ಸಲ್ಮಾನ್ ಖಾನ್ ಜೊತೆ ಡೇಟಿಂಗ್ ವದಂತಿ; ಮೊದಲ ಬಾರಿಗೆ ಮೌನ ಮುರಿದ ಕರಾವಳಿ ಸುಂದರಿ

Published : Apr 14, 2023, 12:58 PM IST

ಸಲ್ಮಾನ್ ಖಾನ್ ಜೊತೆ ಡೇಟಿಂಗ್ ವದಂತಿ ಬಗ್ಗೆ ಕರಾವಳಿ ಸುಂದರಿ ಪೂಜಾ ಹೆಗ್ಡೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. 

PREV
18
ಸಲ್ಮಾನ್ ಖಾನ್ ಜೊತೆ ಡೇಟಿಂಗ್ ವದಂತಿ; ಮೊದಲ ಬಾರಿಗೆ ಮೌನ ಮುರಿದ ಕರಾವಳಿ ಸುಂದರಿ

ಬಹುಭಾಷಾ ನಟಿ ಪೂಜಾ ಹೆಗ್ಡೆ ಸದ್ಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ತೆರೆಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಪೂಜಾ ಮತ್ತು ಸಲ್ಮಾನ್ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. 

28

ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುವ ಜೊತೆಗೆ ಡೇಟಿಂಗ್ ವದಂತಿ ಕೂಡ ಜೋರಾಗಿತ್ತು, ಪೂಜಾ ಜೊತೆ ಸಲ್ಮಾನ್ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಬಾಲಿವುಡ್‌ನಲ್ಲಿ ಗುಲ್ಲಾಗಿದೆ. ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ, ಪೂಜಾಗೆ ದುಬಾರಿ ಗಿಫ್ಟ್ ಗಳನ್ನು ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

38

ಡೇಟಿಂಗ್ ವದಂತಿ ಜೋರಾಗಿದ್ದರೂ ಎಲ್ಲಿಯೂ ಇಬ್ಬರೂ ತುಟಿಬಿಚ್ಚಿರಲಿಲ್ಲ. ಇದೀಗ ಮೊದಲ ಬಾರಿಗೆ ನಟಿ ಪೂಜಾ ಮೌನ ಮುರಿದಿದ್ದಾರೆ. ತಾನು ಸಿಂಗಲ್ ಎನ್ನುವ ಮೂಲಕ ಸಲ್ಮಾನ್ ಜೊತೆಗಿನ ಪ್ರೀತಿ ಪ್ರೇಮದ ವದಂತಿಗೆ ಪುಲ್‌ಸ್ಟಾಪ್ ಇಟ್ಟಿದ್ದಾರೆ. 

48

ಇತ್ತೀಚೆಗಷ್ಟೆ ಪೂಜಾ ತನ್ನ ಸಹೋದರ ರಿಷಬ್ ಹೆಗ್ಡೆ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ವಿಶೇಷ ಎಂದರೆ ಸಲ್ಮಾನ್ ಖಾನ್ ಕೂಡ ಕಾಣಿಸಿಕೊಂಡಿದ್ದರು. ಇದು ವದಂತಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ಮಾಡಿತ್ತು. 

58

ಆದರೀಗ ಈ ಪ್ರತಿಕ್ರಿಯೆ ನೀಡಿರುವ ಪೂಜಾ ಇದು ಸುಳ್ಳು ಸುದ್ದಿ, ನಾನಿನ್ನು ಸಿಂಗಲ್. ಸದ್ಯ ನನ್ನ ಕರಿಯರ್ ಕಡೆ ಸಂಪೂರ್ಣ ಗಮನ ಹರಿಸುತ್ತಿದ್ದೇನೆ' ಎಂದು ಹೇಳಿದ್ದಾರೆ. ಈ ಬಗ್ಗೆ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. 

68

ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿರುವ ಪೂಜಾ ಹೆಗ್ಡೆ ದೊಡ್ಡ ಹಿಟ್ ಗಾಗಿ ಕಾಯುತ್ತಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಜೊತೆ  ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ಮೂಲಕ ತೆರೆಮೇಲೆ ಬರ್ತಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್‌ಗಾಗಿ ಪೂಜಾ ಹೆಗ್ಡೆ ಎದುರು ನೋಡುತ್ತಿದ್ದಾರೆ. 

78

ಸಾಲು ಸಾಲು ಸೋಲು ಕಂಡಿದ್ದಾರೆ. ಹೀಗಾಗಿ ಅವರಿಗೆ ಒಂದು ಗೆಲುವಿನ ಅವಶ್ಯಕತೆ ಇದೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

88

ಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು ಉತ್ತಮ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಮತ್ತು ಪೂಜಾ ಜೊತೆ ಸೌತ್ ಸ್ಟಾರ್ ವೆಕಂಟೇಶ್ ಕೂಡ ನಟಿಸಿದ್ದಾರೆ. ಜಗಪತಿ ಬಾಬು, ಶೆಹನಾಜ್ ಗಿಲ್, ಪಾಲಕ್ ತಿವಾರಿ  ಸೇರಿದಂತೆ ಅನೇಕರು ನಟಿಸಿದ್ದಾರೆ. 
 

Read more Photos on
click me!

Recommended Stories