Weight Loss: ಬಾಲಿವುಡ್ ನಟಿ ಸೋನಾಕ್ಷಿಯ before and after ಫೋಟೋಸ್

First Published | Nov 4, 2021, 2:27 PM IST

ಬಾಲಿವುಡ್‌ (Bollywood) ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರ ಫಿಟ್ನೆಸ್ (Fitness) ಜರ್ನಿ ಅನೇಕರಿಗೆ ಸ್ಫೂರ್ತಿ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನ ಸೋನಾಕ್ಷಿ ಸಾಕಷ್ಟು ತೂಕ ಇಳಿಸಿಕೊಳ್ಳಬೇಕಾಗಿತ್ತು ಎಂಬುದು ಎಲ್ಲರಿಗೂ ಗೊತ್ತು ಬಿಡಿ. ಆದಾಗ್ಯೂ, ಅಲ್ಲಿಂದ ಇಲ್ಲಿಯವರೆಗೆ, ಫಿಟ್ ಮತ್ತು ಫ್ಯಾಬ್ (Fit and Fab) ಆಗಿ ಕಾಣುವ ಅವರ ಜರ್ನಿ ಕೊನೆಗೊಂಡಂತೆ ಕಾಣುತ್ತಿಲ್ಲ. ನಟಿಯ transformation ನ ಕೆಲವು ಫೋಟೋಗಳು ಇಲ್ಲಿವೆ.

ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ, 2010 ರಲ್ಲಿ ನಟ ಸಲ್ಮಾನ್ ಖಾನ್ ಅವರ ಹೋಮ್ ಪ್ರೊಡಕ್ಷನ್‌ನಲ್ಲಿ ಸಲ್ಮಾನ್ ಜೊತೆ 'ದಬಾಂಗ್' ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ  ಜನರ ಗಮನ ಸೆಳೆದರು. 

ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು, ಸೋನಾಕ್ಷಿ  ಅವರು ಸುಮಾರು 30 ಕಿಲೋಗ್ರಾಂಗಳಷ್ಟು ತೂಕ ಇಳಿಸುವ ದೊಡ್ಡ ಜರ್ನಿಯನ್ನು ಕೈಗೊಂಡಿದ್ದರು. ವಾಸ್ತವವಾಗಿ, ಅವರು, 95 ಕೆಜಿಗಳಷ್ಟು ತೂಕ ಹೊಂದಿದ್ದಾಗ ಶಾಲೆಯಲ್ಲಿ ಅವರನ್ನು ಹೇಗೆ ಗೇಲಿ ಮಾಡಲಾಗುತ್ತಿತ್ತು,ಎಂಬುದರ ಕುರಿತು ಮಾತನಾಡಿದ್ದಾರೆ.

Tap to resize

ಸೋನಾಕ್ಷಿ ಅವರ ತಂದೆ ಶತ್ರುಘ್ನ ಸಿನ್ಹಾ ಅವರು  'ಕಾಮೋಶ್' ಡೈಲಾಗ್‌ ತುಂಬಾ ಫೇಮಸ್‌. ಸೋನಾಕ್ಷಿ  ಟ್ರೋಲ್‌ಗಳನ್ನು ಮುಚ್ಚಲು ಈ ಡೈಲಾಗ್‌ ಅನ್ನು ಹೆಚ್ಚು ಬಳಸುತ್ತಾರೆ. 'ಸೋನಾಕ್ಷಿ ಅವರ ಬಾಡಿ ಟೈಪಿಗಾಗಿ ಹಲವಾರು ಬಾರಿ ಟ್ರೋಲ್‌ಗೆ ಒಳಗಾಗಿದ್ದಾಳೆ, ಆದರೆ ಅವರು ಟ್ರೋಲ್‌ಗಳಿಗೆ ಹಿಂದಿರುಗಿ ಉತ್ತರ ಕೊಟ್ಟು, ಅವರ ಬಾಯಿ ಮುಚ್ಚಿಸಿದ್ದಾರೆ.

ಆದಾಗ್ಯೂ, ಈ ಎಲ್ಲಾ ವರ್ಷಗಳಲ್ಲಿ, ಅವರು ತನ್ನ ತೂಕವನ್ನು ತನ್ನ ಮೇಲೆ ನಕಾರಾತ್ಮಕ ಪ್ರಭಾವ ಬೀರಲು ಬಿಡಲಿಲ್ಲ. ವಾಸ್ತವವಾಗಿ, ಸೋನಾಕ್ಷಿ ಇತರರ ಒಪ್ಪಿಗೆಗಿಂತ ಹೆಚ್ಚಾಗಿ ತನಗೆ ಸರಿ ಅನಿಸುವ ಬಗ್ಗೆ ಧ್ವನಿಯಾಗಿದ್ದಾರೆ.

30 ಕಿಲೋ ಗ್ರಾಂಗಳಷ್ಟು ತೂಕವನ್ನು ಕಡಿಮೆ ಮಾಡಿದರೂ, ಸೋನಾಕ್ಷಿ ಅವರ ಚಲನಚಿತ್ರ ವೃತ್ತಿ ಜೀವನದ ಕಳೆದ 11 ವರ್ಷಗಳಲ್ಲಿ ತೂಕ ಇಳಿಸುವ ಪ್ರಯಾಣ ಮುಂದುವರೆದಿದೆ. ಅವರ ಫಿಟ್ನೆಸ್ ಜರ್ನಿ ಅನೇಕರಿಗೆ ಸ್ಫೂರ್ತಿಯಾಗಿದೆ.

ತನ್ನ ದೈಹಿಕ ರೂಪಾಂತರಕ್ಕಿಂತ ಹೆಚ್ಚಾಗಿ, ಸೋನಾಕ್ಷಿ ಸೌಂದರ್ಯವನ್ನು ಅದರ ಎಲ್ಲಾ ರೂಪಗಳಲ್ಲಿ ಅಳವಡಿಸಿಕೊಳ್ಳುವ ವ್ಯಕ್ತಿಯಾಗಿದ್ದಾರೆ. ಅವರು ಬಾಡಿ ಪಾಸಿಟಿವಿಟಿಯ ಸಪೋರ್ಟರ್‌ ಹಾಗೂ ಬಿಲೀವರ್‌ ಆಗಿದ್ದಾರೆ. ಒಬ್ಬರು ಆರೋಗ್ಯಕರ ದೇಹಕ್ಕಾಗಿ ಫಿಟ್‌ನೆಸ್ ಜರ್ನಿಯನ್ನು ತೆಗೆದುಕೊಳ್ಳಬೇಕು ಮತ್ತು ತೂಕವನ್ನು ಕಡಿಮೆ ಮಾಡಲು ಮಾತ್ರವಲ್ಲ ಎಂದು ಸೋನಾಕ್ಷಿ  ಹೇಳುತ್ತಾರೆ.

ಹಿಂದೊಮ್ಮೆ ಅವರಿಗೆ ಅರ್ಧ ನಿಮಿಷಕ್ಕಿಂತ ಹೆಚ್ಚು ಕಾಲ ಓಡಲು ಸಾಧ್ಯವಾಗದ ಸಮಯವೂ ಇತ್ತು. ಅವರು  ಕೆಲವೇ ಸೆಕೆಂಡುಗಳಲ್ಲಿ breathless ಆಗುತ್ತಿದ್ದರು. ಆದರೆ ಅವರು ತನ್ನ ಸ್ವಂತ ಒಳ್ಳೆಯದಕ್ಕಾಗಿ ತೂಕವನ್ನು ಕಳೆದುಕೊಳ್ಳುವುದು ಎಷ್ಟು ಅಗತ್ಯ ಎಂಬುದನ್ನು  ಅರಿತುಕೊಂಡರು. 

ಸೋನಾಕ್ಷಿ ವರ್ಕ್ ಔಟ್ ವಿಷಯಕ್ಕೆ ಬಂದರೆ ತುಂಬಾ ರೆಗ್ಯುಲರ್‌ ಆಗಿರುತ್ತಾರೆ. ತಮ್ಮ ಬಾಡಿಯನ್ನು ಫಿಟ್‌ ಹಾಗೂ ಪರ್ಫೇಕ್ಟ್‌ ಆಗಿ ಇಟ್ಟು ಕೊಳ್ಳಲು ಪೈಲೇಟ್ಸ್ ಸೇರಿದಂತೆ ಎಲ್ಲಾ ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ.

ಈಗ ಅವರ ಡಯಟ್‌ (Diet) ಕೂಡ ಸಿಕ್ಕಾಪಟ್ಟೆ ಬದಲಾಗಿದೆ. ಸೋನಾಕ್ಷಿ ಜಂಕ್ ಫುಡ್ ಸೇವನೆಗೆಗಿ ಸಂಪೂರ್ಣ ಕಡಿವಾಣ ಹಾಕಿದ್ದಾರೆ. ಸುಲಭವಾಗಿ ಲಭ್ಯವಿರುವ ಹಣ್ಣುಗಳನ್ನು ಹೊರತುಪಡಿಸಿ, ಪ್ರಯಾಣದಲ್ಲಿರುವಾಗ ನಟ್ಸ್‌ ಮತ್ತು ಸೀಡ್ಸ್‌ ತಿನ್ನಲು ಆದ್ಯತೆ ನೀಡುತ್ತಾರೆ.

ಸೋನಾಕ್ಷಿ ಕೊನೆಯದಾಗಿ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅಜಯ್ ದೇವಗನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಈ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾಗಿತ್ತು. ಪ್ರಸ್ತುತ ಸೋನಾಕ್ಷಿ ಸಿನ್ಹಾ ಅವರು  ಯಾವುದೇ ಬಾಲಿವುಡ್‌ ಪ್ರಾಜೆಕ್ಟ್‌ ಹೊಂದಿಲ್ಲ. 
 

Latest Videos

click me!