2011ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ, ಸೋಮಿ ಅಲಿ ಸಲ್ಮಾನ್ ಖಾನ್ ಜೊತೆ ತಮ್ಮ ಸಂಬಂಧ ಮತ್ತು ಬ್ರೇಕಪ್ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ಸಲ್ಮಾನ್ ಖಾನ್ ತನ್ನ ಮೊದಲ ಗೆಳೆಯ. ಆದರೆ ಐಶ್ವರ್ಯ ರೈ ಮಧ್ಯ ಬಂದು, ನಮ್ಮ ಸಂಬಂಧ ಮುರಿಯಿತು ಎಂದು ಸೋಮಿ ಅಲಿ ಸಂದರ್ಶನದಲ್ಲಿ ಹೇಳಿದ್ದರು.
'ನಾನು ಟೀನೇಜ್‌ನಲ್ಲಿರುವಾಗ ಸಲ್ಮಾನ್ ಖಾನ್ ಮೇಲೆ ನನಗೆ ಕ್ರಶ್ ಆಯಿತು, ಇದುನನ್ನನ್ನು ಫ್ಲೋರಿಡಾ (ಅಮೆರಿಕ) ದಿಂದ ಭಾರತಕ್ಕೆ ಕರೆ ತಂದಿತು. ನಾನು ಸಲ್ಮಾನ್ ಅವರನ್ನು ಮದುವೆಯಾಗಲು ಮಾತ್ರ ಚಲನಚಿತ್ರಗಳಿಗೆ ಸೇರಿಕೊಂಡೆ' ಎಂದಿದ್ದಸೋಮಿ ಆಲಿ.
'ನಾನು,ಸಲ್ಮಾನ್ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದೆವು. ಆದರೆ ನಮ್ಮ ಪ್ರೀತಿ ಗುರಿ ತಲುಪಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಐಶ್ವರ್ಯಾ ರೈ ನಮ್ಮ ನಡುವೆ ಬಂದರು. ಆ ದಿನಗಳಲ್ಲಿ ಸಲ್ಮಾನ್ ಸಂಜಯ್ ಲೀಲಾ ಭನ್ಸಾಲಿಯ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದಲ್ಲಿ ಐಶ್ವರ್ಯಾ ಜೊತೆ ಕೆಲಸ ಮಾಡುತ್ತಿದ್ದರು. ಶೂಟಿಂಗ್ ಸಮಯದಲ್ಲಿ ಅವರ ನಡುವೆ ಪ್ರೀತಿಯ ಕಿಡಿ ಹತ್ತಿತ್ತು. ಆ ಬೆಂಕಿ ನನ್ನ ಮತ್ತು ಸಲ್ಮಾನ್ ನಡುವಿನ ಸಂಬಂಧವನ್ನು ಸುಟ್ಟು ಹಾಕಿತು' ಎಂದ ಸೋಮಿ.
ಸೋಮಿ 15 ವರ್ಷದವರಿದ್ದಾಗ, ಸಲ್ಮಾನ್ ಅವರ ಮೈನೆ ಪ್ಯಾರ್ ಕಿಯಾ ಚಿತ್ರವನ್ನು ನೋಡಿ ನಟನಿಗೆ ಅವರ ಹೃದಯವನ್ನು ಕೊಟ್ಟರಂತೆ. ಸಲ್ಮಾನ್ ಅವರನ್ನು ಮದುವೆಯಾಗಬೇಕೆಂದು ಮುಂಬೈಗೆ ಬಂದು ಕೆಲಸ ಹುಡುಕ ತೊಡಗಿದರು. ಈ ಸಮಯದಲ್ಲಿ ಅವರು ಸಲ್ಮಾನ್‌ರನ್ನು ಸ್ಟುಡಿಯೋದಲ್ಲಿ ಭೇಟಿಯಾದರು. ಇದರ ನಂತರ, ಸೋಮಿ ಸಲ್ಮಾನ್ ಖಾನ್ ಅವರೊಂದಿಗೆ ಸುಮಾರು 8 ವರ್ಷಗಳ ಕಾಲ ಸಂಬಂಧ ಹೊಂದಿದ್ದರಂತೆ.
ಬುಲಾಂದ್ (1992) ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರು, ಆದರೆಶೇ.80ರಷ್ಟು ಶೂಟಿಂಗ್ ಪೂರ್ಣಗೊಂಡಿರುವ ಈ ಸಿನಿಮಾ ಇದುವರೆಗೂ ಬಿಡುಗಡೆಯಾಗಲಿಲ್ಲ.
'ಕಣ್ಣು ಮುಚ್ಚಿ ನಂಬಬಹುದಾದ ನಾಲ್ಕು ಫ್ರೆಂಡ್ಸ್ ಎಣಿಸಲು ಯಾರಾದರೂ ನನ್ನನ್ನು ಕೇಳಿದರೆ, ಸಲ್ಮಾನ್ ಖಾನ್ ಅವರಲ್ಲಿ ಒಬ್ಬರು ಎಂದು ನಾನು ಹೇಳುತ್ತೇನೆ. ಅವನಿಗೆ ಚಿನ್ನದ ಹೃದಯವಿದೆ ಮತ್ತು ನನಗೆ ಅಗತ್ಯವಿರುವಾಗಲೆಲ್ಲಾ ನಾನು ಮೊದಲು ಅವನನ್ನು ನೆನಪಿಸಿಕೊಳ್ಳುತ್ತೇನೆ, ಎನ್ನುತ್ತಾರೆ ಸೋಮಿ.
ಅಂದಹಾಗೆ, ಸೋಮಿ ಅಲಿ ಸಲ್ಮಾನ್ ಪ್ರೀತಿಯಲ್ಲಿ ಹುಚ್ಚರಾಗಿದ್ದರು. ಆದರೆ ಸೋಮಿಯ ತಂದೆ ಸಲ್ಮಾನ್ ಅವರನ್ನು ಇಷ್ಟ ಪಡಲಿಲ್ಲ. ಸೋಮಿ ಸಲ್ಮಾನ್ ಅವರನ್ನು ಭೇಟಿಯಾಗುವುದನ್ನು ಅವರು ತೀವ್ರವಾಗಿ ವಿರೋಧಿಸಿದರು. ಇದರ ಹೊರತಾಗಿಯೂ, ಸೋಮಿಯನ್ನು ಒಮ್ಮೆ ಭೇಟಿಯಾಗಲು ಸಲ್ಮಾನ್ ಅವರ ಮನೆಯ ಪೈಪ್ ಮೇಲೆ ಹತ್ತಿದ್ದರು.
ಸಲ್ಮಾನ್‌ಗೆ ಹುಡುಗಿಯರನ್ನು ಬದಲಾಯಿಸುವ ಅಭ್ಯಾಸವಿದೆ. ಅದಕ್ಕೆ ಐಶ್ವರ್ಯಾ ರೈ ಅವರನ್ನು ದೂಷಿಸುವ ಅಗತ್ಯವಿಲ್ಲ ಎಂದೆನಿಸುತ್ತದೆ.
ಬ್ರೇಕಪ್ ನಂತರ 1999ರಲ್ಲಿ ಸೋಮಿ ಮುಂಬೈನಿಂದ ಯುಎಸ್‌ಗೆ ಶಿಫ್ಟ್ ಆದರು. ಸಲ್ಮಾನ್ ಜೊತೆ ಸಂಬಂಧ ಮುರಿದ ನಂತರಸೋಮಿ ತನ್ನ ಜೀವನದಲ್ಲಿ ಯಾರ ಬಗ್ಗೆಯೂ ದ್ವೇಷವಿಲ್ಲ, ಏಕೆಂದರೆ ತನ್ನ ಜೀವನದಲ್ಲಿ ಮುಂದೆ ಸಾಗಿದ್ದೇನೆ ಎಂದು ಹೇಳಿದ್ದರು. ಪ್ರಸ್ತುತ ಅಮೆರಿಕದ ಫ್ಲೋರಿಡಾದಲ್ಲಿ ವಾಸಿಸುತ್ತಿರುವ ಅವರು 'ನೋ ಮೋರ್ ಟಿಯರ್ಸ್' ಎಂಬ ಎನ್‌ಜಿಒ ನಡೆಸುತ್ತಿದ್ದಾರೆ.
ಕೌಟುಂಬಿಕ ಹಿಂಸೆ ಮತ್ತು ಹ್ಯೂಮನ್ ಟ್ರಾಫಿಕಿಂಗ್‌ನಿಂದ ಬಳಲುತ್ತಿರುವ ಜನರಿಗೆ ಸೋಮಿಯ ಎನ್‌ಜಿಒ ಸಹಾಯ ಮಾಡುತ್ತದೆ. ಸಲ್ಮಾನ್ ತನ್ನ ಎನ್‌ಜಿಒ 'ಹ್ಯೂಮನ್ ಬೀಯಿಂಗ್' ಗಾಗಿ ಸೋಮಿಯ ಅನುಭವವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ. ಸಲ್ಮಾನ್ ಎನ್‌ಜಿಒ 'ಬೀಯಿಂಗ್ ಹ್ಯೂಮನ್' ಹೆಸರಿನಲ್ಲಿ ಸಹ ಸೋಮಿಯ ದೊಡ್ಡ ಪಾತ್ರವಿದೆ. ವಾಸ್ತವವಾಗಿ, ಸಲ್ಮಾನ್ ಖಾನ್ ಒಮ್ಮೆ ಸೋಮಿಯ ಟೀ ಶರ್ಟ್ ಮೇಲೆ ಬೀಯಿಂಗ್ ಹ್ಯೂಮನ್ ಎಂದು ಬರೆದಿರುವುದನ್ನು ನೋಡಿದ ನಂತರ, ತಮ್ಮ ಎನ್‌ಜಿಒವನ್ನು ಈ ಹೆಸರಿನಿಂದ ನಡೆಸಲು ಯೋಚಿಸಿದ್ದರು.