ಈ ನಟಿಯ ಮದುವೆ ಮುರಿಯಲು ಅಕ್ಷಯ್‌ ಕುಮಾರ್‌ ಕಾರಣವಂತೆ !

First Published | Oct 30, 2021, 3:11 PM IST

ವಿರಾಸತ್ (Virsat) ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಪೂಜಾ ಬಾತ್ರಾ (Pooja Batra) 45ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು 27 ಅಕ್ಟೋಬರ್ 1976 ರಂದು ಫೈಜಾಬಾದ್‌ನಲ್ಲಿ ಜನಿಸಿದ ಪೂಜಾ ಮಾಡೆಲ್ ಆಗಿ ವೃತ್ತಿ  ಆರಂಭಿಸಿದರು. ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಿದ ಪೂಜಾ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ಅವರು ನಟನೆಗೆ ವಿದಾಯ ಹೇಳಿದರು. ಪ್ರಸ್ತುತ, ಅವರು ತಮ್ಮ ಕುಟುಂಬ ಜೀವನವನ್ನು ಆನಂದಿಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪೂಜಾ ಅವರ ಮೊದಲ ಮದುವೆ ಮುರಿಯಲು ಅಕ್ಷಯ್ ಕುಮಾರ್ (Akshay Kumar)  ಕಾರಣವಂತೆ. ನಂತರ ನಟಿ ನವಾಬ್ ಷಾ ಅವರಜೊತೆ ಮದುವೆಯಾದರು, ಪೂಜಾ ಬಾತ್ರಾ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌  ವಿಷಯಗಳನ್ನು ಕೆಳಗೆ ಓದಿ.

ಪೂಜಾ ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನವನ್ನು (Married LIfe) ಆನಂದಿಸುತ್ತಿದ್ದಾರೆ. ಕೆಲವು ಸಮಯದ ಹಿಂದೆ, ಪೂಜಾ ನಟ ನವಾಬ್ ಶಾ ಅವರನ್ನು ವಿವಾಹವಾದರು. ಈ ನಟಿಯ ಪರ್ಸನಲ್‌ ಲೈಫ್‌ ಚರ್ಚೆಗಳು ಬಹಳ ಸಮಯದಿಂದ ನಡೆಯುತ್ತಿದ್ದವು. ಅಕ್ಷಯ್ ಕುಮಾರ್ (Akshay Kumar) ಇಂಡಸ್ಟ್ರಿಗೆ ಕಾಲಿಟ್ಟಾಗ ಮೊದಲು ಭೇಟಿಯಾದದ್ದು ಪೂಜಾ ಬಾತ್ರಾ ಅವರನ್ನು. ಆ ಸಮಯದಲ್ಲಿ ಪೂಜಾ ಸೂಪರ್ ಮಾಡೆಲ್ ಆಗಿದ್ದರು.

ಅಕ್ಷಯ್ ಸಿನಿಮಾ ಪಾರ್ಟಿಗಳಿಗೆ ಪೂಜಾ ಅವರ  ನೆರವಿನಿಂದ ಹೋಗುತ್ತಿದ್ದರು.  ಸಿನಿಮಾಕ್ಕೆ ಪಾದಾರ್ಪಣೆ ಮಾಡುವ ಮೊದಲು ಮಾಡೆಲಿಂಗ್ ಮಾಡುತ್ತಿರುವಾಗ ಅಕ್ಷಯ್ ಮತ್ತು ಪೂಜಾ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗಿದ್ದರು ಎಂದು ಹೇಳಲಾಗುತ್ತದೆ, ಆದರೆ ಅಕ್ಷಯ್ ಸ್ಟಾರ್‌ಡಮ್ ಪಡೆದ ನಂತರ ಅವರ ಸಂಬಂಧವು ಮುರಿದುಹೋಯಿತು ಮತ್ತು ಇಬ್ಬರೂ ಪರಸ್ಪರ ದೂರವಾಗಲು ನಿರ್ಧರಿಸಿದರು.

Tap to resize

ಚಿತ್ರಕ್ಕೆ ವಿದಾಯ ಹೇಳುವ ಮೂಲಕ ಪೂಜಾ ಅವರು 2002 ರಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಡಾ. ಸೋನು ಎಸ್ ಅಹ್ಲುವಾಲಿಯಾ ಅವರನ್ನು ವಿವಾಹವಾದರು. ಆದರೆ, ಈ ಮದುವೆ ನೆಡೆಯದ ಕಾರಣ ಪೂಜಾ 2011ರಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದರು.

ಮದುವೆಯ ನಂತರ ಪೂಜಾ ಚಿತ್ರರಂಗದಿಂದ ದೂರ ಸರಿದಿದ್ದರು, ಇಷ್ಟೆಲ್ಲಾ ಆದರೂ ಮದುವೆ ಉಳಿಸಿಕೊಳ್ಳಲಾಗಲಿಲ್ಲ. ಮಾಧ್ಯಮಗಳ ವರದಿಯ ಪ್ರಕಾರ, ಅಕ್ಷಯ್ ಕುಮಾರ್ ಪೂಜಾರ ಮದುವೆ ಮುರಿದು ಬೀಳಲು ಕಾರಣ ಎಂದು ನಂಬಲಾಗಿದೆ.

ಸುದ್ದಿ ಪ್ರಕಾರ, ಎರಡನೇ ಕಾರಣವೆಂದರೆ ಪೂಜಾ ಮತ್ತು ಆಕೆಯ ವಿದೇಶಿ ಪತಿ ಸೋನು ನಡುವೆ ಮನಸ್ತಾಪ ಶುರುವಾಯಿತು. ತಾಯಿಯಾಗುವಂತೆ ಸೋನು ಪೂಜಾ ಮೇಲೆ ಒತ್ತಡ ಹೇರುತ್ತಿದ್ದು, ನಟಿ ಅದಕ್ಕೆ ಸಿದ್ಧಳಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಅವರು ವಿಚ್ಛೇದನ ಪಡೆದರು. ಆದರೆ ಪೂಜಾ ಈ ವಿಚಾರದಲ್ಲಿ ಬಹಿರಂಗವಾಗಿ ಏನನ್ನೂ ಹೇಳಿಲ್ಲ.

ಅದರ ನಂತರ ಅವರು ನಟ ನವಾಬ್ ಶಾ ಅವರೊಂದಿಗೆ ಸಂಬಂಧ ಹೊಂದಿದ್ದರು. ಇವರಿಬ್ಬರೂ 4 ಜುಲೈ 2019 ರಂದು ದೆಹಲಿಯಲ್ಲಿ ಆರ್ಯ ಸಮಾಜದ ವಿಧಿವಿಧಾನದಲ್ಲಿ ವಿವಾಹವಾದರು. ಸಂದರ್ಶನವೊಂದರಲ್ಲಿ, ನವಾಬ್ ಶಾ ಅವರು ಮೊದಲ ಭೇಟಿಯಲ್ಲಿ ಪೂಜಾಗೆ ಹೃದಯವನ್ನು ನೀಡಿದ್ದರು ಮತ್ತು ಅವರನ್ನು ಜೀವನ ಸಂಗಾತಿಯನ್ನಾಗಿ ಮಾಡಲು ನಿರ್ಧರಿಸಿದ್ದರು ಎಂದು ಹೇಳಿದ್ದರು.

Pooja Batra

ಪೂಜಾ ಬಾತ್ರಾ  ವೃತ್ತಿಜೀವನದ ಬಗ್ಗೆ ಹೇಳುವುದಾದರೆ ಅವರು ವಿರಾಸತ್, ಭಾಯ್, ಹಸೀನಾ ಮಾನ್ ಜಾಯೇಗಿ, ನಾಯಕ್, ದಿಲ್ ನೆ ಫಿರ್ ಯಾದ್, ಇತ್ತೆಫತಕ್, ಜೋಡಿ ನಂ. ವನ್‌, ಪರ್ವಾನಾ, ಎಬಿಸಿಡಿ 2 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

Latest Videos

click me!