ಅಲ್ಲಿಯವರೆಗೆ ಚಿರಂಜೀವಿ ತರಹ ಡಾನ್ಸ್, ಫೈಟ್ ಮಾಡುವವರು ಇರಲಿಲ್ಲ, ಎನ್ಟಿಆರ್, ಎಎನ್ಆರ್, ಕೃಷ್ಣ, ಕೃಷ್ಣಂರಾಜು ಜನರೇಷನ್ ಮುಗಿದುಹೋಯಿತು. ಚಿರಂಜೀವಿ ಫ್ರೆಶ್ ಆಗಿ ಬಂದರು. ಧೂಳೆಬ್ಬಿಸಿದರು. ಅವರಿಗೆ ಪೈಪೋಟಿಯಾಗಿ ತನ್ನ ಸಿನಿಮಾಗಳು ಕೂಡ ಓಡಿದ್ದರಿಂದ ಜನರು, ಇಂಡಸ್ಟ್ರಿ ಪೈಪೋಟಿ ಎಂದು ಭಾವಿಸಿತೇ ಹೊರತು, ನಾನು ಯಾವಾಗಲೂ ಚಿರಂಜೀವಿಗೆ ಪೈಪೋಟಿ ಎಂದು ಭಾವಿಸಲಿಲ್ಲ. ಅಸಲಿಗೆ ಆ ಆಲೋಚನೆಯೇ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಸುಮನ್. ಆರ್ಟಿವಿಗೆ ನೀಡಿದ ಇಂಟರ್ವ್ಯೂನಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.