ಲಾಲ್ ಸಿಂಗ್ ಛಡ್ಡಾ ಪ್ಲಾಫ್: ತಮ್ಮ ಕಾಲು ತಾವೇ ಎಳೆದು ಕೊಂಡ ಆಮೀರ್ ಖಾನ್, ಭೇಷ್ ಎಂದ ನೆಟ್ಟಿಗರು!

Published : Apr 13, 2023, 04:57 PM IST

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಆಮೀರ್ ಖಾನ್‌ ತಮ್ಮ ಸಿನಿಮಾಗಳ  ಜೊತೆ ವಿವಾದಕ್ಕೂ ಫೇಮಸ್‌. ಆಗಾಗ ಜನಗಳಿಂದ ಟ್ರೋಲ್‌ಗೂ ಗುರಿಯಾಗುತ್ತಾರೆ. ಈಗ ಮತ್ತೆ ಆಮೀರ್‌ ಖಾನ್‌ ಸುದ್ದಿಯಲ್ಲಿದ್ದಾರೆ. ಈ ಬಾರಿ ಜನರು ಅವರನ್ನು ಹೊಗಳುತ್ತಿದ್ದಾರೆ.ಆಮೀರ್ ಖಾನ್  ತಮ್ಮ ಸಿನಿಮಾ  ಲಾಲ್ ಸಿಂಗ್ ಚಡ್ಡಾ ಸೋಲನ್ನು ಪಾಸಿಟಿವ್  ಆಗಿ ಸ್ವೀಕರಿಸಿದ್ದಾರೆ ಎಂಬ ಸುದ್ದಿ ಟ್ರೆಂಡ್ ಆಗುತ್ತಿದೆ.  

PREV
18
ಲಾಲ್ ಸಿಂಗ್ ಛಡ್ಡಾ ಪ್ಲಾಫ್: ತಮ್ಮ ಕಾಲು ತಾವೇ ಎಳೆದು ಕೊಂಡ ಆಮೀರ್ ಖಾನ್, ಭೇಷ್ ಎಂದ ನೆಟ್ಟಿಗರು!

ಡ್ರೀಮ್ 11 ಜಾಹೀರಾತಿನಲ್ಲಿ ತಮ್ಮ ಲಾಲ್ ಸಿಂಗ್ ಚಡ್ಡಾ ಸಿನಿಮಾದ ವೈಫಲ್ಯದ ಬಗ್ಗೆ ಜೋಕ್ ಮಾಡಿದ್ದಕ್ಕಾಗಿ ಅನೇಕರು ಆಮೀರ್ ಖಾನ್ ಅವರನ್ನು ಹೊಗಳಿದ್ದಾರೆ.

28

ಆಮೀರ್ ಖಾನ್ ಪ್ರಸ್ತುತ IPL ಪಂದ್ಯಗಳ ಸಮಯದಲ್ಲಿ ತಮ್ಮ Dream11 ಜಾಹೀರಾತುಗಳೊಂದಿಗೆ ವಿರಾಮಗಳಲ್ಲಿ ಕ್ರಿಕೆಟ್ ಲವರ್ಸ್‌ಗೆ ಕಣ್ಣಿಗೆ ಬೀಳುತ್ತಿದ್ದಾರೆ. ಅವರು ತಮ್ಮ ಕೊನೆಯ ಚಿತ್ರ ಲಾಲ್ ಸಿಂಗ್ ಚಡ್ಡಾಗೆ ಸಂಬಂಧಿಸಿದಂತೆ ತಮ್ಮ ಮೇಲೆ ಜೋಕ್‌ ಮಾಡಿಕೊಡಿದ್ದಾರೆ.

38

ಜಸ್ಪ್ರೀತ್ ಬುಮ್ರಾ ಮತ್ತು ಆಮೀರ್ ಖಾನ್‌ ಅವರ ಡ್ರೀಮ್11 ಜಾಹೀರಾತಿನಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾದ ವೈಫಲ್ಯದ ಬಗ್ಗೆ ಅಪಹಾಸ್ಯ ಮಾಡಿರುವುದಕ್ಕೆ ಅಮೀರ್ ಈಗ ಪ್ರಶಂಸೆ ಗಳಿಸಿದ್ದಾರೆ.

48

ಈ  ಜಾಹೀರಾತಿನ ಕುರಿತು ಪ್ರತಿಕ್ರಿಯಿಸಿದ ನಿರ್ಮಾಪಕ ಅತುಲ್ ಕಸ್ಬೇಕರ್ ಅವರು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. 'ಆಮೀರ್ ಖಾನ್ ಮತ್ತು ವಿವಿಧ ಕ್ರಿಕೆಟಿಗರೊಂದಿಗೆ ಡ್ರೀಮ್‌ 11 ಜಾಹೀರಾತುಗಳನ್ನು ಆನಂದಿಸುತ್ತಿದ್ದೇನೆ. ಹೆಚ್ಚಿನ ಸೂಪರ್‌ಸ್ಟಾರ್‌ಗಳು ತಮ್ಮನ್ನು ಅಪಹಾಸ್ಯ ಮಾಡುವ ಸ್ಕ್ರಿಪ್ಟ್‌ಗಳಿಗೆ ಒಪ್ಪುವುದು ಅಪರೂಪ. ಇದು ವಾಸ್ತವವಾಗಿ ಮಹಾಶಕ್ತಿಯಾಗಿ ಕೊನೆಗೊಳ್ಳುತ್ತದೆ. ನಿಮ್ಮ ಮೇಲೆ ನೀವು ತಮಾಷೆ ಮಾಡಬಹುದಾದರೆ ಒಬ್ಬ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ವೆಲ್‌ಡನ್‌' ಎಂದಿದ್ದಾರೆ.

58

ಟ್ವೀಟರ್‌ ಬಳಕೆದಾರರೊಬ್ಬರು' ಲಾಲ್ ಸಿಂಗ್ ಚಿತ್ರಕ್ಕಿಂತ ಅಮೀರ್ ಖಾನ್ ಡ್ರೀಮ್ 11 ಜಾಹೀರಾತಿನಲ್ಲಿ ಲಾಲ್ ಸಿಂಗ್ ಜೋಕ್‌ನಿಂದ ಹೆಚ್ಚು ಹಣವನ್ನು ಗಳಿಸಿದ್ದಾರೆ' ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

68

 ಆದಾಗ್ಯೂ, ಅನೇಕರು ನಟನನ್ನು ಸ್ವತಃ ತಮ್ಮ ಕಾಲನ್ನು ತಾವೇ ಎಳೆದುಕೊಂಡಿದ್ದಕ್ಕೆ ಹೊಗಳಿದ್ದಾರೆ. '@Dream11 ರ ಇತ್ತೀಚಿನ ಜಾಹೀರಾತು-ಸರಣಿಯು @AKPPL_Official #AamirKhan ಏಕೆ ನಿಜವಾಗಿ ಮಿಸ್ಟರ್ ಪರ್ಫೆಕ್ಟ್ ಎಂಬುದನ್ನು ಸಾಬೀತುಪಡಿಸುತ್ತದೆ' ಎಂದು Twitter ಬಳಕೆದಾರರು ಬರೆದಿದ್ದಾರೆ.
 

78

ಮತ್ತೊಬ್ಬರು ಟ್ವೀಟ್ ಮಾಡಿ, 'ಆಮೀರ್ ಖಾನ್ ಅವರ ಡ್ರೀಮ್ 11 ಜಾಹೀರಾತುಗಳು ಚೆನ್ನಾಗಿವೆ. ಅವನು ತನ್ನ ಸ್ವಂತ ವೈಫಲ್ಯಗಳನ್ನು ಗೇಲಿ ಮಾಡುತ್ತಿದ್ದಾರೆ ಉದಾ. ಲಾಲ್ ಸಿಂಗ್ ಚಡ್ಡಾ. ಎಷ್ಟು ಸ್ಪೋರ್ಟಿ, ಬಾಲಿವುಡ್‌ನಲ್ಲಿ ಹೆಚ್ಚಿನವರು ಸ್ಪೋರ್ಟಿ ಅಲ್ಲ ಎಂದು ನಿಮಗೆ ತಿಳಿದಿದೆ' ಎಂದಿದ್ದಾರೆ.

88

'ಡ್ರೀಮ್ 11 ಜಾಹೀರಾತುಗಳು. ಆಮೀರ್ ಖಾನ್ ತನ್ನ ಯಶಸ್ಸು ಮತ್ತು ವೈಫಲ್ಯಗಳನ್ನು ತುಂಬಾ  ಸ್ಪೋರ್ಟಿ ಆಗಿ ತೆಗೆದುಕೊಂಡ ರೀತಿ. ಅದು ಜಾಹೀರಾತಿನಲ್ಲಿರಲಿ ಅಥವಾ ಯಾವುದೇ ಪ್ರದರ್ಶನದಲ್ಲಿರಲಿ ಅವರು ತನ್ನ ತಪ್ಪುಗಳನ್ನು ಸ್ವಯಂಪ್ರೇರಿತವಾಗಿ ಮಾತನಾಡುತ್ತಾರೆ ಅಥವಾ ತಮಾಷೆ ಮಾಡುತ್ತಾರೆ. ಶ್ರೇಷ್ಠ ನಟನ ಚಿಹ್ನೆ.' ಎಂದು ಇನ್ನೂ ಒಬ್ಬರು ಟ್ವೀಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories