ಆದ್ರೆ ನಾನು ಟ್ರೋಲ್ ಮಾಡೋದನ್ನು ಹೆಮ್ಮೆಯಾಗಿ ತಗೊಂಡೆ. ಯಾಕಂದ್ರೆ ಯಾರಾದ್ರೂ ನಿಮ್ಮನ್ನ ತಗ್ಗಿಸಬೇಕು ಅಂದ್ರೆ, ನೀವು ಅವರಿಗಿಂತ ಮೇಲಿದ್ದೀರಿ ಅಂತ ಅರ್ಥ ಅಲ್ವಾ. ಪರವಾಗಿಲ್ಲ ಅಂತ ನಾನು ನನ್ನ ತಂದೆ ತಾಯಿಗೆ ಸಮಾಧಾನ ಹೇಳ್ತಿದ್ದೆ. ಆದ್ರೆ ಒಂದು ಹಂತದ ನಂತರ ಅದು ತುಂಬಾ ಜಾಸ್ತಿ ಆಯ್ತು. ನನ್ನನ್ನು ಟ್ರೋಲ್ ಮಾಡೋಕೆ ಜನ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಿದ್ದಾರೆ ಅಂತ ನಾನು ಕಂಡಕೊಂಡೆ ಎಂದು ಪೂಜಾ ಹೇಳಿದ್ದಾರೆ.