ಕತ್ರಿನಾರ ಫೋನ್ ಭೂತ್‌ಗೆ ಪತಿಯಿಂದಲೇ ಮೊದಲ ವಿಮರ್ಶೆ: ಅಷ್ಷಕ್ಕೂ ವಿಕ್ಕಿ ಏನು ಹೇಳಿದ್ದಾರೆ?

Published : Nov 01, 2022, 04:25 PM IST

 ಕತ್ರಿನಾ ಕೈಫ್ (Katrina Kaif) ಈ ದಿನಗಳಲ್ಲಿ ತಮ್ಮ ಮುಂದಿನ 'ಫೋನ್ ಭೂತ್' (Phone Bhoot) ಕಾರಣದಿಂದ ಸುದ್ದಿಯಲ್ಲಿದ್ದಾರೆ. ಕತ್ರಿನಾರ ಜೊತೆ ಇಶಾನ್ ಖಟ್ಟರ್ (Ishaan Khatter) ಮತ್ತು ಸಿದ್ಧಾಂತ್ ಚತುರ್ವೇದಿ (Siddhant Chaturvedi) ಕೂಡ ಫೋನ್ ಭೂತ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಚಿತ್ರವು 4 ನವೆಂಬರ್ 2022 ರಂದು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ. ಈ ನಡುವೆ ವಿಕ್ಕಿ ಕೌಶಲ್‌ (Vicky Kaushal) ಈ ಸಿನಿಮಾದ ಬಗ್ಗೆ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಅಷ್ಷಕ್ಕೂ ಏನು ಹೇಳಿದ್ದಾರೆ ವಿಕ್ಕಿ ಕೌಶಲ್‌ ತಮ್ಮ ಪತ್ನಿ ಕತ್ರಿನಾರ ಸಿನಿಮಾದ ಬಗ್ಗೆ ಗೊತ್ತಾ?

PREV
18
ಕತ್ರಿನಾರ ಫೋನ್ ಭೂತ್‌ಗೆ ಪತಿಯಿಂದಲೇ ಮೊದಲ ವಿಮರ್ಶೆ: ಅಷ್ಷಕ್ಕೂ ವಿಕ್ಕಿ  ಏನು ಹೇಳಿದ್ದಾರೆ?

ವಿಕ್ಕಿ ಕೌಶಲ್ ಈಗಾಗಲೇ ಪತ್ನಿ ಕತ್ರಿನಾ ಕೈಫ್ ಅವರ ಹೊಸ ಚಿತ್ರ 'ಫೋನ್ ಭೂತ್' ಅನ್ನು ನೋಡಿದ್ದಾರೆ, ಮತ್ತು ಅವರು ಸಾಕಷ್ಟು ಪ್ರಭಾವಿತರಾಗಿದ್ದಾರೆ. ಚಿತ್ರದ ಬಗ್ಗೆ ತಮ್ಮ  ಆಲೋಚನೆಗಳನ್ನು  ನಟ ತಮ್ಮ Instagram ಖಾತೆಯಲ್ಲಿ ವ್ಯಕ್ತಪಡಿಸಿದ್ದಾರೆ.  .
.

28

ಸೋಮವಾರ (ಅಕ್ಟೋಬರ್ 31) ಮುಂಬೈನಲ್ಲಿ ನಡೆದ ಫೋನ್ ಭೂತ್‌ ಚಿತ್ರದ ಪ್ರದರ್ಶನಕ್ಕೆ ಕತ್ರಿನಾ ಜೊತೆಗೆ ವಿಕ್ಕಿ ಹಾಜರಾಗಿದ್ದರು ಮತ್ತು  ವಿಕ್ಕಿ ಕೌಶಲ್ ತಮ್ಮ Instagram ಸ್ಟೋರಿಯ ಮೂಲಕ ಪತ್ನಿ  ಕತ್ರಿನಾ ಕೈಫ್ ಅವರ ಚಲನಚಿತ್ರ ಬಗ್ಗೆ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ.  

38

'ಈ ಸಿನಿಮಾದಲ್ಲಿ ಫುಲ್ ಮಸ್ತಿ ಮತ್ತು ಹುಚ್ಚುತನವಿದೆ. ನಿಮ್ಮ ಹತ್ತಿರದ ಥಿಯೇಟರ್‌ಗಳಿಗೆ ಹೋಗಿ ನಕ್ಕುಬಿಡಿ' ಎಂದು ಫೋನ್ ಭೂತ್ ಪೋಸ್ಟರ್ ಅನ್ನು ಹಂಚಿಕೊಂಡ ವಿಕ್ಕಿ ಬರೆದಿದ್ದಾರೆ. ಕತ್ರಿನಾ, ಇಶಾನ್ ಮತ್ತು ಸಿದ್ಧಾಂತ್ಅವರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ಹೃದಯ ಮತ್ತು ಭೂತದ ಎಮೋಜಿಯನ್ನು ಸೇರಿಸಿದ್ದಾರೆ. 

48

ಗುರ್ಮೀತ್ ಸಿಂಗ್ ಫೋನ್ ಭೂತ್ ಅನ್ನು ನಿರ್ದೇಶಿಸಿದ್ದಾರೆ, ಇದನ್ನು ರವಿ ಶಂಕರನ್ ಮತ್ತು ಜಸ್ವಿಂದರ್ ಸಿಂಗ್ ಬಾತ್ ಕಥೆ ಬರೆದಿದ್ದಾರೆ. ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ನೇತೃತ್ವದ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರವು ನವೆಂಬರ್ 4, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
  

58

ಸಿದ್ಧಾಂತ್, ಕತ್ರಿನಾ ಮತ್ತು ಇಶಾನ್ ಬಿಗ್ ಬಾಸ್ 16 ಮತ್ತು ಕಾಫಿ ವಿತ್ ಕರಣ್ ಸೀಸನ್ 7 ನಲ್ಲಿ ಕಾಣಿಸಿಕೊಂಡರು ಮತ್ತು ಪರಸ್ಪರರ ಬಗ್ಗೆ ಕೆಲವು ತಮಾಷೆಯ ಸಂಗತಿಗಳನ್ನು  ಬಹಿರಂಗಪಡಿಸುವ ಮೂಲಕ ತಮ್ಮ ಚಲನಚಿತ್ರವನ್ನು ಪ್ರಚಾರ ಮಾಡಿದರು. 

68

ಕತ್ರಿನಾ ಕೈಫ್‌ ಅವರ  ಜೊತೆ ಕೆಲಸ ಮಾಡುವುದು ಅದ್ಭುತ ಅನುಭವ ಎಂದು ಸಿದ್ಧಾಂತ್ ಚತುರ್ವೇದಿ ಇತ್ತೀಚೆಗೆ ಸುದ್ದಿ ವೆಬ್‌ಸೈಟ್‌ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

78

ಅವಳು ಪಾಪದವರ ಹಾಗೇ ಕಾಣಿಸಬಹುದು, ಆದರೂ ಅವಳು ಮೋಸಗಾರ್ತಿ. ನಾವಿಬ್ಬರೂ ಜೂನಿಯರ್‌ಗಳಾದ್ದರಿಂದ ಅವಳು ನಮ್ಮನ್ನು ತುಂಬಾ ತಮಾಷೆ ಮಾಡುತ್ತಿದ್ದಳು.ಅವಳೊಂದಿಗೆ ಕೆಲಸ ಮಾಡುವುದು ಸಂತೋಷವಾಗಿತ್ತು; ಅವಳು ದಯೆ ಮತ್ತು ಕಾಳಜಿಯುಳ್ಳವಳು. ನಾನು ಅವಳಿಂದ ಬಹಳಷ್ಟು ಕಲಿತಿದ್ದೇನೆ. ನಾನು ಕೆಲಸ ಮಾಡಿದ ನಟಿಯರಲ್ಲಿ ಅವರು ಅತ್ಯಂತ ಸಮರ್ಪಿತ ನಟಿ ಎಂದು ನಾನು ನಂಬುತ್ತೇನೆ ಎಂದು ಸಿದ್ಧಾಂತ್ ಚತುರ್ವೇದಿ ಕತ್ರಿನಾ ಬಗ್ಗೆ ಹೇಳಿದ್ದಾರೆ.

88

ಕತ್ರಿನಾ ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ಅವರ ಸೂರ್ಯವಂಶಿಯಲ್ಲಿ ಕಾಣಿಸಿಕೊಂಡರು. ಅದೇ ಸಮಯದಲ್ಲಿ ಸಿದ್ಧಾಂತ್ ಚಲನಚಿತ್ರ ನಿರ್ಮಾಪಕ ಶಕುನ್ ಬಾತ್ರಾ ಅವರ ಗೆಹ್ರೈಯಾನ್‌ನಲ್ಲಿ ಕಾಣಿಸಿಕೊಂಡರು, ಮಿಶ್ರ ವಿಮರ್ಶೆಗಳನ್ನು ಗಳಿಸಿದರು. ಮತ್ತೊಂದೆಡೆ, ಇಶಾನ್ ಖಟ್ಟರ್, ಅನನ್ಯ ಪಾಂಡಾ ಜೊತೆಗೆ ಖಲಿ ಪೀಲಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು

Read more Photos on
click me!

Recommended Stories