ಅದಿತಿ ರಾವ್ ಹೈದರಿ ಎರಡು ರಾಜ ಕುಟುಂಬಗಳ ಜೊತೆ ಸಂಬಂಧ ಹೊಂದಿದ್ದಾರೆ. ಮೊಹಮ್ಮದ್ ಸಾಹೇಲ್ ಅಕ್ಬರ್ ಹೈದರಿ ಮತ್ತು ನಪರ್ತಿ ಕುಟುಂಬದ ಮಾಜಿ ರಾಜ ಜೆ.ರಾಮೇಶ್ವರ ರಾವ್. ಅದಿತಿ ಅಕ್ಬರ್ ಹೈದರಿ ಅವರ ಮೊಮ್ಮಗಳು. ಅದಿತಿಯ ತಾಯಿಯ ಅಜ್ಜ ಜೆ.ರಾಮೇಶ್ವರ ರಾವ್ ತೆಲಂಗಾಣದ ವನಪರ್ತಿಯ ರಾಜ.
ದಿವಂಗತ ಇರ್ಫಾನ್ ಖಾನ್ ಅವರ ನಿಜವಾದ ಹೆಸರು ಸಾಹಬ್ಜಾದೆ ಇರ್ಫಾನ್ ಅಲಿ ಖಾನ್. ನಟನ ತಾಯಿ ಸಯೀದಾ ಬೇಗಂ ಖಾನ್ ರಾಜಮನೆತನದ ಟೋಂಕ್ ಹಕೀಮ್ ಕುಟುಂಬದಿಂದ ಬಂದವರು.
ಮನೀಷಾ ಕೊಯಿರಾಲಾ ನೇಪಾಳದ ರಾಜಮನೆತನದವರು. ಅವರ ತಂದೆ ಪ್ರಕಾಶ್ ಕೊಯಿರಾಲಾ ನೇಪಾಳ ಸರ್ಕಾರದಲ್ಲಿ ಪರಿಸರ ಸಚಿವರು ಆಗಿದ್ದರು. ಮನೀಷಾರ ಅಜ್ಜ ಬಿಪಿ ಅಕಾ ಬಿಸ್ವೇಶರ್ ಪ್ರಸಾದ್ ಕೊಯಿರಾಲಾ 1950 ಮತ್ತು 60ರ ದಶಕಗಳಲ್ಲಿ ನೇಪಾಳದ ಪ್ರಧಾನ ಮಂತ್ರಿಯಾಗಿದ್ದರು
ನಾಸಿರುದ್ದೀನ್ ಶಾ ನವಾಬರ ಕುಟುಂಬದಲ್ಲಿ ಜನಿಸಿದರು. ನಟನ ಮುತ್ತಜ್ಜ ಜಾನ್-ಫಿಶನ್ ಖಾನ್, ಅಫ್ಘಾನ್ ಸೇನಾಧಿಕಾರಿಯಾಗಿದ್ದು, ಅವರು ಸರ್ಧಾನ ನವಾಬ ಆಗಿದ್ದರು.
ಆಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಕೂಡ ರಾಯಲ್ ಫ್ಯಾಮಿಲಿಯವರು. ಕಿರಣ್ ರಾವ್ ಅವರ ಮುತ್ತಜ್ಜ ರಾಮೇಶ್ವರ ರಾವ್ ತೆಲಂಗಾಣದ ಮಹಾಬುಬ್‌ನಗರದ ಮಹಾರಾಜರಾಗಿದ್ದರು. ಇವರು ಮತ್ತು ಅದಿತಿ ರಾವ್ ಹೈದರಿ ಕಸಿನ್ಸ್.
ಪರ್ವೀನ್ ಬಾಬಿ ರಾಜಮನೆತನಕ್ಕೆ ಸೇರಿದ ಮತ್ತೊಬ್ಬ ಬಾಲಿವುಡ್ ಸೆಲೆಬ್ರಿಟಿ. ನಟಿ ಜುನಾಗಢದ ಬಾಬಿ ರಾಜವಂಶದವರು. ಪರ್ವೀನ್ ಬಾಬಿಯ ತಂದೆ ವಾಲಿ ಮೊಹಮ್ಮದ್ ಖಾನ್ ಬಾಬಿ ಜುನಾಗಢ ನವಾಬನೊಂದಿಗೆ ಆಡಳಿತಗಾರರಾಗಿದ್ದರು.
'ಚಕ್ ದೇ ಇಂಡಿಯಾ' ಖ್ಯಾತಿಯ ನಟಿ ಮತ್ತು ಕ್ರಿಕೆಟಿಗ ಜಹೀರ್ ಖಾನ್ ಪತ್ನಿ ಸಾಗರಿಕಾ ಕೊಲ್ಹಾಪುರದ ಕಹಾಲ್ ರಾಜಮನೆತನದ ಮಗಳು. ಅವರ ತಂದೆ ಹೆಸರು ವಿಜಯ್ ಸಿಂಗ್ ಘಾಟ್ಗೆ.