ಅಪ್ಪನ 2ನೇ ಮದುವೆಗೆ ಅಮ್ಮನೂ ಹಾಜರ್… ಮಲತಾಯಿ ಜೊತೆ ತುಂಬಾ ಕ್ಲೋಸ್ ಅಂತಾರೆ ಈ ನಟಿ!

Published : May 16, 2024, 05:02 PM IST

ನಟಿ ಪೂಜಾ ಬೇಡಿ ಮಗಳು ಅಲಯಾ ಎಫ್ ತಮ್ಮ ತಂದೆ ತಾಯಿಯ ಡಿವೋರ್ಸ್ ಬಗ್ಗೆ ಮೊದಲ ಬಾರಿಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಈ ಬಗ್ಗೆ ಅವರು ಹೇಳಿದ್ದೇನು? ನೋಡೋಣ.   

PREV
17
ಅಪ್ಪನ 2ನೇ ಮದುವೆಗೆ ಅಮ್ಮನೂ ಹಾಜರ್… ಮಲತಾಯಿ ಜೊತೆ ತುಂಬಾ ಕ್ಲೋಸ್ ಅಂತಾರೆ ಈ ನಟಿ!

ಬಾಲಿವುಡ್ ಸ್ಟೈಲಿಸ್ಟ್ ನಟಿಯರಲ್ಲಿ ಅಲಯಾ ಎಫ್ (Alaya F) ಕೂಡ ಒಬ್ರು. ತಮ್ಮ ಬೋಲ್ಡ್‌ನೆಸ್‌ನಿಂದಾಗಿ ಹೆಸರುವಾಸಿಯಾಗಿರುವ ಆಲಯಾ ಇದೀಗ ತಮ್ಮ ಹೆತ್ತವರ ವಿಚ್ಛೇದನದ ಬಗ್ಗೆ ಗುಟ್ಟು ಬಿಚ್ಚಿಟ್ಟಿದ್ದಾರೆ. ಜೊತೆಗೆ ತಾವು ಅದನ್ನು ಎಷ್ಟು ಚೆನ್ನಾಗಿ ನಿಭಾಯಿಸಿದರು ಅನ್ನೋದನ್ನು ಸಹ ಹಂಚಿಕೊಂಡರು.
 

27

ಅಲಯಾ ಎಫ್ ತ್ತೀಚಿಗೆ ಬಿಡುಗಡೆಯಾದ ಶ್ರೀಕಾಂತ್ ಸಿನಿಮಾದಲ್ಲಿನ ನಟನೆಗಾಗಿ ಭಾರಿ ಪ್ರಸಂಶೆಗೆ ಪಾತ್ರರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಪೋಷಕರು ವಿಚ್ಛೇದನಕ್ಕೆ (Divorce of parents) ಒಳಗಾಗಿರೋ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 
 

37

ಅಪ್ಪ ಅಮ್ಮನ ಡಿವೋರ್ಸ್‌ನಿಂದ ಜೀವನ ಬದಲಾದರೂ, ವಿಚ್ಛೇದನ ಕೆಟ್ಟದೆಂದು ಅಂದುಕೊಂಡಿಲ್ಲ ಎನ್ನುತ್ತಾರೆ ನಟಿ. ನಟಿ ಪೂಜಾ ಬೇಡಿ (Pooja Bedi) ಮತ್ತು ಉದ್ಯಮಿ ಫರ್ಹಾನ್ ಫರ್ನಿಚರ್ವಾಲಾ 1994 ರಲ್ಲಿ ವಿವಾಹವಾದರು, 2003 ರವರೆಗೆ ಅವರು ಜೊತೆಯಾಗಿದ್ದರು. ಡೀವೋರ್ಸ್ ಬಳಿಕೆ ಏನಾಯ್ತು ಅನ್ನೋದನ್ನು ಆಲಯಾ ಹೇಳಿದ್ದಾರೆ ಕೇಳಿ. 
 

47

ಅಲಯಾ ಹೇಳಿದ್ದೇನು?
'ನನ್ನ ಪೋಷಕರು ತಮ್ಮದೇ ಆದ ಬೇರೆ ಬೇರೆ ಮಾರ್ಗಗಳಲ್ಲಿ ಹೋಗುತ್ತಿದ್ದರು, ನಾನು ಗಮನಿಸಿದಂತೆ ಅವರಿಬ್ಬರೂ, ತುಂಬಾನೆ ಕ್ಲೋಸ್ ಆಗಿದ್ದರು. ಇಂದಿಗೂ ಅವರು ಉತ್ತಮ ಸ್ನೇಹಿತರಾಗಿಯೇ ಇದ್ದಾರೆ. ಅಷ್ಟೇ ಯಾಕೆ ನನ್ನ ತಾಯಿ ನನ್ನ ತಂದೆಯ ಎರಡನೇ ಮದುವೆಗೆ ಕೂಡ ಹಾಜರಾಗಿದ್ದರು,' ಎಂದಿದ್ದಾರೆ ಆಲಯಾ.

57

ಸ್ಟೆಪ್ ಮದರ್ ಜೊತೆಗಿನ ರಿಲೇಶನ್‌ಶಿಪ್ ಬಗ್ಗೆ ಮಾತನಾಡಿದ ಆಲಯಾ ನಾನು ನನ್ನ ಮಲತಾಯಿ ಜೊತೆ ತುಂಬಾ ಕ್ಲೋಸ್ ಆಗಿದ್ದೇನೆ. ನನ್ನರ್ಧ ಸಹೋದರನನ್ನು ಸ್ಟೆಪ್ ಬ್ರದರ್ ಅನ್ನೋದೆ ಇಷ್ಟವಿಲ್ಲ, ಅವನು ನನ್ನ ಸ್ವಂತ ಸಹೋದರ, ಇಬ್ಬರ ನಡುವೆ ಒಂದೇ ವ್ಯತ್ಯಾಸ ಅಂದ್ರೆ ನಮ್ಮಿಬ್ಬರ ತಾಯಿ ಬೇರೆ ಬೇರೆ ಬೇರೆ ಅಷ್ಟೇ ಎಂದು ತಾಯಿಯ ಡಿವೋರ್ಸ್ ಮತ್ತು ತಂದೆಯ ಎರಡನೇ ಮದುವೆ ಬಗ್ಗೆ ಕೂಲ್ ಆಗಿ ಮಾತನಾಡಿದ್ದಾರೆ ಆಲಯಾ. 
 

67

'ಇಬ್ಬರೂ ತಮ್ಮ ಜೀವನದಲ್ಲಿ ಸಂತೋಷವಾಗಿದ್ದಾರೆ'
ತನ್ನ ಮಲತಾಯಿ ಮತ್ತು ತಂದೆ ಇಲ್ಲದ ತನ್ನ ಜೀವನವನ್ನು ಕಲ್ಪಿಸಿಕೊಳ್ಳುವುದು ತನಗೆ ಅಸಾಧ್ಯ ಎಂದಿರುವ ಅಲಯಾ, ನನಗೆ, ನನ್ನ ಪೋಷಕರು ವಿಚ್ಛೇದನ ಪಡೆದಿರುವುದು ಜೀವನದ ಮೇಲೆ ಯಾವತ್ತೂ ಕೆಟ್ಟ ಪರಿಣಾಮ ಬೀರಿಲ್ಲ. ಇಬ್ಬರೂ ತಮ್ಮ ಜೀವನದಲ್ಲಿ ಸಂತೋಷವಾಗಿದ್ದಾರೆ. ನನ್ನ ತಲೆಯಲ್ಲಿ ವಿಚ್ಛೇದನವು ಎಂದಿಗೂ ಕೆಟ್ಟ ವಿಷಯವಲ್ಲ ಎಂದು ನಾನು ಅರಿತುಕೊಂಡೆ, ಏಕೆಂದರೆ ನನ್ನ ಪೋಷಕರು ಡಿವೋರ್ಸ್ ಆದರೂ ಇಂದಿಗೂ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ ಎಂದಿದ್ದಾರೆ ಆಲಯಾ. 

77

ಅಲಯಾ ಬಗ್ಗೆ ಹೇಳೊದಾದ್ರೆ ಸದ್ಯ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ. ತಮ್ಮ ಫ್ಯಾಷನ್ ಸೆನ್ಸ್‌ನಿಂದಾಗಿಯೇ ಹೆಚ್ಚು ಫೇಮಸ್ ಆಗಿರೋದು. ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಅಲಯಾ, ಪ್ರತಿ ಬಾರಿ ತಮ್ಮ ಹಾಟ್, ಬೋಲ್ಡ್ ಫೋಟೋ ಗಳಿಂದಲೇ ಸುದ್ದಿಯಾಗಿರ್ತಾರೆ. 
 

Read more Photos on
click me!

Recommended Stories