ದೀಪಿಕಾ ಪಡುಕೋಣೆಗೆ ಸ್ತನ ಕಸಿ ಮಾಡಿಸಿಕೊಳ್ಳಲು ಹೇಳಿದ್ರಂತೆ ನಿರ್ದೇಶಕರು

Published : Apr 13, 2023, 04:41 PM IST

ಸೌಂದರ್ಯದ ಮೇಲೆ ಅವಲಂಬಿತವಾಗಿರುವ ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ದೇಶಕರು ನಟಿಯರಿಗೆ ಕಾಸ್ಮೇಟಿಕ್‌ ಸರ್ಜರಿ ಮೂಲಕ ದೇಹದ ಆಗಾಂಗಗಳನ್ನು ಪಾತ್ರಕ್ಕೆ ತಕ್ಕಂತೆ ಸರಿಮಾಡಿಕೊಳ್ಳುವಂತೆ ಹೇಳುವುದು ಸಾಮಾನ್ಯ. ಬಾಲಿವುಡ್‌ನ ಕೆಲವು ನಟಿಯರಿಗೆ ಚಲನಚಿತ್ರ ನಿರ್ಮಾಪಕರು ಪಾತ್ರಕ್ಕಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡುವಂತೆ ಕೇಳಿಕೊಂಡ ಬಗ್ಗೆ ಬಹಿರಂಗಪಡಿಸಿದ್ದಾರೆ. ದೀಪಿಕಾ ಪಡುಕೋಣೆಯಿಂದ ರಾಧಿಕಾ ಆಪ್ಟೆ ಮತ್ತು ಇನ್ನೂ ಅನೇಕ ನಟಿಯರು ಈ ಪಟ್ಟಿಯಲ್ಲಿದ್ದಾರೆ.    

PREV
17
 ದೀಪಿಕಾ ಪಡುಕೋಣೆಗೆ ಸ್ತನ ಕಸಿ ಮಾಡಿಸಿಕೊಳ್ಳಲು ಹೇಳಿದ್ರಂತೆ ನಿರ್ದೇಶಕರು

ಕಾಕ್‌ಟೈಲ್, ಬಾಜಿರಾವ್ ಮಸ್ತಾನಿ, ರಾಮ್ ಲೀಲಾ ಮತ್ತು ಪಠಾಣ್‌ನಲ್ಲಿ ಅದ್ಭುತ ಅಭಿನಯಕ್ಕಾಗಿ ಹೆಸರುವಾಸಿಯಾದ ಬಾಲಿವುಡ್ ಕ್ವೀನ್ ದೀಪಿಕಾ ಪಡುಕೋಣೆಗೂ ಸಹ  ಸ್ತನ ಸರ್ಜರಿಗೆ ಒಳಗಾಗುವಂತೆ ಹೇಳಲಾಯಿತು ಮತ್ತು ಅವರಿಗೆ ಕೇವಲ 18 ವರ್ಷದವರಾಗಿದ್ದಾಗ ಸ್ತನ ಕಸಿಗಳನ್ನು ಮಾಡಿಸುವಂತೆ ಹೇಳಲಾಗಿತ್ತೆಂಬುದನ್ನು ಬಹಿರಂಗಗೊಳಿಸಿದ್ದಾರೆ.

27

ಮೋನಿಕಾ ಓಹ್ ಮೈ ಡಾರ್ಲಿಂಗ್ ಖ್ಯಾತಿಯ ಟ್ಯಾಲೆಂಟೆಡ್‌ ನಟಿ ರಾಧಿಕಾ ಆಪ್ಟೆ ಅವರಿಗೆ ಚಲನಚಿತ್ರಗಳಲ್ಲಿ ನಟಿಸಲು ನೋಸ್‌ ಜಾಬ್‌ ಮತ್ತು ಸ್ತನ ಕಸಿ ಮಾಡಿಸಿಕೊಳ್ಳಲು ಹೇಳಿದರು. ರಾಧಿಕಾ ಇದೀಗ OTT ಅನ್ನು ಆಳುತ್ತಿದ್ದಾರೆ.

 

37

ಪಟಖಾ' ಖ್ಯಾತಿಯ ಬಾಲಿವುಡ್ ನಟಿ ರಾಧಿಕಾ ಮದನ್ ಅವರು ಸಹ ಈ ರೀತಿಯ ಸಲಹೆ ಪಡೆದಿದ್ದಾರೆ.  ತಮ್ಮನ್ನು ತಾವು ಸುಂದರವಾಗಿ ಕಾಣುವಂತೆ ಸರಿಪಡಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಕೇಳಿಕೊಂಡರು ಎಂದು ಒಮ್ಮೆ ಬಹಿರಂಗಪಡಿಸಿದರು. ಆದರೆ ರಾಧಿಕಾ ಅವರತ್ತ ಗಮನವೇ ಕೊಡಲಿಲ್ಲವಂತೆ.

47

ಮಾಧ್ಯಮ ವರದಿಗಳ ಪ್ರಕಾರ,  ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೂ ಕಾಸ್ಮೆಟಿಕ್‌ ಸರ್ಜರಿಗೆ ಒಳಾಗಲು ಸಲಹೆ ನೀಡಲಾಯಿತಂತೆ. ಅವರು ಹೆಚ್ಚು ಸುಂದರವಾಗಿ ಕಾಣಿಸಲು ಮೂಗಿನ ಶಸ್ತ್ರಚಿಕಿತ್ಸೆ ಮಾಡುವಂತೆ ಯಾರೋ ಕೇಳಿದ್ದರಂತೆ.

57

ಗ್ಲೋಬಲ್ ಐಕಾನ್ (Global Icon) ಮತ್ತು ಸೆನ್ಸೇಶನ್ ಪ್ರಿಯಾಂಕಾ ಚೋಪ್ರಾಗೆ ಸ್ತನ ಕಸಿ ಮಾಡಿಸಲು, ದವಡೆಯನ್ನು ಸರಿಪಡಿಸಲು ಮತ್ತು ಅವಳ ಪೃಷ್ಠ ಸರ್ಜರಿ ಮಾಡಿಸಲು ಹೇಳಲಾಯಿತು. 


 

67

ಬಾಲಿವುಡ್ ನಟಿ ಯಾಮಿ ಗೌತಮ್ ಅವರಿಗೆ ಮೂಗನ್ನು ಸರಿ ಮಾಡಿಸುವಂತೆ ಕೇಳಲಾಯಿತು. ಯಾಮಿ ಗೌತಮ್‌ ಅವರ  ಮೂಗು ಹೇಗೆ ಪಕೋಡಾದಂತೆ ಕಾಣುತ್ತದೆ ಎಂದು ಹೇಳಿದ್ದರು. ಆದರೆ ಅವರು ಬದಲಾವಣೆ ಮಾಡಿಸಲು ಖಡಾಖಂಡಿತವಾಗಿ ನಿರಾಕರಿಸಿದರು.

 

77

ಪ್ಯಾರ್ ಕಾ ಪಂಚನಾಮಾದಲ್ಲಿನ ಅದ್ಭುತ ಅಭಿನಯಕ್ಕಾಗಿ ಹೆಚ್ಚು ಹೆಸರುವಾಸಿಯಾದ ಬಾಲಿವುಡ್ ನಟಿ ಸೊನ್ನಲ್ಲಿ ಸೇಗಲ್ ಅವರಿಗೂ ಸಹ ಕಾಸ್ಮೆಟಿಕ್‌ ಸರ್ಜರಿಯ ಸಲಹೆ ನೀಡಲಾಯಿತು ಮತ್ತು ಬದಲಾವಣೆಗಳನ್ನು ಮಾಡಲು ಕೇಳಲಾಯಿತು. ಆಗ ಅವರು ತುಂಬಾ ಸ್ಲಿಮ್ ಮತ್ತು ತೆಳ್ಳಗಿದ್ದರು.

Read more Photos on
click me!

Recommended Stories