ಸಮಾಧಾನ ಮಾಡಿದರು. ಕೆಲವು ಕ್ಷಣ ಮಾತನಾಡಿ ಅಲ್ಲಿಂದ ಹೊರಟರು. 

ನಟ ಅಲ್ಲು ಅರ್ಜುನ್ ಕೂಡ ಕೃಷ್ಣಂ ರಾಜು ಅವರ ಅಂತಿಮ ದರ್ಶನ ಪಡೆದರು. ಭಾವುಕರಾಗಿದ್ದ ಪ್ರಭಾಸ್ ಅವರನ್ನು ಹಗ್ ಮಾಡಿ ಧೈರ್ಯ ತುಂಬಿದರು. ಅಲ್ಲು ಅರ್ಜುನ್, ಪ್ರಭಾಸ್ ಅವರಿಗೆ ಹಗ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್, ಜೂ ಎನ್ ಟಿ ಆರ್, ವಿಜಯ್ ದೇವರಕೊಂಡ, ನಾನಿ ಸೇರಿದಂತೆ ಅನೇಕ ಸ್ಟಾರ್ಸ್ ಕೃಷ್ಣ ರಾಜು ಅವರ ಅಂತಿಮ ದರ್ಶನ ಪಡೆದರು. ಚಿಕ್ಕಪ್ಪನ್ನು ಕಳೆದುಕೊಂಡು ಭಾವುಕರಾಗಿದ್ದ ಪ್ರಭಾಸ್ ಅವರನ್ನು ಹಗ್ ಮಾಡಿ ಸಮಾಧಾನ ಪಡಿಸಿದರು. 
 

ಇನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಪ್ರಭಾಸ್ ಜೊತೆಯಲ್ಲೇ ಇದ್ದರು. ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರೀತಿಯ ಚಿಕ್ಕಪ್ಪನನ್ನು ಕಳೆದುಕೊಂಡಿದ್ದಾರೆ. ಸದಾ ಜೊತೆಯಲ್ಲಿರುತ್ತಿದ್ದ ಚಿಕ್ಕಪ್ಪ ಇನ್ನಿಲ್ಲ ಎನ್ನುವುದು ಪ್ರಭಾಸ್ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ದುಃಖದಲ್ಲಿದ್ದ ಪ್ರಭಾಸ್ ಅವರಿಗೆ ಧೈರ್ಯ ತುಂಬಿದ್ದಾರೆ.  

ಕೃಷ್ಣಂರಾಜು ನಿಧನಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು, ಆಪ್ತರು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಕೃಷ್ಣಂ ರಾಜು ಅವರ ಸಿನಿಮಾರಂಗ ಮಾತ್ರವಲ್ಲದೇ ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಮೊದಲ ನಟ ಇವರು. 
 

prabhas

5 ದಶಕಗಳ ಕಾಲ ತಮ್ಮ ನಟನಾ ವೃತ್ತಿಜೀವನದಲ್ಲಿ ಸುಮಾರು 190 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 5 ಫಿಲ್ಮ್‌ಫೇರ್ ಪ್ರಶಸ್ತಿಗಳು, 3 ರಾಜ್ಯ ನಂದಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. 

Latest Videos

click me!