ಕಡೆಗೂ ಬಾಯ್ ಫ್ರೆಂಡ್ ಜೊತೆ ಪಾಪಾರಾಜಿಗಳ ಹತ್ರ ಸಿಕ್ಕಿ ಬಿದ್ರು ನಟಿ ಪೂಜಾ ಹೆಗ್ಡೆ

First Published | Apr 1, 2024, 6:11 PM IST

ಪ್ಯಾನ್-ಇಂಡಿಯನ್ ನಟಿ ಪೂಜಾ ಹೆಗ್ಡೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ವಿಷಯಗಳನ್ನು ಗುಟ್ಟಾಗಿಡಲು ಬಯಸುತ್ತಾರೆ. ಆದರೆ ಈ ಬಾರಿ ಅವರು ಬಾಯ್‌ಫ್ರೆಂಡ್ ಜೊತೆ ಪಾಪಾರಾಜಿಗಳ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.

ಪ್ಯಾನ್-ಇಂಡಿಯನ್ ನಟಿ ಪೂಜಾ ಹೆಗ್ಡೆ ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಬಂದಾಗ ಕಡಿಮೆ ಪ್ರೊಫೈಲ್ ಅನ್ನು ಕಾಯ್ದುಕೊಳ್ಳುತ್ತಾರೆ. ಡೇಟಿಂಗ್, ಬಾಯ್‌ಫ್ರೆಂಡ್ ಇಂಥ ವಿಚಾರದಲ್ಲಿ ತುಟಿ ಎರಡು ಮಾಡೋದಿಲ್ಲ.

ಆದರೂ, ಅವರು ರೋಹನ್ ಮೆಹ್ರಾ ಎಂಬ ಬಾಯ್‌ಫ್ರೆಂಡ್ ಹೊಂದಿದ್ದಾರೆ ಎಂಬ ವದಂತಿಗಳಿದ್ದವು. ಮತ್ತೀಗ ಪೂಜಾ ಮತ್ತು ರೋಹನ್ ಒಟ್ಟಿಗೇ ಕಾರಿನಲ್ಲಿ ಹೋಗುತ್ತಿರುವಾಗ ಪಾಪಾರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ.
 

Tap to resize

ಮುಂಬೈನ ಬಾಂದ್ರಾದಲ್ಲಿ ನಟಿಯು ದಿವಂಗತ ನಟ ವಿನೋದ್ ಮೆಹ್ರಾ ಅವರ ಪುತ್ರ ರೋಹನ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವರಿಬ್ಬರ ಡೇಟಿಂಗ್ ಕುರಿತ ವದಂತಿಗೆ ಪುಷ್ಠಿ ಬಂದಿದೆ.

ಪೂಜಾ ಬಿಳಿ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿದ್ದರು. ಏತನ್ಮಧ್ಯೆ, ರೋಹನ್ ಕಪ್ಪು ಟಿ-ಶರ್ಟ್, ಕಡು ನೀಲಿ ಬಣ್ಣದ ಪ್ಯಾಂಟ್, ಕಪ್ಪು ಕ್ಯಾಪ್ ಮತ್ತು ಬಿಳಿ ಸ್ನೀಕರ್ಸ್ನೊಂದಿಗೆ ಕ್ಯಾಶುಯಲ್ ಲುಕ್‌ನಲ್ಲಿದ್ದರು. 

ಪೂಜಾ ಹೆಗ್ಡೆ ಕೆಲ ದಿನಗಳಿಂದ ರೋಹನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ರೋಹನ್ 2018ರಲ್ಲಿ ಸೈಫ್ ಅಲಿ ಖಾನ್ ಜೊತೆ ನಟಿಸಿದ 'ಬಜಾರ್' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ರೋಹನ್ ಈ ಹಿಂದೆ ಸ್ಟೂಡೆಂಟ್ ಆಫ್ ದಿ ಇಯರ್ 2 ತಾರಾ ಸುತಾರಿಯಾ ಅವರೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದರು. ಆದಾಗ್ಯೂ, ಮೇ 2019 ರಲ್ಲಿ ಇಬ್ಬರು ಬೇರ್ಪಟ್ಟ ವರದಿಗಳು ಹರಿದಾಡಿದವು.
 

ಕಳೆದ ತಿಂಗಳು, ಮಿಸ್ ವರ್ಲ್ಡ್ 2024 ಗ್ರ್ಯಾಂಡ್ ಫಿನಾಲೆಯಲ್ಲಿ ಪೂಜಾ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ಏತನ್ಮಧ್ಯೆ, ಕೆಲಸದ ಮುಂಭಾಗದಲ್ಲಿ, ಪೂಜಾ ಕೊನೆಯದಾಗಿ ಸಲ್ಮಾನ್ ಖಾನ್ ಜೊತೆಗೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ನಲ್ಲಿ ಕಾಣಿಸಿಕೊಂಡಿದ್ದಾರೆ. 

ಮುಂದೆ ಅವರು ನಟ ಶಾಹಿದ್ ಕಪೂರ್ ಜೊತೆ 'ದೇವ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ದಸರಾ ಹಬ್ಬದಂದು ಚಿತ್ರವು ಚಿತ್ರಮಂದಿರಗಳಿಗೆ ಬರಲಿದೆ.

Latest Videos

click me!