Diwali2021: ಸ್ಟನ್ನಿಂಗ್ ಲೆಹಂಗಾ ಧರಿಸಿ ಪಿಗ್ಗಿ ಹಬ್ಬಕ್ಕೆ ರೆಡಿಯಾಗಿದ್ದು ಹೀಗೆ

First Published | Nov 4, 2021, 1:19 PM IST
  • Diwali ಹಬ್ಬಕ್ಕೆ ಲೆಹಂಗಾದಲ್ಲಿ ಮಿಂಚಿದ ಬಾಲಿವುಡ್(Bollywood) ನಟಿ
  • Priyanka chopra fashion
  • ಹಬ್ಬದ ಉಡುಗೆಯಲ್ಲಿ ಪ್ರಿಯಾಂಕ(Priyanka chopra) ಮಿಂಚಿಂಗ್

ಪ್ರಿಯಾಂಕಾ ಚೋಪ್ರಾ ಜೋನಾಸ್(Priyanka Chopra) ಜಾಗತಿಕ ಐಕಾನ್ ಆಗಿದ್ದಾರೆ. ಹಾಲಿವುಡ್‌ನಲ್ಲಿಯೂ(Hollywood) ಮಿಂಚುತ್ತಿರುವ ನಟಿ ತನ್ನ ರೈಟ್ ಎಂದಿಗೂ ಮರೆಯುವುದಿಲ್ಲ. ದೀಪಾವಳಿಯ(Diwali) ಶುಭ ಸಂದರ್ಭದಲ್ಲಿ, ಪ್ರಿಯಾಂಕಾ ಅವರು ಪ್ರಪಂಚದಾದ್ಯಂತದ ತಮ್ಮ ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

ದೀಪಾವಳಿಗೆ ಪ್ರಿಯಾಂಕ ಚೋಪ್ರಾ ಕ್ಯೂಟ್ ಆಗಿ ರೆಡಿಯಾಗಿದ್ದರು. ಸ್ಟೈಲಿಷ್ ಲೆಹಂಗಾ(Lehanga) ಮತ್ತು ಒಡವೆ ಧರಿಸಿದ್ದ ನಟಿ ದೇಸಿ ಸ್ಟೈಲ್‌ನಲ್ಲಿ ಮಿಂಚಿದ್ದಾರೆ.

Tap to resize

ನಟಿ ಗೋಲ್ಡನ್ ಮತ್ತು ಬೀಜ್ ಲೆಹೆಂಗಾ, ಚಂದದ ಮಿರರ್ ವರ್ಕ್ ಚೋಲಿ ಮತ್ತು ಬ್ರೀಜಿ ಫ್ಲೋರಲ್ ಪ್ರಿಂಟೆಡ್ ದುಪಟ್ಟಾವನ್ನು ಧರಿಸಿದ್ದರು. ಸ್ಮೋಕಿ ಐ ಮೇಕಪ್, ಹೈಲೈಟರ್ ಮತ್ತು ನ್ಯೂಡ್ ಕಂದು ಬಣ್ಣದ ಲಿಪ್‌ಸ್ಟಿಕ್ ಹಚ್ಚಿದ್ದರು.

ಪೂರ್ಣ ಹಬ್ಬದ ಮೇಕ್ಅಪ್‌ನೊಂದಿಗೆ ಪ್ರಿಯಾಂಕಾ ಗ್ಲಾಮ್ ಅಂಶವನ್ನು ಹೆಚ್ಚಿಸಿದರು. ಅಷ್ಟೇ ಅಲ್ಲ ನಟಿ ಮ್ಯಾಚ್ ಕಿವಿಯೋಲೆಗಳನ್ನು ಧರಿಸಿದ್ದರು. ಮುತ್ತು ಮತ್ತು ವಜ್ರದ ಚೋಕರ್ ಅನ್ನು ಧರಿಸಿದ್ದರು.

ಫೋಟೋಗಳಲ್ಲಿ, ಪ್ರಿಯಾಂಕಾ ವೆಲ್ವೆಟ್ ಹಸಿರು ಪರದೆ ಮತ್ತು ದೀಪಾವಳಿ ದೀಪಗಳ ಹಿನ್ನೆಲೆಯಲ್ಲಿ ತಮ್ಮ ಸ್ಟೈಲಿಷ್ ಪೋಸ್ ಕೊಟ್ಟಿದ್ದಾರೆ. ದೀಪಾವಳಿ ಮುನ್ನಾದಿನದ ಶುಭಾಶಯಗಳು. ಎಲ್ಲರಿಗೂ ಪ್ರೀತಿ, ಬೆಳಕು ಮತ್ತು ಸಂತೋಷ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಲಂಡನ್‌ನಲ್ಲಿ ತನ್ನ ಚಿತ್ರೀಕರಣದ ವೇಳಾಪಟ್ಟಿಯನ್ನು ಮುಗಿಸಿದ ನಂತರ ಪ್ರಿಯಾಂಕಾ ಈಗ ಯುಎಸ್‌ಗೆ ಮರಳಿದ್ದಾರೆ. ನಟಿ ಸಿಟೆಡಾಲ್‌ಗೆ ಶೂಟಿಂಗ್ ಮಾಡುತ್ತಿದ್ದರು

ನಟಿ ಇತ್ತೀಚೆಗೆ ಪತಿ ನಿಕ್ ಜೋನಸ್ ಜೊತೆ ಲಾಸ್ ಏಂಜಾಲೀಸ್‌ನಲ್ಲಿ ಡೇಟಿಂಗ್ ಎಂಜಾಯ್ ಮಾಡಿದ್ದಾರೆ. ಈ ಸಂದರ್ಭ ನಟಿ ಹಸಿರು ಜಾಕೆಟ್ ಧರಿಸಿದ್ದರು

Latest Videos

click me!