ಈ ಘಟನೆ ಬಗ್ಗೆ ಎರಡು ದಿನಗಳ ಹಿಂದೆ ಮೆಗಾಸ್ಟಾರ್ ಚಿರಂಜೀವಿ ಪ್ರತಿಕ್ರಿಯಿಸಿ, ''ನಮ್ಮ ಮಗ ಮಾರ್ಕ್ ಶಂಕರ್ ಮನೆಗೆ ಬಂದಿದ್ದಾನೆ. ಆದ್ರೆ ಇನ್ನೂ ಚೇತರಿಸಿಕೊಳ್ಳಬೇಕು. ನಮ್ಮ ಕುಲದೇವರಾದ ಆಂಜನೇಯ ಸ್ವಾಮಿಯ ದಯೆಯಿಂದ, ಕೃಪೆಯಿಂದ ಬೇಗ ಗುಣಮುಖನಾಗಿ ಮೊದಲಿನ ತರಾನೇ ಇರ್ತಾನೆ. ನಾಳೆ ಹನುಮಂತ ಜಯಂತಿ, ಆ ದೇವರು ದೊಡ್ಡ ಅಪಾಯದಿಂದ, ಒಂದು ದುಃಖದಿಂದ ಆ ಮಗುವನ್ನು ಕಾಪಾಡಿ ನಮಗೆ ಆಸರೆಯಾಗಿದ್ದಾನೆ. ಈ ಸಂದರ್ಭದಲ್ಲಿ ಆಯಾ ಊರುಗಳಲ್ಲಿ, ಆಯಾ ಪ್ರದೇಶಗಳಲ್ಲಿ ಮಾರ್ಕ್ ಶಂಕರ್ ಬೇಗ ಗುಣಮುಖನಾಗಲಿ ಅಂತ ಪ್ರತಿಯೊಬ್ಬರೂ ನಮ್ಮ ಕುಟುಂಬಕ್ಕೆ ಬೆಂಬಲವಾಗಿ ನಿಂತು ಆ ಮಗುವಿಗಾಗಿ ಪ್ರಾರ್ಥನೆ ಮಾಡ್ತಿದ್ದಾರೆ, ಆಶೀರ್ವಾದ ಮಾಡ್ತಿದ್ದಾರೆ. ನನ್ನ ಕಡೆಯಿಂದ, ತಮ್ಮ ಕಲ್ಯಾಣ್ ಬಾಬು ಕಡೆಯಿಂದ, ನಮ್ಮ ಕುಟುಂಬದ ಕಡೆಯಿಂದ ನಿಮ್ಮೆಲ್ಲರಿಗೂ ಧನ್ಯವಾದಗಳು'' ಅಂತ ಚಿರಂಜೀವಿ ಟ್ವೀಟ್ ಮಾಡಿದ್ದಾರೆ.