ಇಬ್ಬರ ಹೆಂಡಿರ ಮುದ್ದಿನ ಗಂಡ; ಪತಿ ಎರಡನೇ ಮದ್ವೆಯಾಗಿದ್ದಕ್ಕೆ ಕಣ್ಣೀರಿಟ್ಟ ಪಾಯಲ್‌ ಮಲಿಕ್‌

Published : Jun 28, 2024, 09:15 AM ISTUpdated : Jun 28, 2024, 01:15 PM IST

ಬಿಗ್ ಬಾಸ್ OTT ಸೀಸನ್ 3 ವಿವಿಧ ಹಿನ್ನೆಲೆಯುಳ್ಳ ಸ್ಪರ್ಧಿಗಳನ್ನು ಒಳಗೊಂಡಿದೆ. ಆದರೆ, ಮೂವರು ಯೂಟ್ಯೂಬರ್  ಅರ್ಮಾನ್ ಮಲಿಕ್ ಮತ್ತು ಅವರ ಇಬ್ಬರು ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಅವರ ಕಾರಣದಿಂದಾಗಿ ಈ ಕಾರ್ಯಕ್ರಮವು ಪ್ರಸ್ತುತ ಹೆಚ್ಚು ಟಿಆರ್‌ಪಿ ಗಳಿಸುತ್ತಿದೆ. ಬಿಡುಗಡೆಯಾದ ಮುಂದಿನ ಸಂಚಿಕೆಯ ಪ್ರೋಮೋದಲ್ಲಿ ಪಾಯಲ್ ಮಲಿಕ್ ಪತಿ ಅರ್ಮಾನ್ ಮತ್ತು ಕೃತಿಕಾ ಅವರ ಮದುವೆಯ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.

PREV
110
ಇಬ್ಬರ ಹೆಂಡಿರ ಮುದ್ದಿನ ಗಂಡ; ಪತಿ ಎರಡನೇ ಮದ್ವೆಯಾಗಿದ್ದಕ್ಕೆ ಕಣ್ಣೀರಿಟ್ಟ  ಪಾಯಲ್‌ ಮಲಿಕ್‌

ಬಿಗ್ ಬಾಸ್ OTT ಸೀಸನ್‌ನಲ್ಲಿ ಅರ್ಮಾನ್ ಮಲಿಕ್ ಮತ್ತು ಅವರ ಇಬ್ಬರು ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಭಾಗವಹಿಸಿರುವುದು ಮುಖ್ಯ ವಿಷಯವಾಗಿದೆ. ಆದರೆ ಅನೇಕ ಟೆಲಿವಿಷನ್ ಸೆಲೆಬ್ರಿಟಿಗಳು ಮತ್ತು ವೀಕ್ಷಕರು ಇವರ  ಭಾಗವಹಿಸುವಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದಾರೆ, ಶೋ ಬಹುಪತ್ನಿತ್ವವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದಾರೆ.

210

ಈ ರಿಯಾಲಿಟಿ ಶೋ ಸಂಚಿಕೆಯ ಪ್ರೋಮೋದಲ್ಲಿ ಅರ್ಮಾನ್ ಮಲಿಕ್ ಮೊದಲ ಪತ್ನಿ ಪಾಯಲ್, ಕೃತಿಕಾ ಮತ್ತು ಅವರ ಪತಿಯ ಎರಡನೇ ಮದುವೆ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದಾರೆ.

310

ಬಿಗ್ ಬಾಸ್ OTT 3 ನಲ್ಲಿ ಕೃತಿಕಾ ಮಲಿಕ್ ಅವರೊಂದಿಗೆ ಅರ್ಮಾನ್ ಅವರ ಎರಡನೇ ಮದುವೆಯನ್ನು ವಿವರಿಸುವಾಗ ಪಾಯಲ್ ಮಲಿಕ್ ಅಳುತ್ತಾ ತಮ್ಮ ಅನನ್ಯ ಸಂಬಂಧದ ನೋವು ಮತ್ತು ಕ್ಲಿಷ್ಟತೆ ಬಗ್ಗೆ ದುಃಖ ತೋಡಿಕೊಂಡಿದ್ದಾರೆ.

 

410

ಅರ್ಮಾನ್ ಮತ್ತು ಕೃತಿಕಾ ಒಟ್ಟಿಗೆ ಹೇಗೆ ಹೊರಗೆ ಹೋದರು ಮತ್ತು ಮದುವೆಯಾಗಲು ನಿರ್ಧರಿಸಿದರು ಮತ್ತು ವಿವಾಹಿತ ಜೋಡಿಯಾಗಿ ಮರಳಿದರು ಎಂಬುದನ್ನು ಪಾಯಲ್ ವಿವರಿಸಿದ್ದಾರೆ. ಅವರಿಬ್ಬರ ನಿರ್ಧಾರದಿಂದ ಪಾಯಲ್ ಎಷ್ಟು ದುಃಖಿತರಾಗಿದ್ದಾರೆಂಬುವುದು ಇದರಲ್ಲಿ ಅರ್ಥವಾಗುತ್ತದೆ.

510

ನಿನ್ನ ಪತಿಯನ್ನು ಮದುವೆಯಾಗುವ ಮೂಲಕ ಕೃತಿಕಾ ದ್ರೋಹ ಬಗೆದಿದ್ದಾರಾ ಎಂದು ಪಾಯಲ್‌ಗೆ ಇನ್ನೊಬ್ಬ ಸ್ವರ್ಧಿ ಮೋನಿಶಾ ಖಟ್ವಾನಿ ಪ್ರಶ್ನಿಸಿದಾಗ, ಭಾವನಾತ್ಮಕ ಕ್ಷಣಕ್ಕೆ ಶೋ ಸಾಕ್ಷಿಯಾಯಿತು. ಪಾಯಲ್ ಈ ಪ್ರಶ್ನೆಗೆ ಉತ್ತರಿಸಲು ಹೆಣಗಾಡಿದರು.

610

ಪಾಯಲ್ ಅವರ ಭಾವನಾತ್ಮಕ ಪ್ರತಿಕ್ರಿಯೆಯನ್ನು ಗಮನಿಸಿ ಕೃತಿಕಾ ಅವರೊಂದಿಗೆ  ಅರ್ಮಾನ್  ಅಳುತ್ತಿದ ಪಾಯಲ್ ಅವರನ್ನು ಸಮಾಧಾನಪಡಿಸಿದರು.  ಅವರನ್ನು ಸಾಂತ್ವನಗೊಳಿಸಲು  ಮನೆಯ ಸದಸ್ಯರು ಒಟ್ಟುಗೂಡಿ ಒಗ್ಗಟ್ಟಾಗಿ ಬೆಂಬಲ ಸೂಚಿಸಿದರು. 

710

ಅರ್ಮಾನ್ ಮತ್ತು ಪಾಯಲ್ ಅವರು 6 ದಿನ ಪ್ರೀತಿಸಿ, ಏಳನೇ ದಿನ ದಾಂಪತ್ಯಕ್ಕೆ ಕಾಲಿಟ್ಟರು. ಪ್ರಣಯವನ್ನು ಹಂಚಿಕೊಂಡಿದ್ದಾರೆ ಎಂದು ಸ್ವತಃ ಅರ್ಮಾನ್‌ ಹಂಚಿಕೊಂಡಿದ್ದರು.

810

ಕೃತಿಕಾ ಆರಂಭದಲ್ಲಿ ಪಾಯಲ್ ಅವರ ಸ್ನೇಹಿತೆ. ಒಮ್ಮೆ ಎಲ್ಲರೂ ಒಟ್ಟಾಗಿ ಹೋಗಬೇಕಿದ್ದ ಪ್ರವಾಸ ರದ್ದುಗೊಳಿಸಿದ ನಂತರ ಮಲ್ಲಿಕ್ ಅವರ ಮನೆಯಲ್ಲಿಯೇ ಇದ್ದರು. ಈ ಸಮಯದಲ್ಲಿ ಅರ್ಮಾನ್ ಜೊತೆ ಪ್ರೀತಿಯಲ್ಲಿ ಬಿದ್ದ ಕೃತಿಕಾ, ಬಹುಬೇಗ ಮದುವೆಯಾಗಲು ನಿರ್ಧರಿಸಿದರು.

910

ಪಾಯಲ್ ಅವರು ಕೃತಿಕಾ ಮತ್ತು ಅರ್ಮಾನ್ ಅವರ ಚಿತ್ರಗಳನ್ನು ನೋಡಿದಾಗ ಅವರ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ ಆದರೆ ಕ್ರಮೇಣ ಅವರ ಮದುವೆಯನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾದಂತೆ ಕಾಣಿಸುತ್ತದೆ.

1010

ಬಿಗ್ ಬಾಸ್ OTT ನಲ್ಲಿ ಮೂವರ ಭಾಗವಹಿಸುವಿಕೆಯು ಟೀಕೆಗೆ ಒಳಗಾಗಿದ್ದರೂ, ವೀಕ್ಷಕರನ್ನು ಈ ಶೋನತ್ತೆ ಸೆಳೆಯುವಲ್ಲಿ ಸಫಲವಾಗಿದೆ. ಈ ಇಬ್ಬರ ಹೆಂಡಿರ ಮುದ್ದಿನ ಗಂಡನ ರಿಯಾಲಿಟಿ ಶೋನ ಟಿಆರ್‌ಪಿ ಹೆಚ್ಚುವಂತೆ ಮಾಡಿದೆ.

click me!

Recommended Stories