Diwali 2021: ನಿರ್ಮಾಪಕ ರಮೇಶ್ ತೌರಾನಿ ಪಾರ್ಟಿಯಲ್ಲಿ ಸಲ್ಮಾನ್‌ ಖಾನ್‌!

Suvarna News   | Asianet News
Published : Nov 04, 2021, 01:36 PM IST

ಸಾಮಾನ್ಯ ಜನರಂತೆ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ತಮ್ಮ ತಮ್ಮ ಮನೆಗಳಲ್ಲಿ ದೀಪಾವಳಿ  (Diwali 2021) ಆಚರಿಸುತ್ತಿದ್ದಾರೆ. ದೀಪಾವಳಿ ಪೂರ್ವ ಸಂಭ್ರಮಾಚರಣೆಯೂ ಜೋರಾಗಿಯೇ ಇತ್ತು. ಖ್ಯಾತ ನಿರ್ಮಾಪಕ ರಮೇಶ್ ತೌರಾನಿ (Ramesh Taurani)  ದೀಪಾವಳಿಯ ಸಂದರ್ಭದಲ್ಲಿ ತಮ್ಮ ಮನೆಯಲ್ಲಿಯೇ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ (Salman Khan) ಕೂಡ ಕಾಣಿಸಿಕೊಂಡಿದ್ದಾರೆ. ಸಂಭ್ರಮಾಚರಣೆಗೆ ಆಗಮಿಸಿದ ಸಲ್ಮಾನ್ ಅವರ ಹಲವು ಫೋಟೋಗಳು ಇಲ್ಲಿವೆ. ಈ ಫೋಟೋಗಳಲ್ಲಿ ಸಲ್ಮಾನ್ ಕೂಡ ಕೋಪದಲ್ಲಿರುವಂತೆ ಕಂಡು ಬರುತ್ತಿದೆ. ಇದರ ಹೊರತಾಗಿಯೂ ಅವರು ಛಾಯಾಗ್ರಾಹಕರಿಗೆ ಪೋಸ್ ನೀಡಿದರು. ರಮೇಶ್ ತೌರಾನಿ ಅವರ ದೀಪಾವಳಿಯ Pre bashನಲ್ಲಿ ಯಾರೆಲ್ಲಾ ಭಾಗವಹಿಸಿದ್ದರು ನೋಡಿ.  

PREV
18
Diwali 2021: ನಿರ್ಮಾಪಕ ರಮೇಶ್ ತೌರಾನಿ ಪಾರ್ಟಿಯಲ್ಲಿ ಸಲ್ಮಾನ್‌ ಖಾನ್‌!

ಸಂಭ್ರಮಾಚರಣೆಗೆ ಆಗಮಿಸಿದ್ದ ಏಕ್ತಾ ಕಪೂರ್‌ (Ekta Kapoor) ಅವರು ಹೊಳೆಯುವ ಹಳದಿ ಬಣ್ಣದ ಸೂಟ್ ಧರಿಸಿದ್ದರು. ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದ ಏಕ್ತಾ, ತಮ್ಮ ಕೂದಲನ್ನು ಬಿಟ್ಟಿದ್ದರು. ಏಕ್ತಾ ಸೇರಿ ಪಾರ್ಟಿಯಲ್ಲಿ ಪಾಲ್ಗೊಂಡವರು ಫುಲ್ ಖುಷಿಯಾಗಿದ್ದರು.

28

ಸಲ್ಮಾನ್ ಖಾನ್ ಜೊತೆ ಪಾರ್ಟಿಯಲ್ಲಿ ಅವರ ಸೋ ಕಾಲ್ಡ್ ಗರ್ಲ್ ಫ್ರೆಂಡ್ ಯುಲಿಯಾ ವಂಟೂರ್ ಕಾಣಿಸಿಕೊಂಡರು. ಈ ಸಮಯದಲ್ಲಿ ಯುಲಿಯಾ ಪ್ರಿಂಟೆಡ್ ಸೀರೆಯಲ್ಲಿ ಕಾಣಿಸಿಕೊಂಡರು. ಮತ್ತು  ಸಲ್ಮಾನ್‌  ಕಪ್ಪು ಔಟ್‌ಫಿಟ್‌  ಧರಿಸಿದ್ದರು.   ಅದೇ ಸಮಯದಲ್ಲಿ ಸಲ್ಮಾನ್‌ ಖಾನ್‌ ಅವರು ಕೋಪದಲ್ಲಿರುವಂತೆ ಕಾಣುತ್ತಿದ್ದರು.

38

ಬಾಬಿ ಡಿಯೋಲ್ (Bobby Deol), ಸುನೀಲ್ ಶೆಟ್ಟಿ (Suniel Shetty)  ಮತ್ತು ಮನ ಶೆಟ್ಟಿ (Mana Shetty) ರಮೇಶ್ ತೌರಾನಿ  ತೌರಾನಿ ಅವರ ಮನೆಯ ದೀಪಾವಳಿ ಪೂರ್ವ ಆಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮೂವರೂ ಒಟ್ಟಾಗಿ ಛಾಯಾಗ್ರಾಹಕರಿಗೆ ಪೋಸ್ ನೀಡಿದರು.

48

ಸುನೀಲ್ ಶೆಟ್ಟಿ (Suniel Shetty)  ಮತ್ತು ಮನ ಶೆಟ್ಟಿ (Mana Shetty) ರಮೇಶ್ ತೌರಾನಿ  ತೌರಾನಿ ಅವರ ಮನೆಯ ದೀಪಾವಳಿ ಪೂರ್ವ ಆಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ  ಛಾಯಾಗ್ರಾಹಕರಿಗೆ ಪೋಸ್ ನೀಡಿದರು.

58

ಪುಲ್ಕಿತ್ ಸಾಮ್ರಾಟ್ (Pulkit Samrat) ಮತ್ತು ಕೀರ್ತಿ ಖರ್ಬಂದಾ ( Kriti Kharbanda) ಕೂಡ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಪುಲ್ಕಿತ್ ಕೆಂಪು ಬಣ್ಣದ ಪೈಜಾಮ ಕುರ್ತಾ ಧರಿಸಿದ್ದರೆ, ಕೀರ್ತಿ ಬೂದು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು 

68

ನಿರ್ದೇಶಕ ಕಬೀರ್ ಖಾನ್ (Kabir Khan) ಪತ್ನಿ ಮಿನಿ ಮಾಥುರ್ (Mini Mathur) ಜೊತೆ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಟ್ರೆಡಿಷನಲ್ ಲುಕ್ ನಲ್ಲಿ ಈ ಜೋಡಿ ತುಂಬಾ ಸುಂದರವಾಗಿ ಕಾಣಿಸಿಕೊಂಡರು ಹಾಗೂ ಕ್ಯಾಮರಾಮನ್‌ಗೂ ಪೋಸ್ ಕೊಟ್ಟಿದ್ದಾರೆ.

78

ಮೀಜಾನ್ ಜಾಫ್ರಿ ಮತ್ತು ತುಷಾರ್ ಕಪೂರ್  (Tusaar Kapoor) ಕೂಡ ದೀಪಾವಳಿ ಬ್ಯಾಷ್‌ನಲ್ಲಿ ಭಾಗವಹಿಸಿದ್ದರು. ಮೀಜಾನ್ ಕೆಂಪು ಕುರ್ತಾ ಮತ್ತು ಧೋತಿಯನ್ನು ಧರಿಸಿದ್ದರೆ, ತುಷಾರ್ ಹೊಳೆಯುವ ಕುರ್ತಾ-ಪೈಜಾಮಾವನ್ನು ಧರಿಸಿದ್ದರು.

88

ಪಾರ್ಟಿಯಲ್ಲಿ ಪುಲ್ಕಿತ್ ಸಾಮ್ರಾಟ್ (Pulkit Samrat), ಯುಲಿಯಾ ವಂತೂರ್ ಮತ್ತು ಕೀರ್ತಿ ಖರ್ಬಂದಾ ಅವರೊಂದಿಗೆ ರಮೇಶ್ ತೌರಾನಿ ಪೋಸ್ ನೀಡಿದರು. ಈ ಸಮಯದಲ್ಲಿ ಎಲ್ಲರೂ ತುಂಬಾ ಸಂತೋಷದಿಂದ ಕಾಣುತ್ತಿದ್ದರು.

Read more Photos on
click me!

Recommended Stories