ಅಲಾಯಾರ ಫೋಟೋಗೆ ಕಿಲ್ಲಿಂಗ್ ಇನ್ ಬ್ಲ್ಯಾಕ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ . ಅದೇ ಸಮಯದಲ್ಲಿ, ಇನ್ನೊಬ್ಬ ವ್ಯಕ್ತಿಯು ಬೆಂಕಿಯ ಎಮೋಜಿಯನ್ನು ಹಾಕಿದ್ದಾರೆ. ಮತ್ತೊಬ್ಬರು ಫೋಟೋಗೆ ಆಸಮ್ ಎಂದು ಬಣ್ಣಿಸಿ ಹಾರ್ಟ್ ಎಮೋಜಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಅಲಾಯಾ ಪೋಸ್ಟ್ ಮಾಡಿದ್ದ , ಫೋಟೋದಲ್ಲಿ ಸಣ್ಣ ಫ್ರಾಕ್‌ನಲ್ಲಿ ಕಾಣಿಸಿಕೊಂಡಿದ್ದಳು. ಅಲಾಯಾಳನ್ನು ಈ ಡ್ರೆಸ್‌ನಲ್ಲಿ ನೋಡಿದಜನರು ಅವಳನ್ನು ಗೇಲಿ ಮಾಡಿ ಈ ಬಾಲ್ಯದ ಉಡುಪನ್ನು ಈಗ ಏಕೆ ಧರಿಸಿದ್ದೀರಾ? ಎಂದು ಕಾಮೆಂಟ್ ಮಾಡಿದ್ದರು.
ತನ್ನ ಮೊದಲ ಚಿತ್ರ 'ಜವಾನಿ ಜಾನೆಮಾನ್' ಚಿತ್ರದ ಪ್ರಚಾರದ ಸಮಯದಲ್ಲಿ ಅಲಾಯಾ ಈ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾಳೆ .
ಪೂಜಾ ಬೇಡಿ ಮತ್ತು ಫರ್ಹಾನ್ ಇಬ್ರಾಹಿಂ ಫರ್ನೀಚರ್‌ವಾಲಾ ಮಗಳಾದ ಅಲಾ, ನವೆಂಬರ್ 28, 1997 ರಂದು ಜನಿಸಿದರು.
2011ರಲ್ಲಿ ಸೋನಿ ಇಂಟರ್ನ್ಯಾಷನಲ್ ಚಾನೆಲ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದು , ಈ ಶೋದಲ್ಲಿ ಅವಳು ತನ್ನ ತಾಯಿಯೊಂದಿಗೆ ಸ್ಪರ್ಧಿಯಾಗಿ ಕಾಣಿಸಿಕೊಂಡಳು.
ಲೋವರ್ ಪ್ಯಾರೆಲ್‌ನ ಪಬ್‌ನಲ್ಲಿ 2014ರ ನವೆಂಬರ್‌ನಲ್ಲಿ ಅಲಯಾ ರಾಮಾನಂದ್ ಸಾಗರ್ ಮೊಮ್ಮಗಳು ಸಾಕ್ಷಿ ನಡುವೆ ಜಗಳವಾಡಿದ ನಂತರ ಪೂಜಾ ಬೇಡಿ ಎಫ್‌ಐಆರ್ ದಾಖಲಿಸಿದ್ದರು.
ಮತ್ತೊಂದೆಡೆ, ಸಾಕ್ಷಿ ತಾಯಿ ಮೀನಾಕ್ಷಿ ಸಾಗರ್ ಕೂಡ ದೂರು ಸಲ್ಲಿಸಿದ್ದರು. ಆದರೆ, ನಂತರ ಪೂಜಾ ಬೇಡಿ ಅವರನ್ನು ಈ ಪ್ರಕರಣದಲ್ಲಿ ಪೋಸ್ಕೊ ಕಾಯ್ದೆಯಡಿ ಬಂಧಿಸಲಾಯಿತು.
2020ರಲ್ಲಿ ಬಿಡುಗಡೆಯಾದ ಜವಾನಿ ಜಾನೆಮನ್ ಚಿತ್ರದೊಂದಿಗೆ ಅಲಾಯಾ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
ಈ ಚಿತ್ರದಲ್ಲಿ ಟಿಯಾ ಸಿಂಗ್ ಪಾತ್ರವನ್ನು ನಿರ್ವಹಿಸಿರುವ ಅಲಯಾ ಜೊತೆ ಸೈಫ್ ಅಲಿ ಖಾನ್ ಮತ್ತು ಟಬು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಬೋಲ್ಡ್ ಫೋಟೋಗಳಿಂದಾಗಿ 23 ವರ್ಷದ ಅಲಿಯಾ ಯಾವಾಗಲೂ ಗಮನ ಸೆಳೆಯುತ್ತಾರೆ. ಫ್ರೆಂಡ್ಸ್ ಜೊತೆ ಪಾರ್ಟಿಗಳು, ಸೆಲ್ಫಿಗಳು ಮತ್ತು ಅನೇಕ ಬಿಕಿನಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ
ಇನ್‌ಸ್ಟಾಗ್ರಾಮ್ ಕ್ವೀನ್ ಎಂದೂ ಕರೆಯುವ ಅಲಯಾಗೆ ಪ್ರಸ್ತುತ ಅವರು ಇನ್ಸ್ಟಾಗ್ರಾಮ್‌ನಲ್ಲಿ 922 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ .